ಸಂಗ್ರಹ ಚಿತ್ರ 
ವಾಣಿಜ್ಯ

ಕೋವಿಡ್-19 ಕಹಿಯ ನಡುವೆ ಸಿಹಿಸುದ್ದಿ: ಎಲ್ ಪಿಜಿ ಗ್ಯಾಸ್ ದರದಲ್ಲಿ 122 ರೂ. ಇಳಿಕೆ

ಕೋವಿಡ್-19 ಸಾಂಕ್ರಾಮಿಕ 2ನೇ ಅಲೆಯ ನಡುವೆ ಸಿಹಿಸುದ್ದಿಯೊಂದು ಹೊರಬಿದ್ದಿದ್ದು, ಎಲ್ ಪಿಜಿ ಗ್ಯಾಸ್ ದರ ಇಳಿಕೆಯಾಗಿದೆ.

ನವದೆಹಲಿ: ಕೋವಿಡ್-19 ಸಾಂಕ್ರಾಮಿಕ 2ನೇ ಅಲೆಯ ನಡುವೆ ಸಿಹಿಸುದ್ದಿಯೊಂದು ಹೊರಬಿದ್ದಿದ್ದು, ಎಲ್ಪಿಜಿ ಗ್ಯಾಸ್ ದರ ಇಳಿಕೆಯಾಗಿದೆ.

ಹೌದು. ಇಂಡಿಯನ್ ಆಯಿಲ್ ಕಾರ್ಪೋರೇಷನ್ 19 ಕೆಜಿ ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು ಕಡಿತಗೊಳಿಸಿದ್ದು, ಪ್ರತೀ ಸಿಲಿಂಡರ್ ದರದಲ್ಲಿ 122ರೂ ಕಡಿತ ಮಾಡಿದೆ. ಆದರೆ 14.2 ಕೆಜಿ ಸಿಲಿಂಡರ್ ಬೆಲೆಗಳಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ ಎಂದು ತಿಳಿದುಬಂದಿದೆ.

ಐಒಸಿ ವೆಬ್‌ಸೈಟ್‌ನ ಪ್ರಕಾರ, ಜೂನ್ 1 ರಿಂದ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್‌ಗಳ (ವಾಣಿಜ್ಯ ಬಳಕೆ ಸಿಲಿಂಡರ್) ಬೆಲೆ ಪ್ರತಿ ಸಿಲಿಂಡರ್‌ಗೆ 1473.50 ರೂ.ಗೆ ಇಳಿಕೆಯಾಗಿದೆ. ಈ ಮೊದಲು ಅದರ ಬೆಲೆ 1595.50 ರೂ. ಇತ್ತು. ಅಂದರೆ, ಸಿಲಿಂಡರ್ ಬೆಲೆಯನ್ನು 122 ರೂ.ಗಳಷ್ಟು   ಕಡಿತಗೊಳಿಸಲಾಗಿದೆ. ಸರ್ಕಾರಿ ಪೆಟ್ರೋಲಿಯಂ ಕಂಪನಿಗಳು ಮೇ ತಿಂಗಳಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆಯನ್ನು 45.50 ರೂ.ವರೆಗೆ ಕಡಿಮೆ ಮಾಡಿದ್ದವು. ಆಗ ಅದರ ಬೆಲೆ 1641 ರೂ.ನಿಂದ 1595.5 ರೂ.ಗೆ ಇಳಿದಿತ್ತು. ಇದಕ್ಕೂ ಮೊದಲು ಮೇ ತಿಂಗಳ ಮೊದಲು 19 ಕೆಜಿ ಸಿಲಿಂಡರ್‌ಗಳ  ಬೆಲೆಯನ್ನು ಕಡಿಮೆ ಮಾಡಲಾಗಿತ್ತು.

ಇನ್ನು ದೆಹಲಿಯಲ್ಲಿ 19 ಕೆಜಿ ಸಿಲಿಂಡರ್ ದರ 1473.5ರೂಗೆ ಇಳಿಕೆಯಾಗಿದ್ದು, ಮುಂಬೈನಲ್ಲಿ 1422.5ರೂಗೆ ಇಳಿಕೆಯಾಗಿದೆ. ಅಂತೆಯೇ ಕೋಲ್ಕತಾದಲ್ಲಿ 1544.5, ಚೆನ್ನೈನಲ್ಲಿ 1603.0ರೂ ಗೆ ಇಳಿಕೆಯಾಗಿದೆ.

ಗೃಹ ಬಳಕೆ ಸಿಲಿಂಡರ್ ಬೆಲೆಯಲ್ಲಿ ಬದಲಾವಣೆ ಇಲ್ಲ
ಇದೇ ವೇಳೆ ಗೃಹ ಬಳಕೆಯ ಅಥವಾ ದೇಶೀಯ 14.2 ಕೆಜಿಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಇಂದಿಗೂ ದೆಹಲಿಯ ದೇಶೀಯ ಎಲ್‌ಪಿಜಿಯ ಬೆಲೆ ಪ್ರತಿ ಸಿಲಿಂಡರ್‌ಗೆ 809 ರೂ ಇದ್ದು, ಬೆಂಗಳೂರಿನಲ್ಲಿ 812 ರೂ ಇದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪಶ್ಚಿಮ ಏಷ್ಯಾದ ಉದ್ವಿಗ್ನತೆ ನಡುವೆ ಮೋದಿ- ಪೆಜೆಶ್ಕಿಯನ್ ಮಾತುಕತೆ: ದೀರ್ಘಕಾಲೀನ, ಪರಸ್ಪರ ಲಾಭದಾಯಕ ಕಾರ್ಯತಂತ್ರಕ್ಕೆ ಒತ್ತು

ಲೋಕೋಪಯೋಗಿ ಇಲಾಖೆಯಲ್ಲಿ 'ಲಂಚ'; ವಿದೇಶಿ ಷೇರು ಹೂಡಿಕೆ ಇತ್ಯಾದಿ; ಸತೀಶ್ ಜಾರಕಿಹೊಳಿ ಮನೆಯಲ್ಲಿ ಸಿಕ್ಕಿದ್ದೇನು? EDಯಿಂದ ಅಧಿಕೃತ ಹೇಳಿಕೆ

ಬದರಿನಾಥದ 'ತಪ್ತ ಕುಂಡ'ದಲ್ಲಿ 108 ಬಾರಿ ಧಾರ್ಮಿಕ ಸ್ನಾನ: ರಾಜಸ್ಥಾನದ ಇಬ್ಬರು ವೃದ್ಧೆಯರು ಸಾವು!

BRICS 2026: ಪುಟಿನ್-ಮೋದಿ ಮಾತುಕತೆ: ಕಪ್ಪು ಸಮುದ್ರದಲ್ಲಿ ಭಾರತೀಯರ ಸುರಕ್ಷತೆಯ ವಿಷಯ ಪ್ರಸ್ತಾಪ ರಷ್ಯಾ ಅಧ್ಯಕ್ಷ ಹೇಳಿದ್ದೇನು?

ಬ್ರಿಕ್ಸ್ ಶೃಂಗಸಭೆ: ಭಾರಿ ಭದ್ರತೆ, ಐಷಾರಾಮಿ ವಿಮಾನದಲ್ಲಿ ನವದೆಹಲಿಗೆ ಆಗಮಿಸಿದ ಪುಟಿನ್! "ಡೂಮ್ಸ್ ಡೇ' ವಿಶೇಷತೆ ಏನು ಗೊತ್ತಾ? Video