ವಾಣಿಜ್ಯ

ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇಕಡಾ 5.59ಕ್ಕೆ ಕುಸಿತ

Lingaraj Badiger

ನವದೆಹಲಿ: ಮುಖ್ಯವಾಗಿ ಆಹಾರ ಪದಾರ್ಥಗಳ ಬೆಲೆ ಕಡಿಮೆಯಾದ ಪರಿಣಾಮ ಜೂನ್‌ನಲ್ಲಿ ಶೇಕಡಾ 6.26ರಷ್ಟಿದ್ದ ಚಿಲ್ಲರೆ ಹಣದುಬ್ಬರವು ಜುಲೈನಲ್ಲಿ ಶೇ. 5.59ಕ್ಕೆ ಇಳಿದಿದೆ ಎಂದು ಸರ್ಕಾರಿ ಅಂಕಿ-ಅಂಶಗಳು ಮಾಹಿತಿ ನೀಡಿವೆ.

ಗ್ರಾಹಕ ಬೆಲೆ ಸೂಚ್ಯಂಕ(ಸಿಪಿಐ) ಆಧಾರಿತ ಹಣದುಬ್ಬರ ಜೂನ್ ನಲ್ಲಿ ಶೇ. 6.26 ಮತ್ತು ಜುಲೈ 2020 ರಲ್ಲಿ ಶೇಕಡಾ 6.73 ರಷ್ಟಿತ್ತು.

ರಾಷ್ಟ್ರೀಯ ಅಂಕಿಅಂಶ ಕಚೇರಿ(NSO) ಗುರುವಾರ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ, ಜುಲೈ 2021 ರ ಆಹಾರ ಹಣದುಬ್ಬರವು ಜೂನ್ 2021 ರಲ್ಲಿದ್ದ ಶೇಕಡಾ 5.15 ರಿಂದ 3.96 ಕ್ಕೆ ಇಳಿದಿದ್ದರಿಂದ ಚಿಲ್ಲರೆ ಹಣದುಬ್ಬರವು ಮುಖ್ಯವಾಗಿ ಆಹಾರ ಬೆಲೆಗಳ ಕುಸಿತದಿಂದಾಗಿ ಕಡಿಮೆಯಾಗಿದೆ. 

ಇನ್ನು ಮೇ 2021ಕ್ಕೆ ಹೋಲಿಸಿದರೆ, ಚಿಲ್ಲರೆ ಹಣದುಬ್ಬರವು ಮೂರು ತಿಂಗಳಲ್ಲಿ ಅತ್ಯಂತ ಕಡಿಮೆ ಮಟ್ಟವನ್ನು ತಲುಪಿದೆ. ಕಳೆದ ಮೇ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ಶೇ.6.3ಕ್ಕೆ  ಏರಿಕೆಯಾಗಿತ್ತು.

ಈ ತಿಂಗಳ ಆರಂಭದಲ್ಲಿ, ಆರ್‌ಬಿಐ ಸಿಪಿಐ ಹಣದುಬ್ಬರವನ್ನು 2021-22ರ ಅವಧಿಯಲ್ಲಿ ಶೇ. 5.7, ಎರಡನೇ ತ್ರೈಮಾಸಿಕದಲ್ಲಿ 5.9 ಶೇಕಡಾ, ಮೂರನೇಯಲ್ಲಿ ಶೇ. 5.3 ಮತ್ತು ನಾಲ್ಕನೇ ತ್ರೈಮಾಸಿಕದಲ್ಲಿ ಶೇಕಡಾ 5.8 ರಷ್ಟಿದ್ದು, ಅಪಾಯಗಳನ್ನು ಸಮತೋಲನಗೊಳಿಸಿದೆ.

SCROLL FOR NEXT