ವಾಣಿಜ್ಯ

ಆಗಸ್ಟ್ 7ರಿಂದ ಆಕಾಶ ಏರ್ ಲೈನ್ಸ್ ವಾಣಿಜ್ಯ ಹಾರಾಟ ಆರಂಭ; ಬುಕಿಂಗ್ ಶುರು

Lingaraj Badiger

ನವದೆಹಲಿ: ರಾಕೇಶ್ ಜುಂಜುನ್‌ವಾಲಾರ ಆಕಾಶ ಏರ್ ವಿಮಾನಯಾನ ಸಂಸ್ಥೆ ತನ್ನ ಮೊದಲ ವಾಣಿಜ್ಯ ಹಾರಾಟವನ್ನು ಆಗಸ್ಟ್ 7 ರಂದು ಆರಂಭಿಸಲಿದೆ. ಮುಂಬೈ-ಅಹಮದಾಬಾದ್ ಮಾರ್ಗದಲ್ಲಿ ಬೋಯಿಂಗ್ 737 ಮ್ಯಾಕ್ಸ್ ವಿಮಾನ ತನ್ನ ಮೊದಲ ಸೇವೆಯನ್ನು ಪ್ರಾರಂಭಿಸಲಿದೆ.

ಆಗಸ್ಟ್ 7 ರಿಂದ ಮುಂಬೈ-ಅಹಮದಾಬಾದ್ ಮಾರ್ಗದಲ್ಲಿ ವಾರಕ್ಕೊಮ್ಮೆ 28 ವಿಮಾನಗಳು ಕಾರ್ಯನಿರ್ವಹಿಸಲಿವೆ ಮತ್ತು ಆಗಸ್ಟ್ 13 ರಿಂದ ಬೆಂಗಳೂರು-ಕೊಚ್ಚಿ ಮಾರ್ಗದಲ್ಲಿ 28 ವಿಮಾನಗಳ ಟಿಕೆಟ್ ಬುಕಿಂಗ್ ಪ್ರಾರಂಭವಾಗಿದೆ ಎಂದು ಆಕಾಶ ಏರ್ ಶುಕ್ರವಾರ ಪ್ರಕಟಣೆಯಲ್ಲಿ ತಿಳಿಸಿದೆ. ಎರಡು ಬೋಯಿಂಗ್ 737 ಮ್ಯಾಕ್ಸ್ ವಿಮಾನಗಳಲ್ಲಿ ಹಾರಾಟ ನಡೆಸಲಿವೆ  ಎಂದು ಹೇಳಿದೆ.

ಬೋಯಿಂಗ್ ಈಗಾಗಲೇ  ಒಂದು ವಿಮಾನವನ್ನು ವಿತರಿಸಿದ್ದು, ಎರಡನೆ ವಿಮಾನವನ್ನು ಈ ತಿಂಗಳ ಕೊನೆಯಲ್ಲಿ ವಿತರಿಸಲಿದೆ ಎಂದಿದೆ. “ನಾವು ಮುಂಬೈ ಮತ್ತು ಅಹಮದಾಬಾದ್ ನಡುವೆ ಹೊಚ್ಚಹೊಸ ಬೋಯಿಂಗ್ 737 ಮ್ಯಾಕ್ಸ್ ವಿಮಾನದೊಂದಿಗೆ ಕಾರ್ಯಾಚರಣೆಯನ್ನು ಪ್ರಾರಂಭಿಸುತ್ತೇವೆ” ಎಂದು ಆಕಾಶ ಏರ್‌ನ ಸಹ-ಸಂಸ್ಥಾಪಕ ಮತ್ತು ಮುಖ್ಯ ವಾಣಿಜ್ಯ ಅಧಿಕಾರಿ ಪ್ರವೀಣ್ ಅಯ್ಯರ್ ಅವರು ಹೇಳಿದ್ದಾರೆ.

ನಮ್ಮ ನೆಟ್‌ವರ್ಕ್ ವಿಸ್ತರಣೆ ಯೋಜನೆಗಳನ್ನು ಬೆಂಬಲಿಸಲು ನಾವು ಹಂತಹಂತವಾದ ವಿಧಾನವನ್ನು ಅಳವಡಿಸಿಕೊಳ್ಳುತ್ತೇವೆ, ಹಂತಹಂತವಾಗಿ ಹೆಚ್ಚಿನ ನಗರಗಳನ್ನು ಸಂಪರ್ಕಿಸುತ್ತೇವೆ, ನಮ್ಮ ಮೊದಲ ವರ್ಷದಲ್ಲಿ ನಾವು ಪ್ರತಿ ತಿಂಗಳು ನಮ್ಮ ಫ್ಲೀಟ್‌ಗೆ ಎರಡು ವಿಮಾನಗಳನ್ನು ಸೇರಿಸುತ್ತೇವೆ” ಎಂದು ಅಯ್ಯರ್ ತಿಳಿಸಿದ್ದಾರೆ.

SCROLL FOR NEXT