ಸಾಂದರ್ಭಿಕ ಚಿತ್ರ 
ವಾಣಿಜ್ಯ

ಮೊದಲ ಬಾರಿಗೆ ಜಗತ್ತಿನ ಆರ್ಥಿಕತೆ 100 ಟ್ರಿಲಿಯನ್‌ ಡಾಲರ್ ದಾಟಲಿದೆ: ವರದಿ

ಇದೇ ಮೊದಲ ಬಾರಿಗೆ ವಿಶ್ವದ ಆರ್ಥಿಕತೆಯು ಮುಂದಿನ ವರ್ಷ 100 ಟ್ರಿಲಿಯನ್‌ ಡಾಲರ್‌ (ಸುಮಾರು 7,539 ಲಕ್ಷ ಕೋಟಿ ರೂ) ದಾಟಲಿದೆ ಎಂದು ವರದಿಯೊಂದು ಹೇಳಿದೆ.

ಲಂಡನ್‌: ಇದೇ ಮೊದಲ ಬಾರಿಗೆ ವಿಶ್ವದ ಆರ್ಥಿಕತೆಯು ಮುಂದಿನ ವರ್ಷ 100 ಟ್ರಿಲಿಯನ್‌ ಡಾಲರ್‌ (ಸುಮಾರು 7,539 ಲಕ್ಷ ಕೋಟಿ ರೂ) ದಾಟಲಿದೆ ಎಂದು ವರದಿಯೊಂದು ಹೇಳಿದೆ.

ಬ್ರಿಟನ್‌ನ ಆರ್ಥಿಕ ಸಲಹಾ ಸಂಸ್ಥೆ 'ಸಿಇಬಿಆರ್‌' ಅಂದಾಜಿಸಿರುವಂತೆ ಇದೇ ಮೊದಲ ಬಾರಿಗೆ ವಿಶ್ವದ ಆರ್ಥಿಕತೆಯು ಮುಂದಿನ ವರ್ಷ 100 ಟ್ರಿಲಿಯನ್‌ ಡಾಲರ್‌ (ಸುಮಾರು 7,539 ಲಕ್ಷ ಕೋಟಿ ರೂ) ದಾಟಲಿದೆ ಎನ್ನಲಾಗಿದೆ. ಆರ್ಥಿಕತೆಯಲ್ಲಿ ಅಮೆರಿಕವನ್ನು ಹಿಂದಿಟ್ಟು ನಂಬರ್ 1 ಪಟ್ಟಕ್ಕೆ ಏರಲು ಚೀನಾಗೆ ಮತ್ತಷ್ಟು ಸಮಯ ಬೇಕಾಗಲಿದೆ ಎನ್ನಲಾಗಿದ್ದು, ಡಾಲರ್‌ನ ಲೆಕ್ಕಾಚಾರದಲ್ಲಿ ಚೀನಾ 2030ರ ವೇಳೆಗೆ ಜಗತ್ತಿನ ಅತಿ ದೊಡ್ಡ ಆರ್ಥಿಕತೆಯನ್ನು ಹೊಂದಲಿದೆ ಎಂದು ಹೇಳಲಾಗಿದೆ. 

ಕಳೆದ ವರ್ಷದ ವಿಶ್ವ ಆರ್ಥಿಕತೆಯ ವರದಿಯಲ್ಲಿ ಅಂದಾಜಿಸಿರುವುದಕ್ಕಿಂತ ಎರಡು ವರ್ಷ ತಡವಾಗಿ ಚೀನಾ ಆರ್ಥಿಕತೆಯಲ್ಲಿ ಮುಂಚೂಣಿ ಸ್ಥಾನಕ್ಕೇರಲಿದೆ. ಇನ್ನು ಭಾರತವು ಮುಂದಿನ ವರ್ಷ ಫ್ರಾನ್ಸ್‌ಗಿಂತ ಮುಂದೆ ಸಾಗಲಿದ್ದು, 2023ರಲ್ಲಿ ಬ್ರಿಟನ್‌ ಅನ್ನು ದಾಟಿ ಜಗತ್ತಿನ ಆರನೇ ಅತಿ ದೊಡ್ಡ ಆರ್ಥಿಕತೆ ಸ್ಥಾನವನ್ನು ಮತ್ತೆ ಸಾಧಿಸಲಿದೆ ಎಂದು ಸಿಇಬಿಆರ್‌ ಹೇಳಿದೆ.

ಈ ಬಗ್ಗೆ ಮಾತನಾಡಿದ ಸಿಇಬಿಆರ್‌ನ ಉಪಾಧ್ಯಕ್ಷ ಡುಗ್ಲಸ್‌ ಮೆಕ್‌ವಿಲಿಯಮ್ಸ್‌  ಅವರು, 'ಹಣದುಬ್ಬರವನ್ನು ಜಗತ್ತಿನ ಆರ್ಥಿಕತೆಯು ಹೇಗೆ ನಿರ್ವಹಿಸುತ್ತದೆ ಎಂಬುದು 2020ರ ಪ್ರಮುಖ ಸವಾಲಾಗಿದ್ದು, ಅಮೆರಿಕದಲ್ಲಿ ಪ್ರಸ್ತುತ ಹಣದುಬ್ಬರವು ಶೇಕಡ 6.8ರಷ್ಟು ತಲುಪಿದೆ. ಕೆಲವು ಸೂಕ್ತ ಹೊಂದಾಣಿಕೆಗಳನ್ನು ಮಾಡಿಕೊಳ್ಳುವ ಮೂಲಕ ಆರ್ಥಿಕತೆಗೆ ಎದುರಾಗಿರುವ ಅಲ್ಪಾವಧಿಯ ಹೊಡೆತವನ್ನು ನಿಯಂತ್ರಿಸಬಹುದಾಗಿದೆ. ಇಲ್ಲವಾದರೆ, ಇಡೀ ಜಗತ್ತು 2023 ಅಥವಾ 2024ರಲ್ಲಿ ಆರ್ಥಿಕ ಹಿಂಜರಿತಕ್ಕೆ ಒಳಗಾಗ ಬೇಕಾಗುತ್ತದೆ' ಎಂದಿದ್ದಾರೆ.

ಆರ್ಥಿಕತೆಯಲ್ಲಿ ಜಪಾನ್‌ಗಿಂತ ಮುಂದೆ ಸಾಗಲು ಜರ್ಮನಿಯು ಸರಿಯಾದ ಹಾದಿಯನ್ನು ಹಿಡಿದಿದ್ದು, 2033ರಲ್ಲಿ ಅದು ಸಾಧ್ಯವಾಗಬಹುದೆಂದು ವರದಿ ಹೇಳಿದ್ದು, 2036ರಲ್ಲಿ ರಷ್ಯಾ ಜಗತ್ತಿನ ಆರ್ಥಿಕತೆಯ ಪಟ್ಟಿಯಲ್ಲಿ 10ನೇ ಸ್ಥಾನಕ್ಕೇರಬಹುದಾಗಿದೆ ಹಾಗೂ 2034ರಲ್ಲಿ ಇಂಡೊನೇಷ್ಯಾ 9ನೇ ಸ್ಥಾನ ತಲುಪಬಹುದು ಎಂದು ವರದಿ ಉಲ್ಲೇಖಿಸಿದೆ.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

ಅಯೋಧ್ಯೆ ಧರ್ಮಧ್ವಜದಲ್ಲಿರುವ ಕೋವಿದಾರ ಮರ: ರಾಜವೃಕ್ಷಕ್ಕೂ, ಶ್ರೀರಾಮಚಂದ್ರನಿಗೂ ಅದೆಂಥ ನಂಟು? ತ್ರೇತಾಯುಗದಲ್ಲಿದ್ದ ದೈವಿಕ ಮರದ ವಿಶೇಷತೆ ಏನು?

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

SCROLL FOR NEXT