ವಾಣಿಜ್ಯ

ಭಾರತದ ಕಲ್ಲಿದ್ದಲು ಆಮದು ಏಪ್ರಿಲ್ ನಲ್ಲಿ ಶೇ.30 ರಷ್ಟು ಏರಿಕೆ!

Srinivas Rao BV

ನವದೆಹಲಿ: ಭಾರತದ ಕಲ್ಲಿದ್ದಲು ಆಮದು ಪ್ರಮಾಣ ಏಪ್ರಿಲ್ ತಿಂಗಳಲ್ಲಿ ಶೇ.30.3 ರಷ್ಟು ಏರಿಕೆಯಾಗಿದ್ದು, 22.27 ಮಿಲಿಯನ್ ಟನ್ ಗಳಷ್ಟು ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳಲಾಗಿದೆ. 

ಮುಂಗಾರು ಪೂರ್ವ ದಾಸ್ತಾನಿನ ಬೇಡಿಕೆಯ ಆತಂತದ ನಡುವೆ ಕಲ್ಲಿದ್ದಲು ಆಮದು ಏರಿಕೆಯಾಗಿದೆ. ಕಳೆದ ವರ್ಷ ಏಪ್ರಿಲ್ ನಲ್ಲಿ ಭಾರತ 17.09 ಮಿಲಿಯನ್ ಟನ್ ನಷ್ಟು ಕಲ್ಲಿದ್ದಲನ್ನು ಆಮದು ಮಾಡಿಕೊಂಡಿತ್ತು. 

2021 ರ ಏಪ್ರಿಲ್ ತಿಂಗಳಲ್ಲಿ ಭಾರತದ ಕಲ್ಲಿದ್ದಲು ಹಾಗೂ ಕೋಕ್ ಆಮದು, ಪ್ರಮುಖ ಹಾಗೂ ಪ್ರಮುಖವಲ್ಲದ ಬಂದರುಗಳಿಂದ ಶೇ.30 ರಷ್ಟು ಏರಿಕೆ ಕಂಡಿದೆ. ಈ ವರ್ಷದ ಏಪ್ರಿಲ್ ನಲ್ಲಿ 22.27 ಮಿಲಿಯನ್ ಟನ್ (ಎಂಟಿ)ಯಷ್ಟು ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳಲಾಗಿದ್ದರೆ, ಕಳೆದ ವರ್ಷ 17.09 ರಷ್ಟು ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳಲಾಗಿತ್ತು ಎಂದು ಹಡಗು ಕಂಪನಿಗಳಿಂದ ಪಡೆದ ದತ್ತಾಂಶಗಳನ್ನು ವಿಶ್ಲೇಷಿಸಿರುವ ಎಂಜಂಕ್ಷನ್ ಸಂಸ್ಥೆಯ ವರದಿಯಿಂದ ತಿಳಿದುಬಂದಿದೆ. 

ಮುಂಗಾರು ಪೂರ್ವ ಮರು ದಾಸ್ತಾನು ಹಾಗೂ ಪೂರೈಕೆ ಆತಂಕಗಳು ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಕಲ್ಲಿದ್ದಲು ಆಮದಾಗುವುದಕ್ಕೆ ಕಾರಣವಾಗಿದೆ ಎಂದು ಎಂಜಂಕ್ಷನ್ ನ ಎಂಡಿ & ಸಿಇಒ ವಿನಯಾ ವರ್ಮ ಹೇಳಿದ್ದಾರೆ. 

SCROLL FOR NEXT