ವಾಣಿಜ್ಯ

ಭಾರತದ ಅತ್ಯಂತ ಶ್ರೀಮಂತ ಮಹಿಳೆ ಪಟ್ಟ ಉಳಿಸಿಕೊಂಡ ರೋಶನಿ ನಾಡರ್

Lingaraj Badiger

ಮುಂಬೈ: ಎಚ್‌ಸಿಎಲ್ ಟೆಕ್ನಾಲಜೀಸ್‌ನ ಅಧ್ಯಕ್ಷೆ ರೋಶನಿ ನಾಡರ್ ಮಲ್ಹೋತ್ರಾ ಅವರು ಭಾರತದ ಅತ್ಯಂತ ಶ್ರೀಮಂತ ಮಹಿಳೆ ಸ್ಥಾನವನ್ನು ಉಳಿಸಿಕೊಂಡಿದ್ದು, 2021 ರಲ್ಲಿ ಅವರ ಆಸ್ತಿಯ ನಿವ್ವಳ ಮೌಲ್ಯವು 84,330 ಕೋಟಿ ರೂ. ಆಗಿದ್ದು, ಅವರ ಆಸ್ತಿ ಶೇ. 54 ರಷ್ಟು ಹೆಚ್ಚಳವಾಗಿದೆ.

ಇಂದು ಪ್ರಕಟವಾದ ಕೋಟಾಕ್ ಖಾಸಗಿ ಬ್ಯಾಂಕಿಂಗ್-ಹುರುನ್ ಪಟ್ಟಿಯ ಪ್ರಕಾರ, ಒಂದು ದಶಕದ ಹಿಂದೆ ಸೌಂದರ್ಯ ಕೇಂದ್ರಿತ ಬ್ರ್ಯಾಂಡ್ ನೈಕಾ ಆರಂಭಿಸಲು ತನ್ನ ಹೂಡಿಕೆ ಬ್ಯಾಂಕಿಂಗ್ ವೃತ್ತಿಯನ್ನು ತ್ಯಜಿಸಿದ ಫಲ್ಗುಣಿ ನಾಯರ್ ಅವರು 57,520 ಕೋಟಿ ರೂ.ಗಳ ನಿವ್ವಳ ಮೌಲ್ಯದೊಂದಿಗೆ ಸ್ವಯಂ ನಿರ್ಮಿತ ಶ್ರೀಮಂತ ಮಹಿಳೆಯಾಗಿ ಹೊರಹೊಮ್ಮಿದ್ದಾರೆ.

ಈ ವರ್ಷ 59 ವರ್ಷದ ನಾಯರ್ ಅವರ ಆಸ್ತಿ ಶೇಕಡಾ 963 ರಷ್ಟು ಹೆಚ್ಚಳವಾಗಿದ್ದು, ಒಟ್ಟಾರೆಯಾಗಿ ದೇಶದ ಎರಡನೇ ಶ್ರೀಮಂತ ಮಹಿಳೆಯಾಗಿದ್ದಾರೆ. ಹೆಚ್‌ಸಿಎಲ್ ಟೆಕ್ನಾಲಜೀಸ್ ಸಂಸ್ಥಾಪಕ ಶಿವ ನಾಡಾರ್ ಅವರ ಪುತ್ರಿ 40 ವರ್ಷದ ಮಲ್ಹೋತ್ರಾ ಅವರನ್ನು ಹಿಂದಿಕ್ಕಿದ್ದಾರೆ ಎಂದು ವರದಿ ತಿಳಿಸಿದೆ.

ಬಯೋಕಾನ್‌ನ ಕಿರಣ್ ಮಜುಂದಾರ್-ಶಾ ಅವರ ಸಂಪತ್ತು ಶೇಕಡಾ 21 ರಷ್ಟು ಕುಸಿತ ಕಂಡಿದೆ. ಹೀಗಾಗಿ 29,030 ಕೋಟಿ ರೂಪಾಯಿ ಸಂಪತ್ತಿನೊಂದಿಗೆ ದೇಶದ ಮೂರನೇ ಶ್ರೀಮಂತ ಮಹಿಳೆಯಾಗಿ ಹೊರಹೊಮ್ಮಿದ್ದಾರೆ.

ಈ ಪಟ್ಟಿಯಲ್ಲಿ ದಿವಿಸ್ ಲ್ಯಾಬೊರೇಟರೀಸ್‌ನ ನಿಲಿಮಾ ಮೊಟಪರ್ತಿ( 28,180 ಕೋಟಿ ರೂ. ಆಸ್ತಿ), ಜೊಹೊದ ರಾಧಾ ವೆಂಬು (ರೂ. 26,620 ಕೋಟಿ), ಯುಎಸ್‌ವಿಯ ಲೀನಾ ಗಾಂಧಿ ತಿವಾರಿ(ರೂ. 24,280 ಕೋಟಿ) ಅವರು ಸಹ ಸ್ಥಾನ ಪಡೆದಿದ್ದಾರೆ.

SCROLL FOR NEXT