ಇಪಿಎಫ್ಒ 
ವಾಣಿಜ್ಯ

ಕೋವಿಡ್-19 ಸಂಕಷ್ಟ: ಎರಡನೇ ಮುಂಗಡ ಹಣ ಪಡೆಯಲು ಇಪಿಎಫ್ಒ ಸದಸ್ಯರಿಗೆ ಅವಕಾಶ

ಕೋವಿಡ್-19 ಎರಡನೇ ಮುಂಗಡ ಹಣವನ್ನು ಖಾತೆಯಿಂದ ಹಿಂತೆಗೆಯುವುದಕ್ಕೆ ನೌಕರರ ಭವಿಷ್ಯ ನಿಧಿ ಸಂಸ್ಥೆ ತನ್ನ ಸದಸ್ಯರಿಗೆ ಅವಕಾಶ ಮಾಡಿಕೊಟ್ಟಿದೆ. 

ನವದೆಹಲಿ: ಕೋವಿಡ್-19 ಎರಡನೇ ಮುಂಗಡ ಹಣವನ್ನು ಖಾತೆಯಿಂದ ಹಿಂತೆಗೆಯುವುದಕ್ಕೆ ನೌಕರರ ಭವಿಷ್ಯ ನಿಧಿ ಸಂಸ್ಥೆ ತನ್ನ ಸದಸ್ಯರಿಗೆ ಅವಕಾಶ ಮಾಡಿಕೊಟ್ಟಿದೆ. ಕೋವಿಡ್-19 ನ ಎರಡನೇ ಅಲೆಯಲ್ಲಿ ಅಗತ್ಯತೆಗಳು ಸರಿದೂಗಿಸಿಕೊಳ್ಳುವುದಕ್ಕೆ ಸಹಾಯವಾಗುವ ನಿಟ್ಟಿನಲ್ಲಿ ಇಪಿಎಫ್ಒ ಈ ಅವಕಾಶ ಕಲ್ಪಿಸಿದೆ. 

ಮೂರು ತಿಂಗಳ ಬೇಸಿಕ್ ವೇತನ (ಬೇಸಿಕ್ ವೇತಕ+ ಡಿಎ) ಅಥವಾ ಸದಸ್ಯರ ಪಿಎಫ್ ಖಾತೆಯಲ್ಲಿರುವ ಶೇ.75 ರಷ್ಟು ಹಣ ಇವೆರಡರಲ್ಲಿ ಯಾವುದು ಕಡಿಮೆ ಮೊತ್ತ ಆಗುತ್ತದೆಯೋ ಅದನ್ನು ತೆಗೆಯಲು ಸದಸ್ಯರಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ

ಇಪಿಎಫ್ಒ ನ ಚಂದಾದಾರರಿಗೆ ಕೋವಿಡ್-19 ಎರಡನೇ ಅಲೆ ಸಂದರ್ಭದಲ್ಲಿ ಖರ್ಚು-ವೆಚ್ಚಗಳನ್ನು ನಿಭಾಯಿಸಲು ಅನುಕೂಲವಾಗಲೆಂದು, ಇಪಿಎಫ್ಒ ಎರಡನೇ ಮರುಪಾವತಿ ಅಗತ್ಯವಿಲ್ಲದ ಕೋವಿಡ್-19 ಮುಂಗಡ ಹಣವನ್ನು ತೆಗೆದುಕೊಳ್ಳುವ ಸೌಲಭ್ಯ ಕಲ್ಪಿಸಿದೆ ಎಂದು ಕಾರ್ಮಿಕ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಮಾರ್ಚ್ 2020 ರಲ್ಲಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ (ಪಿಎಂಜಿಕೆವೈ) ನ ಅಡಿಯಲ್ಲಿ ವಿಶೇಷ ಹಣ ಹಿಂತೆಗೆತ ಸೌಲಭ್ಯವನ್ನು ಇಪಿಎಫ್ಒ ಗ್ರಾಹಕರಿಗೆ ಒದಗಿಸಲಾಗಿತ್ತು. ಇದಕ್ಕಾಗಿ ನಿಯಮಗಳಿಗೆ ತಿದ್ದುಪಡಿಯನ್ನೂ ಜಾರಿಗೆ ತರಲಾಗಿತ್ತು.

15,000 ರೂಪಾಯಿಗಿಂತಲೂ ಕಡಿಮೆ ವೇತನ ಹೊಂದಿರುವವರಿಗೆ ಕೋವಿಡ್-19 ಮುಂಗಡ ಹಣ ಸೌಲಭ್ಯ ನೆರವಾಗಲಿದೆ. ಈ ವರೆಗೂ ಇಂತಹ 31 ಲಕ್ಷ ಕೋವಿಡ್-19 ಮುಂಗಡ ಹಣದ ಅರ್ಜಿಗಳನ್ನು ಸಂಸ್ಥೆ ಇತ್ಯರ್ಥಗೊಳಿಸಿದ್ದು 18,698.15 ಕೋಟಿ ರೂಪಾಯಿ ಮೊತ್ತವನ್ನು ನೀಡಿದೆ.

ಕೋವಿಡ್-19 ಎರಡಾನೇ ಅವಧಿಯಲ್ಲಿ ಮ್ಯೂಕೋರ್ಮೈಕೋಸಿಸ್ ಅಥವಾ ಬ್ಲಾಕ್ ಫಂಗಸ್ ನ್ನೂ ಸಾಂಕ್ರಾಮಿಕ ಎಂದು ಘೋಷಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಇಪಿಎಫ್ಒ ತನ್ನ ಸದಸ್ಯರಿಗೆ ನೆರವು ನೀಡಲು ಮುಂದಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ?

ಮಂಗಳೂರು: Muslim ಕ್ಯಾಬ್ ಚಾಲಕನಿಗೆ 'ಭಯೋತ್ಪಾದಕ' ಎಂದು ಕರೆದಿದ್ದ ಕೇರಳ ನಟನ ಬಂಧನ!

ಅಯೋಧ್ಯೆಯಲ್ಲಿ ಮತ್ತೊಂದು 'ನಿಗೂಢ' ಸ್ಫೋಟ: ಸಾವಿನ ಸಂಖ್ಯೆ 6ಕ್ಕೆ ಏರಿಕೆ, Video Viral

BMTC ಬಸ್ ಚಾಲಕನಿಗೆ ಫಿಡ್ಸ್, ಚಿನ್ನಸ್ವಾಮಿ ಕ್ರೀಡಾಂಗಣ ರಸ್ತೆಯಲ್ಲಿ ಸರಣಿ ಅಪಘಾತ

ಬೆಂಗಳೂರು: ರಾತ್ರಿಯಿಡೀ ಸುರಿದ ಮಳೆಯಿಂದ ಹಲವೆಡೆ ಜಲಾವೃತ, ಸಂಚಾರ ದಟ್ಟಣೆ, ಇಂದಿನ IMD ವರದಿ!

SCROLL FOR NEXT