ವಾಣಿಜ್ಯ

ಭಾರತವೇ ಜಗತ್ತಿನ ಭವಿಷ್ಯ: ಚಂದ್ರಯಾನ-3 ಕುರಿತು ಬಿಪಿ ಸಿಇಒ ಮೆಚ್ಚುಗೆ

Srinivas Rao BV

ನವದೆಹಲಿ: ಬ್ರಿಟೀಷ್ ಇಂಧನ ಕ್ಷೇತ್ರದ ಪ್ರಮುಖ ಸಂಸ್ಥೆ ಬಿಪಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಬರ್ನಾರ್ಡ್ ಲೂನಿ ಭಾರತವೇ ಭವಿಷ್ಯ ಎಂದು ಹೇಳಿದ್ದಾರೆ. 

ಚಂದ್ರನ ದಕ್ಷಿಣ ಧ್ರುವದ ಮೇಲೆ ಬಾಹ್ಯಾಕಾಶ ನೌಕೆಯನ್ನು ಇಳಿಸಿದ ಮೊದಲ ದೇಶವೆಂಬ ಹೆಗ್ಗಳಿಕೆ ಪಡೆದಿರುವ ಭಾರತದ ಬಗ್ಗೆ ಬರ್ನಾರ್ಡ್ ಲೂನಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಸಿಐಐ ಆಯೋಜಿಸಿದ್ದ ಬಿ20 ಶೃಂಗಸಭೆಯಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು, ಭಾರತ  ನಂಬಲಾಗದ ಹೆಜ್ಜಗಳನ್ನು ಇಡುತ್ತಿದ್ದು, ನವೀನ ಮತ್ತು ಸೃಜನಶೀಲ ಮಾರ್ಗ" ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ. 

ನಾವು ಚಂದ್ರಯಾನ-3 ನ್ನು ಲಂಡನ್ ನಲ್ಲಿ ವೀಕ್ಷಿಸಿದ್ದೆವು. ಜಗತ್ತಿನಲ್ಲಿ ಪ್ರತಿಯೊಬ್ಬರೂ ಭಾರತದ ಬಗ್ಗೆ ಉತ್ಸುಕರಾಗಿದ್ದರು, ಭಾರತ  ಜಗತ್ತಿನ ಭವಿಷ್ಯ ಎಂದು ಲೂನಿ  ಹೇಳಿದ್ದಾರೆ. 

ಬಿಪಿ ಬಂಗಾಳ ಕೊಲ್ಲಿಯಲ್ಲಿ ತೈಲ ಮತ್ತು ಅನಿಲ ಕ್ಷೇತ್ರದಲ್ಲಿ ಶತಕೋಟಿ ಡಾಲರ್‌ಗಳನ್ನು ಹೂಡಿಕೆ ಮಾಡಿದೆ ಮತ್ತು ಎಲೆಕ್ಟ್ರಿಕ್ ವೆಹಿಕಲ್ (EV) ಚಾರ್ಜಿಂಗ್ ಸ್ಟೇಷನ್‌ಗಳನ್ನು ಒಳಗೊಂಡಿರುವ ಇಂಧನ ವ್ಯಾಪಾರ ಜಾಲವನ್ನು ರಿಲಾಯನ್ಸ್ ಇಂಡಸ್ಟ್ರೀಸ್ ಜೊತೆಗೂಡಿ ವೇಗವಾಗಿ ವಿಸ್ತರಿಸುತ್ತಿದೆ.

ಭಾರತವು ವಿಶ್ವದ ಮೂರನೇ ಅತಿದೊಡ್ಡ ಇಂಧನ ಗ್ರಾಹಕನಾಗಿದ್ದು, ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ. ಚೀನಾದಂತಹ ಇತರ ಸ್ಪರ್ಧಾತ್ಮಕ ಆರ್ಥಿಕತೆಗಳು ನಿಧಾನವಾಗುತ್ತಿರುವಾಗ, ಭಾರತವು ಬೆಳವಣಿಗೆಯನ್ನು ಮುಂದುವರೆಸುತ್ತಿದೆ ಮತ್ತು ವಲಯಗಳಾದ್ಯಂತ ಹೂಡಿಕೆದಾರರು ಕಣ್ಣಿಟ್ಟಿದ್ದಾರೆ. 

SCROLL FOR NEXT