ವಾಣಿಜ್ಯ

ಭಾರತದ ಆರ್ಥಿಕ ಬೆಳವಣಿಗೆ ಮುನ್ನೋಟ ಶೇ.6.8 ಕ್ಕೆ ಇಳಿಸಿದ ಐಎಂಎಫ್

Srinivas Rao BV

ವಾಷಿಂಗ್ ಟನ್: ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಮಂಗಳವಾರದಂದು ತನ್ನ ಮುನ್ನೋಟದಲ್ಲಿ ಭಾರತದ ಆರ್ಥಿಕ ಬೆಳವಣಿಗೆ-2022 ನ್ನು ಶೇ.6.8 ಕ್ಕೆ ಇಳಿಕೆ ಮಾಡಿದೆ. 

ಮುನ್ನೋಟದಲ್ಲಿ ಭಾರತ ಸೇರಿದಂತೆ ಇನ್ನಿತರ ಕೆಲವು ರಾಷ್ಟ್ರಗಳ ಆರ್ಥಿಕ ಬೆಳವಣಿಗೆಯನ್ನು ಇಳಿಕೆ ಮಾಡಿರುವ ಜಾಗತಿಕ ಸಂಸ್ಥೆಗಳ ಪಟ್ಟಿಗೆ ಐಎಂಎಫ್ ಸಹ ಸೇರಿದೆ. ಜುಲೈ ನಲ್ಲಿ ಐಎಂಎಫ್ 2022 ನೇ ಸಾಲಿನಲ್ಲಿ ಭಾರತದ ಜಿಡಿಪಿ ಬೆಳವಣಿಗೆ ದರವನ್ನು ಶೇ.7.4 ಕ್ಕೆ ಅಂದಾಜಿಸಿತ್ತು. ಏಪ್ರಿಲ್-2021 ರಿಂದ ಮಾರ್ಚ್-2022 ರ ಅವಧಿಯ 2021-22 ಆರ್ಥಿಕ ವರ್ಷದಲ್ಲಿ ಭಾರತ ಶೇ.8.7 ರಷ್ಟು ಆರ್ಥಿಕ ಬೆಳವಣಿಗೆ ಸಾಧಿಸಿತ್ತು. 

ಈಗಿನ ಪರಿಸ್ಥಿತಿಯಲ್ಲಿ ಭಾರತದ ಆರ್ಥಿಕತೆ ಜುಲೈ ನಲ್ಲಿ ಅಂದಾಜಿಸಿದ್ದಕ್ಕಿಂತಲೂ 0.6 ರಷ್ಟು ಕಡಿಮೆ ಬೆಳವಣಿಗೆಯನ್ನು ದಾಖಲಿಸಲಿದೆ ಎಂದು ಐಎಂಎಫ್ ತನ್ನ ವರದಿಯಲ್ಲಿ ತಿಳಿಸಿದೆ.

ಕೋವಿಡ್-19 ಸಂದರ್ಭದಲ್ಲಿ ಜಾಗತಿಕ ಮಟ್ಟದಲ್ಲಿ ಉಂಟಾಗಿದ್ದ ಆರ್ಥಿಕ ಬಿಕ್ಕಟ್ಟನ್ನು ಹೊರತುಪಡಿಸಿದರೆ, ಇದು 2001 ರಿಂದ ಅತ್ಯಂತ ದುರ್ಬಲ ಬೆಳವಣಿಗೆಯ ವಿವರವಾಗಿದೆ.
 
ಇನ್ನು 2021 ರಲ್ಲಿ ಶೇ.8.1 ರಷ್ಟು ಬೆಳವಣಿಗೆ ದರವನ್ನು ಹೊಂದಿದ್ದ ಚೀನಾದ ಆರ್ಥಿಕ ಬೆಳವಣಿಗೆಯನ್ನು 2022 ನೇ ಸಾಲಿನಲ್ಲಿ ಶೇ.3.2 ಕ್ಕೆ ಐಎಂಎಫ್ ಅಂದಾಜಿಸಿದೆ.

SCROLL FOR NEXT