ವಾಣಿಜ್ಯ

ಆಗಸ್ಟ್ ನಲ್ಲಿ 9,86,850 ಚಂದಾದಾರರು ನೌಕರರ ಭವಿಷ್ಯ ನಿಧಿಯಡಿ ಸೇರ್ಪಡೆ

Nagaraja AB

ನವದೆಹಲಿ: ಆಗಸ್ಟ್ ತಿಂಗಳಲ್ಲಿ ಭವಿಷ್ಯ ನಿಧಿಯಡಿ ಒಟ್ಟು 9,86,850 ಮಂದಿ ಚಂದಾದಾರರಾಗಿದ್ದಾರೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. 11 ರಷ್ಟು ಕಡಿಮೆಯಾಗಿದೆ.

ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಮಂಗಳವಾರ ಬಿಡುಗಡೆ ಮಾಡಿರುವ ಅಂಕಿ ಅಂಶದಲ್ಲಿ ಈ ಮಾಹಿತಿ ನೀಡಲಾಗಿದೆ.  ನೌಕರರ ಭವಿಷ್ಯ ನಿಧಿ ಯೋಜನೆ, ನೌಕರರ ರಾಜ್ಯ ವಿಮಾ ಯೋಜನೆ ಮತ್ತು ರಾಷ್ಟ್ರೀಯ ಪಿಂಚಣಿ ಯೋಜನೆಯಡಿಯ ಚಂದಾದಾರರ  ಮಾಹಿತಿಯನ್ನು  ಬಳಸಿಕೊಂಡು ಔಪಚಾರಿಕ ಕ್ಷೇತ್ರದಲ್ಲಿನ ನೌಕರರಿಗೆ ಸಂಬಂಧಿಸಿದಂತೆ ಮಾಹಿತಿಯನ್ನು ಸಚಿವಾಲಯ ನೀಡಿದೆ.

ಸೆಪ್ಟೆಂಬರ್ 2017 ರಿಂದ ಆಗಸ್ಟ್ 2022ರವರೆಗೂ  ಒಟ್ಟಾರೇ 5,81,56,630 ಹೊಸ ಗ್ರಾಹಕರು ಇಪಿಎಫ್ ಯೋಜನೆಗೆ ಸೇರ್ಪಡೆಯಾಗಿದ್ದಾರೆ. ಸೆಪ್ಟೆಂಬರ್ 2017 ರಿಂದ 7,22,92,232 ಹೊಸ ಚಂದಾದಾರರು ಇಎಸ್ ಐ ಯೋಜನೆಗೆ ಸೇರ್ಪಡೆಯಾಗಿದ್ದಾರೆ.

ಆಗಸ್ಟ್ ಅವಧಿಯಲ್ಲಿ 65,543 ಗ್ರಾಹಕರು ರಾಷ್ಟ್ರೀಯ ಪಿಂಚಣಿ ಯೋಜನೆಗೆ ಸೇರ್ಪಡೆಯಾಗಿರುವುದಾಗಿ ಮಾಹಿತಿ ನೀಡಲಾಗಿದೆ. ಮುಂದಿನ ವರದಿ ನವೆಂಬರ್ 25 ರಂದು ಬಿಡುಗಡೆಯಾಗಲಿದೆ. 

SCROLL FOR NEXT