ವಾಣಿಜ್ಯ

ಟಾಟಾ ತೆಕ್ಕೆಗೆ ಬಿಸ್ಲೆರಿ? ಮಾತುಕತೆ ಬಗ್ಗೆ ಬಿಸ್ಲೆರಿ ಮಾಲಿಕ ಚೌಹಾಣ್ ನೀಡಿದ ಸ್ಪಷ್ಟನೆ ಇದು...

Srinivas Rao BV

ನವದೆಹಲಿ: ಥಮ್ಸ್ ಅಪ್, ಗೋಲ್ಡ್ ಸ್ಪಾಟ್, ಲಿಮ್ಕಾಗಳನ್ನು ಕೋಕಾ ಕೋಲಾಗಳಿಗೆ ಮಾರಾಟ ಮಾಡಿದ್ದ ಉದ್ಯಮಿ ರಮೇಶ್ ಚೌಹಾಣ್ ಈಗ ಬಿಸ್ಲೆರಿ ಅಂತಾರಾಷ್ಟ್ರೀಯ ಸಂಸ್ಥೆಯನ್ನು ಟಾಟಾ ಗ್ರಾಹಕ ಉತ್ಪನ್ನಗಳ ಸಂಸ್ಥೆ (ಟಿಸಿಪಿಎಲ್) ಗೆ ಮಾರಾಟ ಮಾಡಲು ಮುಂದಾಗಿದ್ದಾರೆ ಎಂಬ ವರದಿಗಳು ಪ್ರಕಟವಾಗಿದೆ.

7,000 ಕೋಟಿ ರೂಪಾಯಿ ಆಸುಪಾಸಿನಲ್ಲಿ ಸಂಸ್ಥೆಯನ್ನು ಮಾರಾಟದ ಮಾತುಕತೆ ನಡೆದಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಚೌಹಾಣ್, ಸಂಸ್ಥೆಯನ್ನು ಮಾರಾಟ ಮಾಡುವ ಉದ್ದೇಶವೇನೋ ಇದೆ. ಆದರೆ ಇನ್ನೂ ಯಾವುದೂ ಅಧಿಕೃತವಾಗಿಲ್ಲ. ಹಲವರೊಂದಿಗೆ ಮಾತುಕತೆ ನಡೆದಿದೆ. ಟಾಟಾದೊಂದಿಗೆ ಮಾತುಕತೆ ನಡೆಯುತ್ತಿದೆ ಅಷ್ಟೇ ಎಂದು ಸ್ಪಷ್ಟಪಡಿಸಿದ್ದಾರೆ.

ಚೌಹಾಣ್ (82) ಅವರಿಗೆ ಇತ್ತೀಚಿನ ದಿನಗಳಲ್ಲಿ ಅನಾರೋಗ್ಯ ಎದುರಾಗುತ್ತಿದ್ದು, ಬಿಸ್ಲೆರಿ ಸಂಸ್ಥೆಯನ್ನು ನೋಡಿಕೊಳ್ಳಲು ಅಥವಾ ಉದ್ಯಮ ವಿಸ್ತರಿಸಲು ಅವರಿಗೆ ಉತ್ತರಾಧಿಕಾರಿಗಳಿಲ್ಲ. ಮಗಳು ಜಯಂತಿಗೆ ಉದ್ಯಮದಲ್ಲಿ ಹೆಚ್ಚಿನ ಆಸಕ್ತಿ ಇಲ್ಲದ ಕಾರಣ ಈ ಮಾರಾಟ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಬಿಸ್ಲೆರಿ ಭಾರತದ ಅತಿ ದೊಡ್ಡ ಪ್ಯಾಕೇಜ್ಡ್ ನೀರಿನ ಕಂಪನಿಯಾಗಿದೆ. 

ರಿಲಾಯನ್ಸ್ ರೀಟೆಲ್, ನೆಸ್ಲೆ,  ಡಾನೋನ್ ಸೇರಿದಂತೆ ಹಲವು ಕಂಪನಿಗಳು ಬಿಸ್ಲೆರಿಯನ್ನು ಖರೀದಿಸಲು ಆಸಕ್ತಿ ತೋರಿವೆ, ಟಾಟಾ ದೊಂದಿಗೆ ಕಳೆದ 2 ವರ್ಷಗಳಿಂದ ಬಿಸ್ಲೆರಿ ಮಾರಾಟದ ಮಾರುಕತೆ ನಡೆಯುತ್ತಿದೆ. 

SCROLL FOR NEXT