ವಾಣಿಜ್ಯ

ಜೊಮ್ಯಾಟೊ ಬಳಿಕ ಉದ್ಯೋಗ ಕಡಿತಕ್ಕೆ ಮುಂದಾದ ಸ್ವಿಗ್ಗಿ; 250ಕ್ಕೂ ಹೆಚ್ಚು ಉದ್ಯೋಗಿಗಳ ವಜಾಕ್ಕೆ ನಿರ್ಧಾರ!

Ramyashree GN

ನವದೆಹಲಿ: ಜೊಮ್ಯಾಟೊ ನಂತರ ಇದೀಗ ಸ್ವಿಗ್ಗಿ ಸರದಿ. ಈ ತಿಂಗಳಿನಿಂದ 250ಕ್ಕೂ ಹೆಚ್ಚು ಉದ್ಯೋಗಿಗಳನ್ನು ಅಥವಾ ಅದರ ಶೇ 5ರಷ್ಟು ಉದ್ಯೋಗಿಗಳನ್ನು ವಜಾಮಾಡಲು ತೀರ್ಮಾನಿಸಿದೆ ಎನ್ನಲಾಗಿದೆ.

ಆದಾಗ್ಯೂ, ಸದ್ಯಕ್ಕೆ ಯಾವುದೇ ಉದ್ಯೋಗಿಯನ್ನು ವಜಾಗೊಳಿಸಿಲ್ಲ ಮತ್ತು ವಜಾಗೊಳಿಸುವ ಅಂಕಿ ಅಂಶದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಆನ್‌ಲೈನ್ ಆಹಾರ ವಿತರಣಾ ವೇದಿಕೆ ಸ್ವಿಗ್ಗಿ ಗುರುವಾರ ಹೇಳಿದೆ.

'ಸ್ವಿಗ್ಗಿಯಲ್ಲಿ ಯಾವುದೇ ಉದ್ಯೋಗ ಕಡಿತ ಮಾಡಿಲ್ಲ. ನಾವು ಅಕ್ಟೋಬರ್‌ನಲ್ಲಿ ನಮ್ಮ ಕಾರ್ಯಕ್ಷಮತೆಯ ಸರ್ಕಲ್‌ಅನ್ನು ಮುಕ್ತಾಯಗೊಳಿಸಿದ್ದೇವೆ ಮತ್ತು ಎಲ್ಲಾ ಹಂತಗಳಲ್ಲಿ ರೇಟಿಂಗ್‌ಗಳು ಮತ್ತು ಬಡ್ತಿಯನ್ನು ಘೋಷಿಸಿದ್ದೇವೆ. ಪ್ರತಿ ಬಾರಿಯಂತೆ ನಾವು ಕಾರ್ಯಕ್ಷಮತೆಯ ಆಧಾರದ ಮೇಲೆ ಉದ್ಯೋಗಿಗಳ ನಿರ್ಗಮನವನ್ನು ನಿರೀಕ್ಷಿಸುತ್ತೇವೆ' ಎಂದು ಸ್ವಿಗ್ಗಿ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಎಕನಾಮಿಕ್ ಟೈಮ್ಸ್ ಸ್ವಿಗ್ಗಿಯಲ್ಲಿ ಉದ್ಯೋಗಿಗಳ ಕಡಿತದ ಬಗ್ಗೆ ಮೊದಲು ವರದಿ ಮಾಡಿದೆ. ಮುಂಬರುವ ಉದ್ಯೋಗ ಕಡಿತಗಳು ನಗದು ಸುಡುವಿಕೆಯನ್ನು ಕಡಿಮೆ ಮಾಡಲು ಸ್ವಿಗ್ಗಿಯ ತ್ವರಿತ ವಾಣಿಜ್ಯ ವಿತರಣಾ ಸೇವೆ ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಮೇಲೆ ಪರಿಣಾಮ ಬೀರುತ್ತದೆ.

ಕಳೆದ ತಿಂಗಳು, ಜಾಗತಿಕ ಬ್ರೋಕರೇಜ್ ಸಂಸ್ಥೆಯಾದ ಜೆಫರೀಸ್, ಭಾರೀ ರಿಯಾಯಿತಿಗಳನ್ನು ನೀಡಿದರೂ ಸ್ವಿಗ್ಗಿ ತನ್ನ ಪ್ರತಿಸ್ಪರ್ಧಿಗೆ ಮಾರುಕಟ್ಟೆಯ ಪಾಲನ್ನು ವೇಗವಾಗಿ ಕಳೆದುಕೊಳ್ಳುತ್ತಿದೆ ಎಂದು ಹೇಳಿದರು.

ಈ ವರ್ಷದ ಜನವರಿ-ಜೂನ್ ಅವಧಿಯಲ್ಲಿ ಸ್ವಿಗ್ಗಿಯ ಆಹಾರ ವಿತರಣಾ ವ್ಯವಹಾರದ ಒಟ್ಟು ಮೌಲ್ಯವು 1.3 ಶತಕೋಟಿ ಡಾಲರ್‌ಗಳಷ್ಟಿದೆ ಎಂದು ಸ್ವಿಗ್ಗಿ ಹೂಡಿಕೆದಾರ ಪ್ರೊಸಸ್‌ನ (Prosus) ಹಣಕಾಸು ವರದಿಯನ್ನು ಉಲ್ಲೇಖಿಸಿ ಜೆಫರೀಸ್ ಹೇಳಿದ್ದಾರೆ. ಜೊಮ್ಯೊಟೊ ಅದೇ ಅವಧಿಯಲ್ಲಿ 1.6 ಶತಕೋಟಿ ಡಾಲರ್‌ಗಳ ಆರ್ಡರ್ ಪ್ರಮಾಣವನ್ನು ಹೊಂದಿದೆ.

SCROLL FOR NEXT