ವಾಣಿಜ್ಯ

ರಾಜ್ಯಗಳಿಗೆ 95 ಸಾವಿರ ಕೋಟಿ ರೂ. ತೆರಿಗೆ ಹಣ ಬಿಡುಗಡೆ ಮಾಡಿದ ಕೇಂದ್ರ: ಕರ್ನಾಟಕಕ್ಕೆ ಸಿಕ್ಕಿದೆಷ್ಟು?

Vishwanath S

ನವದೆಹಲಿ: ಕೇಂದ್ರ ಸರ್ಕಾರ ಸಂಗ್ರಹಿಸಿರುವ ತೆರಿಗೆ ಹಣದಲ್ಲಿ ರಾಜ್ಯಗಳಿಗೆ 95,000 ಕೋಟಿ ರೂ.ನನ್ನು ಬಿಡುಗಡೆ ಮಾಡಿದೆ.

ಕಳೆದ ವಾರ ರಾಜ್ಯ ಮುಖ್ಯಮಂತ್ರಿಗಳು ಮತ್ತು ಹಣಕಾಸು ಮಂತ್ರಿಗಳೊಂದಿಗಿನ ವರ್ಚುವಲ್ ಸಭೆಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಕೋವಿಡ್​​ ಪ್ರತಿಕೂಲ ಪರಿಣಾಮದಿಂದಾಗಿ ಕ್ಷೀಣಿಸುತ್ತಿರುವ ರಾಜ್ಯ ಸರ್ಕಾರಗಳ ಬಂಡವಾಳ ವೆಚ್ಚವನ್ನು ಬೆಂಬಲಿಸಲು ವೇಳಾಪಟ್ಟಿಗಿಂತ ಮುಂಚಿತವಾಗಿ ಒಂದು ಕಂತು ತೆರಿಗೆ ಹಣ ಬಿಡುಗಡೆ ಮಾಡುವ ಭರವಸೆ ನೀಡಿದ್ದರು.

95,000 ಕೋಟಿ ರೂ.ಗೂ ಅಧಿಕ ತೆರಿಗೆ ಹಣ 28 ರಾಜ್ಯಗಳ ಹಣಕಾಸಿನ ಬೊಕ್ಕಸವನ್ನು ಬಲಪಡಿಸುತ್ತದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.

ಈ ಭಾರಿ ಕರ್ನಾಟಕಕ್ಕೆ 3,467.62 ಕೋಟಿ ರುಪಾಯಿ ಸಿಕ್ಕಿದೆ. ಇನ್ನು ಉತ್ತರಪ್ರದೇಶಕ್ಕೆ ಅತಿ ಹೆಚ್ಚು 17,056.66 ಕೋಟಿ ರುಪಾಯಿ ಸಿಕ್ಕಿದೆ.

SCROLL FOR NEXT