ಉಬರ್ ಸಾಂದರ್ಭಿಕ ಚಿತ್ರ 
ವಾಣಿಜ್ಯ

ತನ್ನ ಒಂದೂವರೆ ಲಕ್ಷ ಚಾಲಕರ ಲಸಿಕೆಗಾಗಿ ನಗದು ಪ್ರೋತ್ಸಾಹ ಧನ ಪ್ರಕಟಿಸಿದ ಉಬರ್!

ಮುಂದಿನ ಆರು ತಿಂಗಳಲ್ಲಿ ತನ್ನ ಒಂದೂವರೆ ಲಕ್ಷ ಚಾಲಕರು ಕೋವಿಡ್-19 ಲಸಿಕೆ ಪಡೆಯಲು 18.5 ಕೋಟಿ ಪ್ರೋತ್ಸಾಹಕ  ಧನವನ್ನು ಉಬರ್ ಕಂಪನಿ  ಶುಕ್ರವಾರ ಪ್ರಕಟಿಸಿದೆ.

ಬೆಂಗಳೂರು: ಮುಂದಿನ ಆರು ತಿಂಗಳಲ್ಲಿ ತನ್ನ ಒಂದೂವರೆ ಲಕ್ಷ ಚಾಲಕರು ಕೋವಿಡ್-19 ಲಸಿಕೆ ಪಡೆಯಲು 18.5 ಕೋಟಿ ಪ್ರೋತ್ಸಾಹಕ ಧನವನ್ನು ಉಬರ್ ಕಂಪನಿ  ಶುಕ್ರವಾರ ಪ್ರಕಟಿಸಿದೆ.

ಎರಡು ಬಾರಿ ಕೋವಿಡ್ ಲಸಿಕೆ ಹಾಕಿಸಿಕೊಂಡ ಕಾರು, ಆಟೋ ಮತ್ತು ಮೋಟೋ ಚಾಲಕರು ಮಾನ್ಯಗೊಂಡ ಡಿಜಿಟಲ್ ವ್ಯಾಕ್ಸಿನೇಷನ್ ಪ್ರಮಾಣಪತ್ರಗಳನ್ನು ತೋರಿಸಿದರೆ 400 ರೂ. ಪಡೆಯಲು ಅರ್ಹರಾಗಿರುತ್ತಾರೆ ಎಂದು ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ.

ನಮ್ಮ ಎಲ್ಲಾ ಉತ್ಪನ್ನಗಳ ಮಾರ್ಗಗಳಲ್ಲಿನ ಡ್ರೈವರುಗಳಿಗೆ ಈ ಕಾರ್ಯಕ್ರಮದ ಬಗ್ಗೆ ತಿಳಿಸಲು ಶೀಘ್ರದಲ್ಲಿಯೇ ಆರಂಭಿಸಲಾಗುವುದು ಮತ್ತು ಲಸಿಕೆಯನ್ನು ಪಡೆಯುವಂತೆ ಪ್ರೋತ್ಸಾಹಿಸಲಾಗುವುದು ಎಂದು ಉಬರ್ ಇಂಡಿಯಾ ದಕ್ಷಿಣ ಏಷ್ಯಾ ಡ್ರೈವರ್ ಆಫರೇಷನ್
ಮತ್ತು ಸಪ್ಲೈ ಮುಖ್ಯಸ್ಥ ಪವನ್ ವೈಶ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT