ವಾಣಿಜ್ಯ

ಭಾರತದ ಮೊದಲ ಸ್ವದೇಶಿ ನಿರ್ಮಿತ ಹೈಡ್ರೋಜನ್ ಇಂಧನ ಸೆಲ್ ಬಸ್ ಅನಾವರಣ

Lingaraj Badiger

ಪುಣೆ: ಡೀಸೆಲ್, ಪೆಟ್ರೋಲ್ ಹಾಗೂ ಎಲೆಕ್ಟ್ರಿಕ್ ವಾಹನಗಳ ನಂತರ ಈಗ ಭಾರತದ ಮೊದಲ ಸ್ವದೇಶಿ ನಿರ್ಮಿತ ಹೈಡ್ರೋಜನ್ ಫ್ಯೂಯಲ್ ಸೆಲ್ ಬಸ್ ಅನ್ನು ಪುಣೆಯಲ್ಲಿ ಅನಾವರಣಗೊಳಿಸಲಾಗಿದೆ.

ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್(CSIR) ಮತ್ತು ಖಾಸಗಿ ಸಂಸ್ಥೆ KPIT ಲಿಮಿಟೆಡ್ ಅಭಿವೃದ್ಧಿಪಡಿಸಿದ ಭಾರತದ ಮೊದಲ ಸ್ಥಳೀಯ ಹೈಡ್ರೋಜನ್ ಇಂಧನ ಸೆಲ್ ಬಸ್ ಅನ್ನು ಪುಣೆಯಲ್ಲಿ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ಅನಾವರಣಗೊಳಿಸಿದರು.

ಇಂಧನ ಕೋಶವು ಹೈಡ್ರೋಜನ್ ಮತ್ತು ಆಮ್ಲಜನಕವನ್ನು ಬಳಸಿಕೊಂಡು ಬಸ್‌ಗೆ ಶಕ್ತಿ ತುಂಬಲು ವಿದ್ಯುಚ್ಛಕ್ತಿಯನ್ನು ಉತ್ಪಾದಿಸುತ್ತದೆ. ಇದರಿಂದ ಬಸ್ ನಲ್ಲಿರುವ ಬ್ಯಾಟರಿ ಚಾರ್ಜ್ ಆಗುತ್ತದೆ. ಇದು ಅತ್ಯಂತ ಪರಿಸರ ಸ್ನೇಹಿ ಸಾರಿಗೆ ವಿಧಾನವಾಗಿದೆ.

ಭಾರತದ ಸಾರಿಗೆಯಲ್ಲಿ ಕ್ರಾಂತಿ, ದೇಶದ ಮೊಟ್ಟ ಮೊದಲ ಹೈಡ್ರೋಜನ್ ಬಸ್‌ ಅನಾವರಣಗೊಂಡಿದೆ. ಇದೊಂದು ಪರಿಸರ ಸ್ನೇಹಿ ಬಸ್ ಎಂದು ಬಿಜೆಪಿ ಕೂ ಮಾಡಿದೆ.

SCROLL FOR NEXT