ವಾಣಿಜ್ಯ

SBI ಗ್ರಾಹಕರಿಗೆ ಸಿಹಿಸುದ್ದಿ: ಎಫ್‌ಡಿ ಮೇಲಿನ ಬಡ್ಡಿ ದರ ಹೆಚ್ಚಳ, ಇಲ್ಲಿದೆ ಮಾಹಿತಿ

Srinivasamurthy VN

ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ದೇಶದ ಅತೀ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಆಯ್ದ ಅವಧಿಯ ನಿಶ್ಚಿತ ಠೇವಣಿಗಳ(ಎಫ್‌ಡಿ) ಮೇಲಿನ ಬಡ್ಡಿ ದರ ಹೆಚ್ಚಳ ಮಾಡಿದೆ.

ದೇಶದ ಅತಿ ದೊಡ್ಡ ಬ್ಯಾಂಕ್ ಎಸ್‌ಬಿಐ ಆಯ್ದ ಅವಧಿಯ ನಿಶ್ಚಿತ ಠೇವಣಿಗಳ(ಎಫ್‌ಡಿ) ಮೇಲಿನ ಬಡ್ಡಿ ದರದಲ್ಲಿ 50 ಮೂಲಾಂಶಗಳವರೆಗೆ ಹೆಚ್ಚಳ ಮಾಡಿದೆ. ಪರಿಷ್ಕೃತ ಬಡ್ಡಿ ದರ ಇಂದಿನಿಂದಲೇ ಜಾರಿಗೆ ಬಂದಿದೆ. 

ಬ್ಯಾಂಕಿನ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, 180-210 ದಿನಗಳ ನಡುವಿನ ಠೇವಣಿಯ ಮೇಲಿನ ವಾರ್ಷಿಕ ಬಡ್ಡಿ ದರ ಸದ್ಯ ಶೇ 5.25ರಷ್ಟಿದ್ದು, ಅದನ್ನು ಶೇ. 5.75ಕ್ಕೆ ಹೆಚ್ಚಿಸಲಾಗಿದೆ. ಅದೇ ರೀತಿ, 7-45 ದಿನಗಳವರೆಗಿನ ಠೇವಣಿಯ ಮೇಲಿನ ಬಡ್ಡಿ ದರವನ್ನು ಈ ಹಿಂದಿನ ಶೇ 3ರಿಂದ ಶೇ 3.50ಕ್ಕೆ ಹೆಚ್ಚಿಸಲಾಗಿದೆ.

46-179 ದಿನಗಳ ಠೇವಣಿ(ಶೇ 4.75 ರ ಪರಿಷ್ಕೃತ ದರ), 211 ದಿನಗಳಿಂದ ಒಂದು ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿ (ಶೇ 6 ಪರಿಷ್ಕೃತ ದರ) ಮತ್ತು ಮೂರು ವರ್ಷಗಳಿಂದ ಐದು ವರ್ಷಗಳಿಗಿಂತ ಕಡಿಮೆ ಇರುವ ಠೇವಣಿಯ ( ಪರಿಷ್ಕೃತ ದರ ಶೇ 6.75) ಬಡ್ಡಿ ದರ ಹೆಚ್ಚಿಸಲಾಗಿದೆ.

ಈ ದರ ಹೊಂದಾಣಿಕೆಯು 2 ಕೋಟಿ ರೂಗಿಂತ ಕಡಿಮೆಯ ನಿಶ್ಚಿತ ಠೇವಣಿಗಳಿಗೆ ಅನ್ವಯವಾಗಲಿದೆ ಎಂದು ಹೇಳಲಾಗಿದೆ. 

SCROLL FOR NEXT