ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೊಸ್ 
ವಾಣಿಜ್ಯ

ಅಮೆಜಾನ್ ಸಿಇಒ ಸ್ಥಾನದಿಂದ ಕೆಳಗಿಳಿಯಲಿರುವ ಜೆಫ್ ಬೆಜೋಸ್: ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಮುಂದುವರಿಕೆ 

ಅಮೆಜಾನ್ ಇ-ಕಾಮರ್ಸ್ ಸಂಸ್ಥೆಯ ಸಿಇಒ ಸ್ಥಾನಕ್ಕೆ ಜೆಫ್ ಬೆಜೋಸ್ ರಾಜೀನಾಮೆ ನೀಡಲು ಸಜ್ಜಾಗಿದ್ದು, ಮುಂದೆ ತಮ್ಮ ಆದ್ಯತೆ, ಗಮನವನ್ನು ಖಾಸಗಿ ಬಾಹ್ಯಾಕಾಶ ಪರಿಶೋಧನಾ ಸಂಸ್ಥೆ, ಸಾಮಾಜಿಕ ಕೆಲಸಗಳು ಮತ್ತು ಬೇರೆ ಕ್ಷೇತ್ರಗಳಲ್ಲಿ ಮುಂದುವರಿಸಲು ನಿರ್ಧರಿಸಿದ್ದಾರೆ.

ಯುನೈಟೆಡ್ ಸ್ಟೇಟ್ಸ್: ಅಮೆಜಾನ್ ಇ-ಕಾಮರ್ಸ್ ಸಂಸ್ಥೆಯ ಸಿಇಒ ಸ್ಥಾನಕ್ಕೆ ಜೆಫ್ ಬೆಜೋಸ್ ರಾಜೀನಾಮೆ ನೀಡಲು ಸಜ್ಜಾಗಿದ್ದು, ಮುಂದೆ ತಮ್ಮ ಆದ್ಯತೆ, ಗಮನವನ್ನು ಖಾಸಗಿ ಬಾಹ್ಯಾಕಾಶ ಪರಿಶೋಧನಾ ಸಂಸ್ಥೆ, ಸಾಮಾಜಿಕ ಕೆಲಸಗಳು ಮತ್ತು ಬೇರೆ ಕ್ಷೇತ್ರಗಳಲ್ಲಿ ಮುಂದುವರಿಸಲು ನಿರ್ಧರಿಸಿದ್ದಾರೆ.

ನಾಳೆ ಅವರು ಅಮೆಜಾನ್ ಸಿಇಒ ಹುದ್ದೆಯನ್ನು ಆ್ಯಂಡಿ ಜಸ್ಸಿ ಅವರಿಗೆ ಹಸ್ತಾಂತರಿಸಲಿದ್ದಾರೆ. ಆದರೂ ಅಮೆಜಾನ್ ಸಂಸ್ಥೆಯ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಅವರು ಮುಂದುವರಿಯಲಿದ್ದಾರೆ ಎಂದು ತಿಳಿದುಬಂದಿದೆ.

27 ವರ್ಷಗಳ ಹಿಂದೆ ಜೆಫ್ ಬೆಜೊಸ್ ಅವರು ಸ್ಥಾಪಿಸಿದ್ದ ಅಮೆಜಾನ್ ಸಂಸ್ಥೆ ನಂತರ ಇ-ಕಾಮರ್ಸ್ ಕ್ಷೇತ್ರದಲ್ಲಿ ದೈತ್ಯವಾಗಿ ಬೆಳೆಯಿತು. ಇ-ಕಾಮರ್ಸ್ ಉದ್ಯಮ, ಪುಸ್ತಕ ಮಾರಾಟ ಮತ್ತು ಚಿಲ್ಲರೆ ಮಾರುಕಟ್ಟೆ ಕ್ಷೇತ್ರದಲ್ಲಿ ಮುಂಚೂಣಿ ಸ್ಥಾನವನ್ನು ಹೊಂದಿದೆ.

ಇಂದು ಅಮೆಜಾನ್ ಸಂಸ್ಥೆಯ ಮಾರುಕಟ್ಟೆ ಬೆಲೆ 1.7 ಟ್ರಿಲಿಯನ್ ಡಾಲರ್ ಗಿಂತಲೂ ಅಧಿಕವಾಗಿದೆ. ಇ-ಕಾಮರ್ಸ್, ಕ್ಲೌಡ್ ಕಂಪ್ಯೂಟಿಂಗ್, ದಿನಸಿ ವಸ್ತುಗಳ ಆನ್ ಲೈನ್ ಮಾರಾಟ, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಸ್ಟ್ರೀಮಿಂಗ್ ಮೀಡಿಯಾ ಹೀಗೆ ಹಲವು ವಹಿವಾಟುಗಳಿಂದ ಕಳೆದ ವರ್ಷ 386 ಬಿಲಿಯನ್ ಡಾಲರ್ ವಾರ್ಷಿಕ ಆದಾಯವನ್ನು ಕಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೋದಿ, ಶಾ, ಜ್ಞಾನೇಶ್ ಕುಮಾರ್ ದೇಶದ್ರೋಹಿಗಳು'; ನೂರಕ್ಕೆ ನೂರರಷ್ಟು ಎಲ್ಲಾ ಚುನಾವಣೆಗಳಲ್ಲೂ ಅಕ್ರಮ; ಸಂಚುಕೋರರಿಗೆ ಶಿಕ್ಷೆಯಾಗಬೇಕು: ರಾಹುಲ್ ಗಾಂಧಿ

ಶ್ವೇತ ಭವನದಲ್ಲಿ ಕ್ಸಿ ಜಿನ್ ಪಿಂಗ್- ಟ್ರಂಪ್ ಮಹತ್ವದ ಸಭೆ: AI ಮಾನವನ ನಿಯಂತ್ರಣದಲ್ಲಿರಬೇಕು; ಅಮೆರಿಕಕ್ಕೆ ಚೀನಾ ಆಗ್ರಹ!

'ಹಿಂದುತ್ವ ಯಾರ ವಿರುದ್ಧವೂ ಅಲ್ಲ; ಅದು ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುತ್ತದೆ': ಉಪರಾಷ್ಟ್ರಪತಿ ರಾಧಾಕೃಷ್ಣನ್

ಲೀವರ್ ಕ್ಯಾನ್ಸರ್ ಗೆ 'ವೆಲ್ ಕಮ್' ಖ್ಯಾತಿಯ ಹಿರಿಯ ಬಾಲಿವುಡ್ ನಟ ಮುಷ್ತಾಕ್ ಖಾನ್ ಬಲಿ!

Toxic ಬೆನ್ನಲ್ಲೇ ಭಾರೀ ಹೈಪ್ ಕ್ರಿಯೆಟ್ ಮಾಡಿದ್ದ Paradiseಗೆ ತೆಲುಗರಿಂದಲೇ ತರಾಟೆ; ಆದರೂ ಮೊದಲ ದಿನ ದಾಖಲೆ ಕಲೆಕ್ಷನ್!