ಸಗಟು ಬೆಲೆ ಆಧಾರಿತ ಹಣದುಬ್ಬರ (ಸಾಂಕೇತಿಕ ಚಿತ್ರ) 
ವಾಣಿಜ್ಯ

ಜನವರಿ ತಿಂಗಳಲ್ಲಿ ಸಗಟು ಬೆಲೆ ಆಧಾರಿತ ಹಣದುಬ್ಬರ ಶೇ.4.73ಕ್ಕೆ ಇಳಿಕೆ

ಜನವರಿ ತಿಂಗಳ ಸಗಟು ಬೆಲೆ ಆಧಾರಿತ ಹಣದುಬ್ಬರ ಶೇ.4.73 ಕ್ಕೆ ಇಳಿಕೆಯಾಗಿದ್ದು, ಸತತ 8 ನೇ ತಿಂಗಳು ಸಗಟು ಬೆಲೆ ಆಧಾರಿತ ಹಣದುಬ್ಬರ ಇಳಿಕೆ ಕಂಡಿದೆ. 

ಮುಂಬೈ: ಜನವರಿ ತಿಂಗಳ ಸಗಟು ಬೆಲೆ ಆಧಾರಿತ ಹಣದುಬ್ಬರ ಶೇ.4.73 ಕ್ಕೆ ಇಳಿಕೆಯಾಗಿದ್ದು, ಸತತ 8 ನೇ ತಿಂಗಳು ಸಗಟು ಬೆಲೆ ಆಧಾರಿತ ಹಣದುಬ್ಬರ ಇಳಿಕೆ ಕಂಡಿದೆ. 

ಉತ್ಪಾದಿತ ವಸ್ತುಗಳು ಹಾಗೂ ಇಂಧನ, ವಿದ್ಯುತ್ ಬೆಲೆಗಳಲ್ಲಿ ಕಡಿಮೆಯಾಗಿರುವುದರಿಂದ ಸಗಟು ಬೆಲೆ ಆಧಾರಿತ ಹಣದುಬ್ಬರ ಇಳಿಕೆ ಕಂಡಿದೆ. ಡಬ್ಲ್ಯುಪಿಐ ಸೂಚ್ಯಂಕ ಆಧಾರಿತ ಹಣದುಬ್ಬರ ಡಿಸೆಂಬರ್ ನಲ್ಲಿ 2022 ರಲ್ಲಿ ಶೇ.4.95 ರಷ್ಟಿತ್ತು. ಹಾಗೂ ಜನವರಿ 2022 ರಲ್ಲಿ ಇದು ಶೇ.13.68 ರಷ್ಟಿತ್ತು.
 
ಆಹಾರ ಪದಾರ್ಥಗಳ ಹಣದುಬ್ಬರ ಜನವರಿ ತಿಂಗಳಲ್ಲಿ  ಶೇ.2.38 ಕ್ಕೆ ಏರಿಕೆಯಾಗಿದೆ. ಜನವರಿ,2023 ರಲ್ಲಿ ಉಂಟಾಗಿರುವ ಕುಸಿತಕ್ಕೆ ಖನಿಜ ತೈಲಗಳು, ರಾಸಾಯನಿಕಗಳು ಮತ್ತು ರಾಸಾಯನಿಕ ಉತ್ಪನ್ನಗಳು, ಜವಳಿ, ಕಚ್ಚಾ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಜವಳಿ ಮತ್ತು ಆಹಾರ ಉತ್ಪನ್ನಗಳಲ್ಲಿನ ಬೆಲೆ ಕಾರಣವಾಗಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯ ಮಂಗಳವಾರ ತಿಳಿಸಿದೆ.

ಬೇಳೆಕಾಳುಗಳ ಹಣದುಬ್ಬರವು ಶೇಕಡಾ 2.41 ರಷ್ಟಿದ್ದರೆ, ತರಕಾರಿಗಳಲ್ಲಿ ಶೇ. (-) 26.48 ರಷ್ಟಿದೆ. ಎಣ್ಣೆ ಬೀಜಗಳ ಹಣದುಬ್ಬರವು ಜನವರಿ, 2023 ರಲ್ಲಿ (-) 4.22 ಶೇಕಡಾ ಆಗಿದೆ.

ಸೋಮವಾರ ಬಿಡುಗಡೆಯಾದ ಚಿಲ್ಲರೆ ಹಣದುಬ್ಬರ ದತ್ತಾಂಶಕ್ಕೆ ವ್ಯತಿರಿಕ್ತವಾಗಿ WPI ನಲ್ಲಿನ ಕುಸಿತ ಗ್ರಾಹಕರ ಬೆಲೆ ಸೂಚ್ಯಂಕ (CPI) ಅಥವಾ ಚಿಲ್ಲರೆ ಹಣದುಬ್ಬರ ಡಿಸೆಂಬರ್, 2022 ರಲ್ಲಿ 5.72 ಶೇಕಡಾದಿಂದ ಜನವರಿಯಲ್ಲಿ 6.52 ಶೇಕಡಾಕ್ಕೆ ಏರಿಕೆಯಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT