ವಾಣಿಜ್ಯ

ಚಿಲ್ಲರೆ ಹಣದುಬ್ಬರ ಶೇ.6.52 ರಷ್ಟು ಏರಿಕೆ; ಮೂರು ತಿಂಗಳಲ್ಲೇ ಅತ್ಯಧಿಕ

Srinivas Rao BV

ನವದೆಹಲಿ: ರಿಸರ್ವ್ ಬ್ಯಾಂಕ್ ನ ಗರಿಷ್ಠ ಮಿತಿಯನ್ನು ಚಿಲ್ಲರೆ ಹಣದುಬ್ಬರ ದಾಟಿದ್ದು, ಜನವರಿ ತಿಂಗಳಲ್ಲಿ ಮೂರು ತಿಂಗಳಲ್ಲೇ ಅತ್ಯಧಿಕ ಅಂದರೆ ಶೇ.6.52ಕ್ಕೆ ಏರಿಕೆಯಾಗಿದೆ.

ಧಾನ್ಯಗಳು ಮತ್ತು ಪ್ರೋಟೀನ್-ಭರಿತ ವಸ್ತುಗಳು ಸೇರಿದಂತೆ ಆಹಾರ ಪದಾರ್ಥಗಳ ಬೆಲೆ ಏರಿಕೆಯ ಪರಿಣಾಮವಾಗಿ ಚಿಲ್ಲರೆ ಹಣದುಬ್ಬರ ಏರಿಕೆಯಾಗಿದೆ. ನವೆಂಬರ್ ಹಾಗೂ ಡಿಸೆಂಬರ್ 2022 ನ್ನು ಹೊರತುಪಡಿಸಿದರೆ ಚಿಲ್ಲರೆ ಹಣದುಬ್ಬರ ಜನವರಿ ತಿಂಗಳಲ್ಲಿ ಆರ್ ಬಿಐ ನ ಗರಿಷ್ಠ ಮಿತಿಯಾಗಿರುವ ಶೇ.6 ನ್ನು ದಾಟಿದೆ.

ಗ್ರಾಹಕ ದರ ಸೂಚ್ಯಂಕ (ಸಿಪಿಐ) ಆಧಾರಿತ ಚಿಲ್ಲರೆ ಹಣದುಬ್ಬರ ಡಿಸೆಂಬರ್ ನಲ್ಲಿ ಶೇ.5.72 ರಷ್ಟಿತ್ತು. ಜನವರಿಯಲ್ಲಿ ಶೇ.6.01 ರಷ್ಟಾಗಿತ್ತು. ಇದಕ್ಕೂ ಮುನ್ನ ಅಕ್ಟೋಬರ್ ತಿಂಗಳಲ್ಲಿ ಹಣದುಬ್ಬರ ದರ  ಶೇ.6.77 ರಷ್ಟಕ್ಕೇರಿತ್ತು.

ಜನವರಿ ತಿಂಗಳಲ್ಲಿ ತರಕಾರಿಗಳ ಬೆಲೆ ಕುಸಿತ ಕಂಡರೆ, ಇಂಧನ ಹಾಗೂ ವಿದ್ಯುತ್ ಬೆಲೆ ಏರಿಕೆಯಾಗಿತ್ತು. ಆಹಾರ ಪದಾರ್ಥಗಳ ಬೆಲೆ ಜನವರಿ ತಿಂಗಳಲ್ಲಿ ಶೇ.4.19 ರಿಂದ ಶೇ.5.94 ಕ್ಕೆ ಏರಿಕೆಯಾಗಿದೆ ಎಂದು ಎನ್ಎಸ್ಒ ಡೇಟಾ ಮೂಲಕ ತಿಳಿದುಬಂದಿದೆ. ಹಣದುಬ್ಬರ ಗ್ರಾಮೀಣ ಭಾಗದಲ್ಲಿ ಶೇ.6.85 ರಷ್ಟಿದ್ದರೆ, ನಗರ ಪ್ರದೇಶದಲ್ಲಿ ಶೇ.6 ರಷ್ಟಿದೆ.

ಆರ್ ಬಿಐ ಕಳೆದ ವಾರ ಹಣದುಬ್ಬರವನ್ನು ಶೇ.6 ಕ್ಕಿಂತಲೂ ಕಡಿಮೆ ಕಡಿಮೆ ಇರಬೇಕೆಂದು ನಿಗದಿಪಡಿಸಿತ್ತು.

SCROLL FOR NEXT