ವಾಣಿಜ್ಯ

ಜುಲೈನಲ್ಲಿ ರಾಜ್ಯದ ಜಿಎಸ್‌ಟಿ ಸಂಗ್ರಹ 9,795 ಕೋಟಿ ರೂ., ಕರ್ನಾಟಕಕ್ಕೆ ಎರಡನೇ ಸ್ಥಾನ

Ramyashree GN

ಬೆಂಗಳೂರು: ರಾಜ್ಯದಲ್ಲಿ ಜುಲೈ ತಿಂಗಳಿನಲ್ಲಿ ₹ 9,795 ಕೋಟಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹವಾಗಿದೆ.  ಇತರ ದೊಡ್ಡ ರಾಜ್ಯಗಳಾದ ಗುಜರಾತ್, ತಮಿಳುನಾಡು ಮತ್ತು ಅವಿಭಜಿತ ಆಂಧ್ರಪ್ರದೇಶಗಳಿಗೆ ಹೋಲಿಸಿದರೆ ಈ ತಿಂಗಳಲ್ಲಿ ಏರಿಕೆಯಾದ ಅತ್ಯಧಿಕ ಜಿಎಸ್‌ಟಿ ಸಂಗ್ರಹ ಇದಾಗಿದೆ. ಅತ್ಯಧಿಕ ತೆರಿಗೆ ಸಂಗ್ರಹದಲ್ಲಿ ರಾಜ್ಯವೂ ಎರಡನೇ ಸ್ಥಾನದಲ್ಲಿದೆ.

ಕಳೆದ ವರ್ಷದ ಇದೇ ಅವಧಿಯಲ್ಲಿ ಸಂಗ್ರಹವಾಗಿದ್ದಕ್ಕಿಂತ ಶೇ 45 ರಷ್ಟು ಹೆಚ್ಚಾಗಿದೆ. ಕಳೆದ ಕೆಲವು ತಿಂಗಳುಗಳಲ್ಲಿ ಜಿಎಸ್‌ಟಿ ಸಂಗ್ರಹದಲ್ಲಿ ಕರ್ನಾಟಕವು ಮಹಾರಾಷ್ಟ್ರದ ನಂತರ ಎರಡನೇ ಸ್ಥಾನದಲ್ಲಿದೆ.

ರಾಷ್ಟ್ರೀಯ ಹಣಕಾಸು ಆಯೋಗದ ಮಾಜಿ ಸದಸ್ಯ ಪ್ರೊ.ಗೋವಿಂದ ರಾವ್ ಮಾತನಾಡಿ, 'ಕರ್ನಾಟಕದಲ್ಲಿ 2017-18 ಮತ್ತು 2018-19ರಲ್ಲಿ ಯಾವುದೇ ಸಮಸ್ಯೆಗಳಿರಲಿಲ್ಲ. ಆದರೂ, ಜಿಎಸ್‌ಟಿ ಸಂಗ್ರಹ ಅಷ್ಟು ಚೆನ್ನಾಗಿರಲಿಲ್ಲ. ಮುಖ್ಯವಾಗಿ ತಂತ್ರಜ್ಞಾನ ವೇದಿಕೆಯು ಸ್ಥಿರವಾಗಿಲ್ಲದ ಕಾರಣ 2019-20ರ ನಂತರ ಸಮಸ್ಯೆಗಳು ಪ್ರಾರಂಭವಾದವು. ಆದರೆ, ಕೇಂದ್ರದ ಶೇ 14 ರಷ್ಟು ಪರಿಹಾರವು ನೆರವಿಗೆ ಬಂತು. 2020-21 ರಲ್ಲಿ ಸಾಂಕ್ರಾಮಿಕ ರೋಗದ ಹಾವಳಿಯಿಂದ ಆದಾಯವು ಕುಸಿಯಿತು ಮತ್ತು ಪರಿಹಾರವನ್ನು ಸಂಪೂರ್ಣವಾಗಿ ನೀಡಿಲ್ಲ' ಎಂದು ತಿಳಿಸಿದ್ದಾರೆ.

ವಾಣಿಜ್ಯ ತೆರಿಗೆ ಆಯುಕ್ತೆ ಸಿ. ಶಿಖಾ ಮಾತನಾಡಿ, 'ರಾಜ್ಯದಲ್ಲಿ ಜಿಎಸ್‌ಟಿಯನ್ನು ಜಾರಿಗೆ ತರುವಾಗ ಶೇ 14 ರಷ್ಟು ಬೆಳವಣಿಗೆ ದರವನ್ನು ನಿರೀಕ್ಷಿಸಲಾಗಿತ್ತು ಮತ್ತು ಪರಿಹಾರವನ್ನು ಬಿಡುಗಡೆ ಮಾಡುವ ಮೂಲಕ ಆ ಅಂತರವನ್ನು ತುಂಬಲಾಯಿತು. ಈ ಐದು ವರ್ಷಗಳಲ್ಲಿ ಕರ್ನಾಟಕ ಏನನ್ನೂ ಕಳೆದುಕೊಂಡಿಲ್ಲ. ಆದರೆ ವಿವಿಧ ರೀತಿಯ ತೆರಿಗೆಗಳು ಹೋಗಿರುವುದರಿಂದ ಪ್ರಮುಖ ಫಲಾನುಭವಿಗಳೆಲ್ಲರೂ ಈಗ ಜಿಎಸ್‌ಟಿ ತೆರಿಗೆದಾರರಾಗಿದ್ದಾರೆ' ಎಂದು ಹೇಳಿದ್ದಾರೆ.

ರಾಜ್ಯವಾರು ಜಿಎಸ್‌ಟಿ ಸಂಗ್ರಹ

ಅಧಿಕೃತ ಮಾಹಿತಿ ಪ್ರಕಾರ, ಮಹಾರಾಷ್ಟ್ರವು ₹ 22,129 ಕೋಟಿ ಅತಿ ಹೆಚ್ಚು ಜಿಎಸ್‌ಟಿ ಸಂಗ್ರಹಿಸಿದೆ. ನಂತರ ಕರ್ನಾಟಕ (₹ 9,795 ಕೋಟಿ), ಗುಜರಾತ್ (₹ 9,183 ಕೋಟಿ), ತಮಿಳುನಾಡು (₹ 8,449 ಕೋಟಿ), ಉತ್ತರ ಪ್ರದೇಶ (₹ 7,074 ಕೋಟಿ), ಇತ್ತೀಚಿನ ಅಧಿಕೃತ ಅಂಕಿಅಂಶಗಳ ಪ್ರಕಾರ ಹರಿಯಾಣ (₹ 6,791 ಕೋಟಿ), ತೆಲಂಗಾಣ (₹ 4,547 ಕೋಟಿ), ಪಶ್ಚಿಮ ಬಂಗಾಳ (₹ 4,441 ಕೋಟಿ), ದೆಹಲಿ (₹ 4,327 ಕೋಟಿ) ಮತ್ತು ರಾಜಸ್ಥಾನ (₹ 3,671 ಕೋಟಿ) ರಾಜ್ಯಗಳು ನಂತರದ ಸ್ಥಾನಗಳಲ್ಲಿವೆ.

SCROLL FOR NEXT