ಜಾನ್ಸನ್ಸ್ ಬೇಬಿ ಪೌಡರ್ 
ವಾಣಿಜ್ಯ

ಜಾನ್ಸನ್ಸ್ ಬೇಬಿ ಪೌಡರ್ ಹೊಸ ಪರೀಕ್ಷೆಗೆ ಬಾಂಬೆ ಹೈಕೋರ್ಟ್ ನಿರ್ದೇಶನ: ತಯಾರಿಕೆಗೆ ಸಮ್ಮತಿ, ಆದರೆ ಮಾರಾಟಕ್ಕಿಲ್ಲ ಅನುಮತಿ!

ಜಾನ್ಸನ್ಸ್ ಬೇಬಿ ಪೌಡರ್ ಹೊಸ ಪರೀಕ್ಷೆಗೆ ಬಾಂಬೆ ಹೈಕೋರ್ಟ್ ನಿರ್ದೇಶನ ನೀಡಿದ್ದು, ಪೌಡರ್ ತಯಾರಿಕೆಗೆ ಸಂಸ್ಥೆಗೆ ಸಮ್ಮತಿ ನೀಡಿದೆಯಾದರೂ ಮಾರಾಟಕ್ಕೆ ಅನುಮತಿ ನೀಡಿಲ್ಲ ಎಂದು ತಿಳಿದುಬಂದಿದೆ.

ಮುಂಬೈ: ಜಾನ್ಸನ್ಸ್ ಬೇಬಿ ಪೌಡರ್ ಹೊಸ ಪರೀಕ್ಷೆಗೆ ಬಾಂಬೆ ಹೈಕೋರ್ಟ್ ನಿರ್ದೇಶನ ನೀಡಿದ್ದು, ಪೌಡರ್ ತಯಾರಿಕೆಗೆ ಸಂಸ್ಥೆಗೆ ಸಮ್ಮತಿ ನೀಡಿದೆಯಾದರೂ ಮಾರಾಟಕ್ಕೆ ಅನುಮತಿ ನೀಡಿಲ್ಲ ಎಂದು ತಿಳಿದುಬಂದಿದೆ.

ಮುಲುಂಡ್ ಫೆಸಿಲಿಟೀಸ್‌ನಲ್ಲಿ ತಯಾರಿಸಲಾಗುವ ಬೇಬಿ ಪೌಡರ್‌ ಮಾದರಿಗಳನ್ನು ಹೊಸ ಪರೀಕ್ಷೆಗಾಗಿ  ಮೂರು ಪ್ರಯೋಗಾಲಯಗಳಿಗೆ ಕಳುಹಿಸುವಂತೆ ಆಹಾರ ಮತ್ತು ಔಷಧ ಆಡಳಿತಕ್ಕೆ (ಎಫ್‌ಡಿಎ) ನ್ಯಾಯಮೂರ್ತಿಗಳಾದ ಎಸ್‌ ವಿ ಗಂಗಾಪುರವಾಲಾ ಮತ್ತು ಎಸ್‌ ಜಿ ದಿಗೆ ಅವರಿದ್ದ ವಿಭಾಗೀಯ ಪೀಠ ನಿರ್ದೇಶಿಸಿದೆ.

ಮುಂಬೈನ ಮುಲುಂಡ್‌ ಕೈಗಾರಿಕಾ ಪ್ರದೇಶದಲ್ಲಿ ಬೇಬಿ ಪೌಡರ್‌ ತಯಾರಿಕೆಗ ಜಾನ್ಸನ್ ಪ್ರೈವೇಟ್ ಲಿಮಿಟೆಡ್‌ಗೆ ಬಾಂಬೆ ಹೈಕೋರ್ಟ್‌ ಬುಧವಾರ ಅನುಮತಿ ನೀಡಿದೆ. ಆದರೆ ಅದರ ಮಾರಾಟ ಮತ್ತು ವಿತರಣೆಗೆ ಅಸಮ್ಮತಿ ಸೂಚಿಸಿದೆ. ಮಹಾರಾಷ್ಟ್ರದಲ್ಲಿರುವ ತನ್ನ ಬೇಬಿ ಪೌಡರ್  ಉತ್ಪಾದನಾ ಪರವಾನಗಿ ರದ್ದುಗೊಳಿಸಿರುವುದನ್ನು ಪ್ರಶ್ನಿಸಿ ನ್ಯಾಯವಾದಿ ಸಂಸ್ಥೆ ನಿಶಿತ್ ದೇಸಾಯಿ ಅಂಡ್‌ ಅಸೋಸಿಯೇಟ್ಸ್ ಮೂಲಕ ಜಾನ್ಸನ್ ಅಂಡ್‌ ಜಾನ್ಸನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. 

ಸೆಪ್ಟೆಂಬರ್ 15ರಂದು ಕಂಪನಿಯ ಪರವಾನಗಿಯನ್ನು ರದ್ದುಗೊಳಿಸಿ ಡಿಸೆಂಬರ್ 15, 2022 ರಿಂದ ಜಾರಿಗೆ ಬರುವಂತೆ ಎಫ್‌ಡಿಎ ಆದೇಶ ಹೊರಡಿಸಿದೆ. ಐದು ದಿನಗಳ ಬಳಿಕ ಆದೇಶ ಪರಿಶೀಲಿಸಿದ ಎಫ್‌ಡಿಎ ಆಯುಕ್ತರು ತಕ್ಷಣವೇ ಜಾರಿಗೆ ಬರುವಂತೆ ಮುಂಬೈನ ಮುಲುಂಡ್‌ ಪ್ರದೇಶದಲ್ಲಿ ತಯಾರಿಸಿದ ಬೇಬಿ ಪೌಡರ್‌ ತಯಾರಿಕೆ ಮತ್ತು ಮಾರಾಟ ಸ್ಥಗಿತಗೊಳಿಸುವಂತೆ ಸೂಚಿಸಿದ್ದರು ಎಂದು ಅರ್ಜಿಯಲ್ಲಿ ದೂರಲಾಗಿತ್ತು. ಹೆಚ್ಚುವರಿ ಸರ್ಕಾರಿ ಪ್ಲೀಡರ್ ಮಿಲಿಂದ್ ಮೋರೆ ಅವರು ನ್ಯಾಯಾಲಯದ ಹಿಂದಿನ ವಿಚಾರಣೆ ವೇಳೆ ನೀಡಿದ್ದ ಆದೇಶದಂತೆ ಬೇಬಿ ಪೌಡರ್‌ ಪರೀಕ್ಷೆಗಾಗಿನ ಪ್ರಯೋಗಾಲಯಗಳ ಪಟ್ಟಿಯನ್ನು ಇಂದು ಸಲ್ಲಿಸಿದರು. 

ದೋಷ ತಪ್ಪಿಸುವ ಸಲುವಾಗಿ ಮೂರು ಪ್ರಯೋಗಾಲಯಗಳನ್ನು ಆಯ್ದುಕೊಳ್ಳುವಂತೆ ನ್ಯಾಯಾಲಯ ಪಕ್ಷಕಾರರಿಗೆ ಸೂಚಿಸಿತು. ಬೇಬಿ ಪೌಡರ್‌ “ಮಾದರಿಗಳನ್ನು 2-3 ಪ್ರಯೋಗಾಲಯಗಳಿಗೆ ಕಳಿಸುವಂತೆ ನಾವು ನಿರ್ದೇಶಿಸುತ್ತಿದ್ದೇವೆ. ಯಾವುದೇ ದೋಷ ಇರಬಾರದು. ಕೇವಲ ಒಂದು ಪ್ರಯೋಗಾಲಯಕ್ಕೆ ನಾವು ಮಾದರಿ ಕಳಿಸುವುದಿಲ್ಲ” ಎಂದು ನ್ಯಾಯಾಲಯ ಹೇಳಿದ್ದು, ಮಾತ್ರವಲ್ಲದೇ ಪಕ್ಷಕಾರರು ಒಪ್ಪಿದ ಮೂರು ಪ್ರಯೋಗಾಲಯಗಳಿಗೆ ಮಾದರಿಗಳನ್ನು ಕಳುಹಿಸಿಕೊಡುವಂತೆ ವಿವಿಧ ಸೂಚನೆಗಳೊಡನೆ ನ್ಯಾಯಾಲಯ ಆಜ್ಞಾಪಿಸಿತು.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT