ಸಂಗ್ರಹ ಚಿತ್ರ 
ವಾಣಿಜ್ಯ

ವಿವಿಧ ತೆರಿಗೆ ಅನುಸರಣೆ ಗಡುವು ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶ: ನೌಕರರಿಗೆ ಕೋವಿಡ್ ಚಿಕಿತ್ಸೆಗೆ ತೆರಿಗೆ ವಿನಾಯಿತಿ!

ವಿವಿಧ ಆದಾಯ ತೆರಿಗೆ ಪವತಿ ಅನುಸರಣೆಗಳ ಗಡುವನ್ನು ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶಿಸಿದೆ. ಕೋವಿಡ್ 19 ಚಿಕಿತ್ಸೆಗಾಗಿ ಉದ್ಯೋಗದಾತರು ಉದ್ಯೋಗಿಗಳಿಗೆ ನೀಡಿದ ಮೊತ್ತವನ್ನು ತೆರಿಗೆಯಿಂದ ವಿನಾಯಿತಿ ನೀಡಿದೆ.

ನವದೆಹಲಿ:  ವಿವಿಧ ಆದಾಯ ತೆರಿಗೆ ಪಾವತಿ ಅನುಸರಣೆಗಳ ಗಡುವನ್ನು ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶಿಸಿದೆ. ಕೋವಿಡ್ 19 ಚಿಕಿತ್ಸೆಗಾಗಿ ಉದ್ಯೋಗದಾತರು ಉದ್ಯೋಗಿಗಳಿಗೆ ನೀಡಿದ ಮೊತ್ತಕ್ಕೆ ತೆರಿಗೆಯಿಂದ ವಿನಾಯಿತಿ ನೀಡಿದೆ. ಅಲ್ಲದೆ ಕೋವಿಡ್ ನಿಂದಾಗಿ  ನೌಕರರು ಸಾವನ್ನಪ್ಪಿದಲ್ಲಿ ಕುಟುಂಬ ಸದಸ್ಯರು ಉದ್ಯೋಗದಾತರಿಂದ ಪಡೆದ ಪರಿಹಾರ ಪಾವತಿಗಳನ್ನು 2019-20ರ ಹಣಕಾಸು ಮತ್ತು ನಂತರದ ವರ್ಷಗಳಲ್ಲಿ ಆದಾಯ ತೆರಿಗೆಯಿಂದ ಮುಕ್ತಗೊಳಿಸಲಾಗುತ್ತದೆ. ಅಂತಹ ತೆರಿಗೆ-ವಿನಾಯಿತಿ ಪಾವತಿಯ ಮಿತಿ ಬೇರೆ ಯಾವುದೇ ವ್ಯಕ್ತಿಯಿಂದ ಪಡೆದರೆ 10 ಲಕ್ಷ ರೂ ಸಿಗಲಿದೆ.

"ಕೋವಿಡ್ -19 ಸಾಂಕ್ರಾಮಿಕದ ಪ್ರಭಾವದ ದೃಷ್ಟಿಯಿಂದ, ತೆರಿಗೆದಾರರು ಕೆಲವು ತೆರಿಗೆ ನಿಯಮಾವಳಿ ಅನುಸರಿಸುವಲ್ಲಿ ವಿವಿಧ ನೋಟಿಸ್‌ಗಳಿಗೆ ಪ್ರತಿಕ್ರಿಯೆಯನ್ನು ಸಲ್ಲಿಸುವಲ್ಲಿ ತೊಂದರೆ ಎದುರಿಸುತ್ತಿದ್ದಾರೆ. ಈ ಕಷ್ಟದ ಸಮಯದಲ್ಲಿ ತೆರಿಗೆದಾರರ  ಹೊರೆ ಸರಾಗಗೊಳಿಸುವ ಸಲುವಾಗಿ, ಪರಿಹಾರಗಳನ್ನು ನೀಡಲಾಗುತ್ತಿದೆ" ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಪ್ರಕಟಣೆಯಲ್ಲಿ ತಿಳಿಸಿದೆ.

ಕೋವಿಡ್ 19 ಚಿಕಿತ್ಸೆಗಾಗಿ ಮಾಡಿದ ಖರ್ಚುಗಳನ್ನು ಪೂರೈಸಲು ಅನೇಕ ತೆರಿಗೆದಾರರು ತಮ್ಮ ಉದ್ಯೋಗದಾತರು ಮತ್ತು ಹಿತೈಷಿಗಳಿಂದ ಹಣಕಾಸಿನ ಸಹಾಯವನ್ನು ಪಡೆದಿದ್ದಾರೆ ಎಂದು ತೆರಿಗೆ ಇಲಾಖೆ ತಿಳಿಸಿದೆ. "ಈ ಖಾತೆಯಲ್ಲಿ ಯಾವುದೇ ಆದಾಯ ತೆರಿಗೆ ಹೊಣೆಗಾರಿಕೆ ಉದ್ಭವಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು, 2019ರ ಹಣಕಾಸು ವರ್ಷದಲ್ಲಿ  ಉದ್ಯೋಗದಾತರಿಂದ ಅಥವಾ ಕೋವಿಡ್ -19 ಚಿಕಿತ್ಸೆಗಾಗಿ ಯಾವುದೇ ವ್ಯಕ್ತಿಯಿಂದ ವೈದ್ಯಕೀಯ ಚಿಕಿತ್ಸೆಗಾಗಿ ತೆರಿಗೆದಾರರಿಂದ ಪಡೆದ ಮೊತ್ತಕ್ಕೆ 2019-20ರ ಸಾಲಿನಲ್ಲಿ ಆದಾಯ-ತೆರಿಗೆ ವಿನಾಯಿತಿ ನೀಡಲು ನಿರ್ಧರಿಸಲಾಗಿದೆ.

ವಸತಿ ಮನೆ ಆಸ್ತಿಯ ವರ್ಗಾವಣೆಯಿಂದ ಬರುವ ಆದಾಯ ಲಾಭಗಳಿಗೆ ತೆರಿಗೆ ವಿಧಿಸುವ ಸಂದರ್ಭದಲ್ಲಿ, ತೆರಿಗೆಯ ಪರಿಹಾರಕ್ಕಾಗಿ ಸಿಬಿಡಿಟಿ ಹೇಳಿದೆ, ಅಂತಹ ಆದಾಯ  ಲಾಭಗಳಿಗಾಗಿ ಮರು ಹೂಡಿಕೆಯ ಗಡುವು ಸೆಪ್ಟೆಂಬರ್ 3, 2021 ಆಗಿರುತ್ತದೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 54 ರ ಪ್ರಕಾರ, ವಸತಿ ಮನೆ ಆಸ್ತಿಯನ್ನು ವರ್ಗಾವಣೆ ಮಾಡುವ ಕಾರಣದಿಂದಾಗಿ ಆದಾಯ ಲಾಭವಿದ್ದರೆ, ತೆರಿಗೆ ಪಾವತಿದಾರನು ಆದಾಯ  ಲಾಭದ ಮೊತ್ತವನ್ನು 2 ವರ್ಷದೊಳಗೆ ಮತ್ತೊಂದು ಮನೆಯ ಆಸ್ತಿಗೆ ಹೂಡಿಕೆ ಮಾಡಿದರೆ ಅಂತಹ ಲಾಭವನ್ನು ತೆರಿಗೆಯಿಂದ ಮುಕ್ತಗೊಳಿಸಬಹುದು. ಈಗ 2/3 ವರ್ಷಗಳ ಯಾವುದೇ ಅವಧಿ ಏಪ್ರಿಲ್ 1, 2021 ರಿಂದ ಸೆಪ್ಟೆಂಬರ್ 29, 2021 ರ ನಡುವೆ ಮುಕ್ತಾಯಗೊಳ್ಳುತ್ತಿದ್ದರೆ, ಅದನ್ನು ಸೆಪ್ಟೆಂಬರ್ 30, 2021 ಕ್ಕೆ ವಿಸ್ತರಿಸಲಾಗುವುದು ಎಂದು ಸಿಬಿಡಿಟಿ ಸುತ್ತೋಲೆ ಹೇಳಿದೆ.

ಅಲ್ಲದೆ, ವಿವಾದ್ ಸೆ ವಿಶ್ವಾಸ್  ನೇರ ತೆರಿಗೆ ವಿವಾದ ಪರಿಹಾರ ಯೋಜನೆಯಡಿ ಪಾವತಿ ಮಾಡುವ ಗಡುವನ್ನು ಆಗಸ್ಟ್ 31 ರವರೆಗೆ ವಿಸ್ತರಿಸಲಾಗಿದೆ. ಆದಾಗ್ಯೂ, ತೆರಿಗೆದಾರರು ಹೆಚ್ಚುವರಿ ಬಡ್ಡಿಯೊಂದಿಗೆ ಅಕ್ಟೋಬರ್ 31 ರವರೆಗೆ ಪಾವತಿ ಮಾಡುವ ಆಯ್ಕೆಯನ್ನು ಹೊಂದಿರುತ್ತಾರೆ.

ಪ್ಯಾನ್-ಆಧಾರ್ ಲಿಂಕ್ ಮಾಡುವ ಕೊನೆಯ ದಿನಾಂಕವನ್ನು 2021 ರ ಸೆಪ್ಟೆಂಬರ್ 30 ರವರೆಗೆ ವಿಸ್ತರಿಸಲಾಗಿದೆ, ಆದರೆ ಉದ್ಯೋಗದಾತರಿಂದ ಉದ್ಯೋಗಿಗಳಿಗೆ ಫಾರ್ಮ್ 16 ರಲ್ಲಿ ಮೂಲ (ಟಿಡಿಎಸ್) ಪ್ರಮಾಣಪತ್ರದಲ್ಲಿ ತೆರಿಗೆಯನ್ನು ಕಡಿತಗೊಳಿಸುವುದನ್ನು ಜುಲೈ 31 ರವರೆಗೆ ವಿಸ್ತರಿಸಲಾಗಿದೆ.  2020-21ರ ಕೊನೆಯ (ಜನವರಿ-ಮಾರ್ಚ್) ತ್ರೈಮಾಸಿಕದಲ್ಲಿ ಟಿಡಿಎಸ್ ಸ್ಟೇಟ್ ಮೆಂಟ್ ನೀಡಲು ಅಂತಿಮ ದಿನಾಂಕವನ್ನು ಜುಲೈ 15, 2021ಕ್ಕೆ ವಿಸ್ತರಿಸಲಾಗಿದೆ.

ಫಾರ್ಮ್ 15 ಸಿಸಿ ಯಲ್ಲಿನ ತ್ರೈಮಾಸಿಕ ಸ್ಟೇಟ್ ಮೆಂಟ್ ಅನ್ನು ಜುಲೈ 31 ರೊಳಗೆ ಒದಗಿಸಬೇಕಾಗುತ್ತದೆ. ಅಲ್ಲದೆ, 2020-21ರ ಹಣಕಾಸು ವರ್ಷಕ್ಕೆ ಫಾರ್ಮ್ ನಂ 1 ರಲ್ಲಿ ಈಕ್ವಲೈಸೇಶನ್ ಲೆವಿ ಸ್ಟೇಟ್ ಮೆಂಟ್ ನೀಡುವ ಗಡುವನ್ನು 2021 ರ ಜುಲೈ 31 ರವರೆಗೆ ವಿಸ್ತರಿಸಲಾಗಿದೆ, ಆದರೆ ಈಕ್ವಲೈಸೇಶನ್ ಲೆವಿ ರಿಟರ್ನ್ಸ್ ಪ್ರಕ್ರಿಯೆಗೊಳಿಸಲು, ಸಮಯ ಮಿತಿಯನ್ನು 3 ತಿಂಗಳು- ಸೆಪ್ಟೆಂಬರ್ 30, 2021 ರವರೆಗೆ ವಿಸ್ತರಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

2030 Commonwealth Games: ಭಾರತದ ಬಿಡ್‌ಗೆ ಕ್ಯಾಬಿನೆಟ್ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

SCROLL FOR NEXT