ಸಾಂದರ್ಭಿಕ ಚಿತ್ರ 
ವಾಣಿಜ್ಯ

ವಿಮಾನ ಪ್ರಯಾಣ ಮತ್ತಷ್ಟು ದುಬಾರಿ: ದೇಶಿ ವಿಮಾನ ದರಗಳ ಮಿತಿ ಶೇ.9.83 ರಿಂದ 12.82ಕ್ಕೆ ಹೆಚ್ಚಳ

ಕೋವಿಡ್ ಸಂಕಷ್ಟದ ನಡುವೆ ದೇಶಿ ವಿಮಾನ ಪ್ರಮಾಣ ಮತ್ತಷ್ಟು ದುಬಾರಿಯಾಗುತ್ತಿದ್ದು, ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ವಿಮಾನ ದರಗಳ ಮೇಲಿನ ಮಿತಿಯನ್ನು ಶೇ. 9.83 ರಿಂದ ಶೇ. 12.82ಕ್ಕೆ ಹೆಚ್ಚಿಸಿದೆ.

ನವದೆಹಲಿ: ಕೋವಿಡ್ ಸಂಕಷ್ಟದ ನಡುವೆ ದೇಶಿ ವಿಮಾನ ಪ್ರಮಾಣ ಮತ್ತಷ್ಟು ದುಬಾರಿಯಾಗುತ್ತಿದ್ದು, ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ವಿಮಾನ ದರಗಳ ಮೇಲಿನ ಮಿತಿಯನ್ನು ಶೇ. 9.83 ರಿಂದ ಶೇ. 12.82ಕ್ಕೆ ಹೆಚ್ಚಿಸಿದೆ.

ಕೊರೋನಾ ವೈರಸ್‌ನಿಂದಾಗಿ ಎರಡು ತಿಂಗಳ ಲಾಕ್‌ಡೌನ್ ನಂತರ, ಮೇ 25, 2020 ರಂದು ವಿಮಾನ ಸೇವೆಗಳನ್ನು ಪುನರಾರಂಭಿಸಿದಾಗ ವಿಮಾನಯಾನದ ಅವಧಿಯ ಆಧಾರದ ಮೇಲೆ ಕೇಂದ್ರ ಸರ್ಕಾರ ಟಿಕೆಟ್ ದರಗಳ ಮೇಲೆ ನಿಯಂತ್ರಣ ಹೇರಿತ್ತು.

ಕೊರೋನಾ ವೈರಸ್ ಸಂಬಂಧಿತ ಪ್ರಯಾಣ ನಿರ್ಬಂಧಗಳಿಂದಾಗಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ವಿಮಾನಯಾನ ಸಂಸ್ಥೆಗಳಿಗೆ ಸಹಾಯ ಮಾಡಲು ಕನಿಷ್ಠ ದರ ನಿಗದಿಪಡಿಸಲಾಗಿದೆ.

ಆಗಸ್ಟ್ 12, 2021 ರ ಆದೇಶದಲ್ಲಿ, ವಿಮಾನಯಾನ ಸಚಿವಾಲಯವು 40 ನಿಮಿಷಗಳ ಅವಧಿಯ ವಿಮಾನ ಪ್ರಯಾಣದ ದರದ ಮಿತಿಯನ್ನು ರೂ 2,600 ರಿಂದ ರೂ 2,900 ಕ್ಕೆ ಹೆಚ್ಚಿಸಿದೆ - ಇದು ಶೇಕಡಾ 11.53 ರಷ್ಟು ಹೆಚ್ಚಳವಾಗಿದೆ.

ಇನ್ನು 40 ನಿಮಿಷಗಳ ಅವಧಿಯ ವಿಮಾನ ಪ್ರಮಾಣ ದರದ ಮೇಲಿನ ಮಿತಿಯನ್ನು ಅನ್ನು ಶೇ. 12.82 ರಷ್ಟು ಹೆಚ್ಚಿಸಿ 8,800 ರೂ.

ಅಂತೆಯೇ, 40-60 ನಿಮಿಷಗಳ ನಡುವಿನ ಅವಧಿಯ ವಿಮಾನ ಪ್ರಯಾಣದ ದರವನ್ನು ಈಗ ರೂ 3,300 ರ ಬದಲಾಗಿ ರೂ 3,700ಕ್ಕೆ ಹೆಚ್ಚಿಸಲಾಗಿದೆ ಎಂದು ಸಚಿವಾಲಯ ಆದೇಶದಲ್ಲಿ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ