ವಾಣಿಜ್ಯ

ಬ್ರಿಟನ್‌ನ ಐಕಾನಿಕ್ ಕಂಟ್ರಿ ಕ್ಲಬ್ ಸ್ಟೋಕ್ ಪಾರ್ಕ್ ಖರೀದಿಸಿದ ಮುಕೇಶ್ ಅಂಬಾನಿ

Lingaraj Badiger

ನವದೆಹಲಿ: ಬಿಲಿಯನೇರ್ ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಬ್ರಿಟನ್‌ನ ಐಕಾನಿಕ್ ಕಂಟ್ರಿ ಕ್ಲಬ್ ಮತ್ತು ಐಷಾರಾಮಿ ಗಾಲ್ಫ್ ರೆಸಾರ್ಟ್ ಸ್ಟೋಕ್ ಪಾರ್ಕ್ ಅನ್ನು 57 ಮಿಲಿಯನ್ ಪೌಂಡ್‌ಗಳಿಗೆ(ಸುಮಾರು 592 ಕೋಟಿ ರೂ.) ಖರೀದಿಸಿದೆ.

ಹೋಟೆಲ್ ಮತ್ತು ಗಾಲ್ಫ್ ಕೋರ್ಸ್ ಹೊಂದಿರುವ ಬ್ರಿಟನ್ ಮೂಲದ ಸಂಸ್ಥೆಯು ರಿಲಯನ್ಸ್ ನ ಗ್ರಾಹಕ ಮತ್ತು ಆತಿಥ್ಯ ಸ್ವತ್ತುಗಳನ್ನು ಹೆಚ್ಚಿಸುತ್ತದೆ ಎಂದು ರಿಲಯನ್ಸ್ ಗುರುವಾರ ಪ್ರಕಟಣೆಯಲ್ಲಿ ತಿಳಿಸಿದೆ.

ಏಷ್ಯಾದ ಅತ್ಯಂತ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಅವರು ಇತ್ತೀಚಿಗೆ ಬ್ರಿಟನ್ ನ ಸಾಂಪ್ರದಾಯಿಕ ಆಟಿಕೆ ಮಳಿಗೆ ಹ್ಯಾಮ್ಲಿಸ್ ಅನ್ನು ಖರೀದಿಸಿದ್ದರು. ಈಗ ಮತ್ತೊಂದು ಐಷಾರಾಮಿ ಆಸ್ತಿ ಖರೀದಿಸಿದ್ದಾರೆ.

ಸ್ಟೋಕ್ ಪಾರ್ಕ್ ಲಿಮಿಟೆಡ್ 27 ಚಾಂಪಿಯನ್ ಶಿಪ್ ಗಾಲ್ಫ್ ಕೋರ್ಸ್ ಹಾಗೂ 49 ಐಷಾರಾಮಿ ಬೆಡ್ ರೂಮ್ ದಿರುವ ಹೋಟೆಲ್ ಆಗಿದ್ದು, 13 ಟೆನ್ನಿಸ್ ಕೋರ್ಟ್ ಹಾಗೂ 14 ಎಕರೆ ಖಾಸಗಿ ಪಾರ್ಕ್ ಅನ್ನು ಹೊಂದಿದೆ.

SCROLL FOR NEXT