ವಾಣಿಜ್ಯ

ಭಾರತಕ್ಕೆ ಗಡೀಪಾರು ಆದೇಶ ವಿರುದ್ಧ ವಜ್ರೋದ್ಯಮಿ ನೀರವ್ ಮೋದಿ ಲಂಡನ್ ಹೈಕೋರ್ಟ್ ಗೆ ಮೇಲ್ಮನವಿ!

Sumana Upadhyaya

ಲಂಡನ್: ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ಬಹುಕೋಟಿ ರೂಪಾಯಿ ವಂಚಿಸಿ ದೇಶ ಬಿಟ್ಟು ಪರಾರಿಯಾಗಿದ್ದ ವಜ್ರೋದ್ಯಮಿ ನೀರವ್ ಮೋದಿಯ ಗಡೀಪಾರಿಗೆ ಲಂಡನ್ ನ ಕೆಳ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಬೇಕೆಂದು ಅಲ್ಲಿನ ಹೈಕೋರ್ಟ್ ಮೊರೆ ಹೋಗಿದ್ದಾರೆ.

ಬಹುಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ದೋಷಿ ಎಂದು ಇಂಗ್ಲೆಂಡಿನ ಕೆಳ ನ್ಯಾಯಾಲಯ ತೀರ್ಪು ನೀಡಿ ನೀರವ್ ಮೋದಿಯನ್ನು ಭಾರತಕ್ಕೆ ಗಡೀಪಾರು ಮಾಡಲು ಆದೇಶ ಹೊರಡಿಸಿತ್ತು.

ಕಳೆದ ಏಪ್ರಿಲ್ 16ರಂದು ಇಂಗ್ಲೆಂಡ್ ಸರ್ಕಾರದ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ನೀರವ್ ಮೋದಿಯ ಗಡೀಪಾರಿಗೆ ಸಹಿ ಹಾಕಿದ್ದರು.

ಭಾರತದಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 13 ಸಾವಿರದ 570 ಕೋಟಿ ರೂಪಾಯಿ ವಂಚಿಸಿ ಇಂಗ್ಲೆಂಡಿಗೆ ಪರಾರಿಯಾದ ಆರೋಪದಲ್ಲಿ ನೀರವ್ ಮೋದಿ ಪ್ರಮುಖ ದೋಷಿ ಎಂದು ಇಂಗ್ಲೆಂಡಿನ ಕೆಳ ನ್ಯಾಯಾಲಯ ತೀರ್ಪು ನೀಡಿದೆ.

2019ರ ಮಾರ್ಚ್ 19ರಂದು ನೀರವ್ ಮೋದಿಯ ಬಂಧನವಾದ ನಂತರ ಹಲವು ಬಾರಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರೂ ತಿರಸ್ಕೃತವಾಗುತ್ತಾ ಬಂದಿದ್ದು ಲಂಡನ್ ನ ವಂಡ್ಸ್ ವರ್ತ್ ಜೈಲಿನಲ್ಲಿದ್ದಾರೆ.

SCROLL FOR NEXT