ಸಾಂದರ್ಭಿಕ ಚಿತ್ರ 
ವಾಣಿಜ್ಯ

ಸರ್ಕಾರಿ ಖಾತೆಗಳಿ ಗ್ರೇ ಟಿಕ್ ಮಾರ್ಕ್, ಕಂಪನಿಗಳಿಗೆ ಗೋಲ್ಡನ್ ಟಿಕ್: ಟ್ವಿಟರ್ ನಿಂದ ಮಹತ್ವದ ಬದಲಾವಣೆ

ಪ್ರಮುಖ ಸಾಮಾಜಿಕ ಮಾಧ್ಯಮ ಟ್ವಿಟರ್ ಹೊಸ ನಿಯಮಗಳನ್ನು ಜಾರಿಗೆ ತಂದಿದ್ದು, ಪ್ರಮುಖವಾಗಿ ಅಧಿಕೃತ ಖಾತೆಗೆ ನೀಡುತ್ತಿದ್ದ ಟಿಕ್ ಮಾರ್ಕ್‌ ನೀತಿಯಲ್ಲಿ ಬದಲಾವಣೆ ಮಾಡಿದೆ.

ನವದೆಹಲಿ: ಪ್ರಮುಖ ಸಾಮಾಜಿಕ ಮಾಧ್ಯಮ ಟ್ವಿಟರ್ ಹೊಸ ನಿಯಮಗಳನ್ನು ಜಾರಿಗೆ ತಂದಿದ್ದು, ಪ್ರಮುಖವಾಗಿ ಅಧಿಕೃತ ಖಾತೆಗೆ ನೀಡುತ್ತಿದ್ದ ಟಿಕ್ ಮಾರ್ಕ್‌ ನೀತಿಯಲ್ಲಿ ಬದಲಾವಣೆ ಮಾಡಿದೆ.

ಸರ್ಕಾರಕ್ಕೆ ಸಂಬಂಧಿಸಿದ ಖಾತೆಗಳಿಗೆ ಗ್ರೇ ಟಿಕ್ ವೆರಿಫಿಕೇಶನ್ ಮಾರ್ಕ್ ಮತ್ತು ಖಾಸಗಿ ಕಂಪನಿಗಳಿಗೆ ಗೋಲ್ಡನ್ ಟಿಕ್ ಮಾರ್ಕ್ ಅನ್ನು ನೀಡಲು ಟ್ವಿಟರ್ ಪ್ರಾರಂಭಿಸಿದೆ. ಆದರೆ ಉಳಿದ ಪರಿಶೀಲಿಸಿದ ಖಾತೆಗಳಿಗೆ ನೀಲಿ ಟಿಕ್ ಮಾರ್ಕ್ ಮುಂದುವರೆಯಲಿದೆ.

ಇದನ್ನು ಓದಿ: ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ದೇಶದಲ್ಲಿ 44 ಸಾವಿರ ಖಾತೆಗಳನ್ನು ನಿಷೇಧಿಸಿದ ಟ್ವಿಟರ್
  
ಟ್ವಿಟರ್ ಕೇಂದ್ರ ಸರ್ಕಾರದ ಅಧಿಕೃತ ಟ್ವಿಟರ್ ಖಾತೆ ಇದ್ದ ಬ್ಲೂ ಟಿಕ್ ಮಾರ್ಕ್ ಅನ್ನು ಗ್ರೇ ಟಿಕ್ ಗೆ ಬದಲಾಯಿಸಿದೆ. ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಖಾತೆಯ ಬ್ಲೂ ಟಿಕ್ ಮಾರ್ಕ್ ಅನ್ನು ಬದಲಾಯಿಸಿದೆ. ಪ್ರಧಾನಿಯವರ ಟ್ವಿಟರ್ ಖಾತೆಗೆ 85.1 ಮಿಲಿಯನ್ ಫಾಲೋವರ್ಸ್ ಇದ್ದಾರೆ.

ಕಂಪನಿಯು ಡಿಸೆಂಬರ್ 12 ರಂದು ಟ್ವಿಟರ್‌ನಲ್ಲಿ ಕೆಲವು ಬ್ಯುಸಿನೆಸ್ ಖಾತೆಗಳನ್ನು ಗೋಲ್ಡನ್ ಟಿಕ್ ಮಾರ್ಕ್‌ನೊಂದಿಗೆ 'ಅಧಿಕೃತ' ಲೇಬಲ್ ಅನ್ನು ಬದಲಾಯಿಸುವುದಾಗಿ ಘೋಷಿಸಿತ್ತು. 

ನಕಲಿ ಖಾತೆಗಳ ಹಾವಳಿ ನಿಯಂತ್ರಿಸಲು ಕಂಪನಿಗಳು, ಸೆಲಿಬ್ರಿಟಿಗಳು, ಸರ್ಕಾರಿ ಮುಖ್ಯಸ್ಥರು, ಪತ್ರಕರ್ತರ ನಿಜವಾದ ಖಾತೆಗಳನ್ನು ಪರಿಶೀಲಿಸಿ ಟ್ವಿಟರ್‌ ಅವರಿಗೆ ಬ್ಲೂಟಿಕ್‌, ಗ್ರೇ ಟಿಕ್ ಮತ್ತು ಗೋಲ್ಡನ್ ಟಿಕ್ ನೀಡುತ್ತದೆ. ಈ ಟಿಕ್ ನಿಂದಾಗಿ ನೈಜ ಖಾತೆ ಹಾಗೂ ನಕಲಿ ಖಾತೆ ನಡುವೆ ವ್ಯತ್ಯಾಸ ಗುರುತಿಸಲು ಸಹಾಯವಾಗುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!