ವಾಣಿಜ್ಯ

ವ್ಯಾಪಾರ ಕೊರತೆ: ಮಾರ್ಚ್ ವೇಳೆಗೆ ರೂಪಾಯಿ ಮೌಲ್ಯ ಪ್ರತಿ ಡಾಲರ್‌ಗೆ 85 ರೂ. ತಲುಪಬಹುದು!

Srinivasamurthy VN

ಮುಂಬೈ: ಏರುತ್ತಿರುವ ಕಚ್ಚಾ ತೈಲ ಬೆಲೆಗಳು, ಹೆಚ್ಚಿನ ವ್ಯಾಪಾರ ಕೊರತೆ ಮತ್ತು ವಿದೇಶಿ ವಿನಿಮಯ ಮೀಸಲು ಖಾಲಿಯಾಗುತ್ತಿರುವ ಕಾರಣದಿಂದಾಗಿ ಮಾರ್ಚ್ ವೇಳೆಗೆ ಭಾರತೀಯ ರೂಪಾಯಿ ಮೌಲ್ಯ ಡಾಲರ್‌ಗೆ 84-85ರೂಗೆ ಇಳಿಯಬಹುದು ಎಂದು ವರದಿಯೊಂದು ಹೇಳಿದೆ.

ಈ ಕುರಿತಂತೆ ಎಲಾರಾ ಗ್ಲೋಬಲ್ ರಿಸರ್ಚ್ ಸೋಮವಾರ ಮಾಹಿತಿ ನೀಡಿದ್ದು, ಭಾರತೀಯ ರೂಪಾಯಿಯು 82.6825ರೂ ರ ದಾಖಲೆಯನ್ನು ತಲುಪಿದ್ದು, "ರೂಪಾಯಿ, ಇಲ್ಲಿಯವರೆಗೆ, ಒಂದು ಅಮೆರಿಕ ಫೆಡರಲ್ ರಿಸರ್ವ್ ಮತ್ತು ಬಡ್ಡಿದರದ ವ್ಯತ್ಯಾಸಗಳು ಅದರ ದೃಷ್ಟಿಕೋನದ ಮೇಲೆ ಆಕ್ರಮಣಕಾರಿ ಜಾಗತಿಕ ಬಿಗಿಗೊಳಿಸುವಿಕೆಯ ಭಾರವನ್ನು ಹೊತ್ತಿದೆ ಎಂದು ಹೇಳಿದೆ.

ಈ ಕುರಿತು ಮಾತನಾಡಿರುವ ಎಲಾರಾದ ಅರ್ಥಶಾಸ್ತ್ರಜ್ಞ ಗರಿಮಾ ಕಪೂರ್ ಅವರು, "ಎಲಿವೇಟೆಡ್ ಟ್ರೇಡ್ ಡಿಫಿಸಿಟ್ ಪ್ರಿಂಟ್‌ಗಳು ಮತ್ತು ಇತ್ತೀಚಿನ ಕಚ್ಚಾ ತೈಲ ಬೆಲೆಗಳ ಏರಿಕೆಯು ಸಮೀಪದ-ಅವಧಿಯ ಹೆಡ್‌ವಿಂಡ್‌ಗಳಿಗೆ (ಮಾರಾಟ ಒತ್ತಡ)ಕಾರಣವಾಗುತ್ತದೆ. ಡಿಸೆಂಬರ್ ವೇಳೆಗೆ ರೂಪಾಯಿಯು ಪ್ರತಿ ಯುಎಸ್ ಡಾಲರ್‌ಗೆ 83.50 ಗೆ ಕುಸಿಯುವ ಸಂಭವವಿದೆ. ಮಾರ್ಚ್ ವೇಳೆಗೆ ಈ ಪ್ರಮಾಣ ಇನ್ನೂ ಅಂದರೆ 84-85ರೂಗೆ ಇಳಿಯಬಹುದು ಎಂದು ಅವರು ಹೇಳಿದ್ದಾರೆ.

ಸೋಮವಾರ ರೂಪಾಯಿ ತನ್ನ ಇತ್ತೀಚಿನ ದಾಖಲೆಯನ್ನು ಹಿಂದಿಕ್ಕಿ ಮತ್ತೆ ಸಾರ್ವಕಾಲಿಕ ಮಟ್ಟಕ್ಕೆ ಕುಸಿದಿದ್ದು, ಅಮೆರಿಕ ಉದ್ಯೋಗಗಳ ವರದಿಯ ನಂತರ ದಾಖಲೆಯ ಕನಿಷ್ಠ ಅಂದರೆ 82.6825ರೂ ಕುಸಿದಿದೆ. ಸೆಪ್ಟೆಂಬರ್‌ನಲ್ಲಿ ನಿರೀಕ್ಷಿತ ಉದ್ಯೋಗಗಳ ಸೇರ್ಪಡೆಗಳು ಮತ್ತು ನಿರುದ್ಯೋಗ ದರದಲ್ಲಿನ ಅನಿರೀಕ್ಷಿತ ಕುಸಿತವು ಮುಂದಿನ ತಿಂಗಳು ಮತ್ತೊಂದು 75 ಬೇಸಿಸ್ ಪಾಯಿಂಟ್‌ಗಳ ಫೆಡ್ ದರ ಏರಿಕೆಯ ಮುನ್ನೆಚ್ಚರಿಕೆ ನೀಡಿದೆ. ಇದು ರೂಪಾಯಿಯ ಮೇಲೆ ಒತ್ತಡ ಹೇರುತ್ತದೆ. ಏರುತ್ತಿರುವ ತೈಲ ಬೆಲೆಗಳು ಈ ಸವಾಲುಗಳನ್ನು ಹೆಚ್ಚಿಸಿವೆ. 

ಕಳೆದ ವಾರ OPEC 2020 ರಿಂದ ತನ್ನ ಅತಿದೊಡ್ಡ ಪೂರೈಕೆ ಕಡಿತವನ್ನು ಘೋಷಿಸಿದ ನಂತರ ಬ್ರೆಂಟ್ ಕಚ್ಚಾ ತೈಲದ ಬೆಲೆಯಲ್ಲಿ 11% ಕ್ಕಿಂತ ಹೆಚ್ಚು ಏರಿಕೆಯಾಗಿದೆ, ಇದು ಹಿಂಜರಿತಕ್ಕೆ ಕಾರಣವಾಗಬಹುದು ಎಂಬ ಕಳವಳಗಳ ಹೊರತಾಗಿಯೂ. ಬ್ರೆಂಟ್ ಕಚ್ಚಾ ತೈಲವು ಆರು ವಾರಗಳ ಗರಿಷ್ಠ ಮಟ್ಟಕ್ಕೆ $ 97.04 ತಲುಪಿದೆ.

ಏತನ್ಮಧ್ಯೆ, ಭಾರತದ ವಿದೇಶಿ ವಿನಿಮಯ ಮೀಸಲು ಸೆಪ್ಟೆಂಬರ್ ಅಂತ್ಯದ ವೇಳೆಗೆ $532.66 ಶತಕೋಟಿ ಆಗಿತ್ತು, ಜುಲೈ 2020 ರಿಂದ ಇದು ಕಡಿಮೆಯಾಗಿದ್ದು, ಇದು ವರ್ಷದ ಆರಂಭದಲ್ಲಿ $633.6 ಶತಕೋಟಿಯಿಂದ ಸುಮಾರು 16% ಕುಸಿತವಾಗಿದೆ. ಈ ಕುಸಿತವು ಉದಯೋನ್ಮುಖ ಮಾರುಕಟ್ಟೆಯ ದೇಶಗಳಲ್ಲಿ ಅತ್ಯಧಿಕವಾಗಿದೆ ಎಂದು ಕಪೂರ್ ಹೇಳಿದರು.

SCROLL FOR NEXT