ಸಾಂದರ್ಭಿಕ ಚಿತ್ರ 
ವಾಣಿಜ್ಯ

ರಾಜ್ಯ ಬಜೆಟ್ ಮಂಡನೆಗೆ ದಿನಗಣನೆ: ಅಧಿಕ ಆದಾಯ ಸಂಗ್ರಹಕ್ಕೆ ತೆರಿಗೆ ಇಲಾಖೆಯಿಂದ ಹಲವು ಯೋಜನೆ

ರಾಜ್ಯ ಬಿಜೆಪಿ ಸರ್ಕಾರ ಬಜೆಸ್ ಸಲ್ಲಿಕೆಗೆ ಸಿದ್ಧತೆ ನಡೆಸುತ್ತಿದೆ. ಈ ಬಾರಿ ಆದಾಯ ಸಂಗ್ರಹ ಉತ್ತಮವಾಗಿದೆ ಎಂದು ಹೇಳಿರುವ ಸಿಎಂ ಬಸವರಾಜ ಬೊಮ್ಮಾಯಿ “ಕರ್ನಾಟಕವು ಶೇಕಡಾ 30 ರಷ್ಟು ಅತಿ ಹೆಚ್ಚು ಅಭಿವೃದ್ಧಿ ದರವನ್ನು ಹೊಂದಿರುವ ರಾಜ್ಯವಾಗಿ ಮುಂದುವರೆದಿದೆ.

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರ ಬಜೆಸ್ ಸಲ್ಲಿಕೆಗೆ ಸಿದ್ಧತೆ ನಡೆಸುತ್ತಿದೆ. ಈ ಬಾರಿ ಆದಾಯ ಸಂಗ್ರಹ ಉತ್ತಮವಾಗಿದೆ ಎಂದು ಹೇಳಿರುವ ಸಿಎಂ ಬಸವರಾಜ ಬೊಮ್ಮಾಯಿ “ಕರ್ನಾಟಕವು ಶೇಕಡಾ 30 ರಷ್ಟು ಅತಿ ಹೆಚ್ಚು ಅಭಿವೃದ್ಧಿ ದರವನ್ನು ಹೊಂದಿರುವ ರಾಜ್ಯವಾಗಿ ಮುಂದುವರೆದಿದೆ. ಇಲ್ಲಿನ ಸುಧಾರಣೆಗಳು, ಜಾಗ್ರತೆಗಳು, ಆರ್ಥಿಕತೆಯಲ್ಲಿ ಚೇತರಿಕೆ ಮತ್ತು ತೆರಿಗೆದಾರರಿಂದ ಉತ್ತಮ ಅನುಸರಣೆಗಾಗಿ ಕೈಗೊಂಡ ಕ್ರಮಗಳು ಈ ವರ್ಷದ ಗಮನಾರ್ಹ ಅಂಶವಾಗಿದೆ ಎಂದಿದ್ದಾರೆ. 

ತೆರಿಗೆ ಸಂಗ್ರಹ, ಆದಾಯದಲ್ಲಿ ಹೆಚ್ಚಳ ಈ ವರ್ಷ ಸರ್ಕಾರಕ್ಕೆ ಉತ್ತಮ ಬಜೆಟ್ ಮಂಡಿಸಲು ಅನುವು ಮಾಡಿಕೊಡುತ್ತದೆ.’’ ಕಳೆದ ವರ್ಷ 77,888 ಕೋಟಿ ರೂಪಾಯಿಗೆ ಹೋಲಿಸಿದರೆ, ಕರ್ನಾಟಕವು 1,01,489 ಕೋಟಿ ವಾರ್ಷಿಕ ಸಂಗ್ರಹವನ್ನು ಹೊಂದಿದೆ. ಮಹಾರಾಷ್ಟ್ರದ ನಂತರ ಎರಡನೇ ಅತಿ ಹೆಚ್ಚು ಆದಾಯ ಉತ್ಪಾದಿಸುವ ರಾಜ್ಯವಾಗಿದೆ. ವಾಣಿಜ್ಯ ತೆರಿಗೆ ಇಲಾಖೆಯು ಬಜೆಟ್‌ಗೆ ಹೆಚ್ಚಿನ ಕೊಡುಗೆ ನೀಡಿದೆ. 

ವಾಣಿಜ್ಯ ತೆರಿಗೆ ಆಯುಕ್ತೆ ಸಿ ಶಿಖಾ, ಉತ್ತಮ ಆದಾಯ ವೃದ್ಧಿಗೆ ಕೈಗೊಂಡಿರುವ ಆರು ಕ್ರಮಗಳ ಕುರಿತು ತಿಳಿಸಿದರು. ರಾಜ್ಯ ಸರ್ಕಾರವು ನೀಡಿದ ಹೆಚ್ಚುವರಿ ಸಂಗ್ರಹಣೆ ಗುರಿಯನ್ನು ಗಮನದಲ್ಲಿಟ್ಟುಕೊಂಡು ಮತ್ತು ರಾಜ್ಯಗಳಿಗೆ ಪರಿಹಾರವನ್ನು ಖಾತರಿಪಡಿಸಲಾಗಿದೆ, ವಾಣಿಜ್ಯ ತೆರಿಗೆ ಇಲಾಖೆಯು ಆದಾಯವನ್ನು ಹೆಚ್ಚಿಸಲು ಕ್ರಿಯಾ ಯೋಜನೆಯನ್ನು ರೂಪಿಸಿದೆ. ಇಲಾಖೆಯು ಅಸಿಸ್ಟೆಂಟ್ ಕಮಿಷನರ್‌ಗಳು ಮತ್ತು ವಾಣಿಜ್ಯ ತೆರಿಗೆ ಅಧಿಕಾರಿಗಳಿಗೆ ಅಧಿಕಾರವನ್ನು ನೀಡಿತು, ಹೆಚ್ಚು ಆದಾಯ ಸಂಗ್ರಹಣೆ ಇಲಾಖೆಗಳಲ್ಲಿ ದಕ್ಷ ಅಧಿಕಾರಿಗಳನ್ನು ಮರುನಿಯೋಜಿಸಲಾಗಿದೆ ಎಂದರು. 

ಕಳೆದ ವರ್ಷದ ಅವಧಿಗಳ ವಹಿವಾಟಿನ ಆಧಾರದ ಮೇಲೆ ಐಟಿ ರಿಟರ್ನ್ ಸಲ್ಲಿಕೆ ಮಾಡದವರನ್ನು ಉನ್ನತ, ಮಧ್ಯಮ ಮತ್ತು ಕೆಳಗಿನ ವರ್ಗಗಳಾಗಿ ವರ್ಗೀಕರಿಸಲಾಗಿದೆ. ತೆರಿಗೆಯ ಸಕಾಲಿಕ ಸಾಕ್ಷಾತ್ಕಾರಕ್ಕಾಗಿ ರಿಟರ್ನ್‌ಗಳನ್ನು ಸಲ್ಲಿಸುವುದನ್ನು ನೋಡಿಕೊಳ್ಳಲು ಸೂಚನೆಗಳನ್ನು ನೀಡಲಾಗಿದೆ. ತೆರಿಗೆ ಇಲಾಖೆಯು ಐಟಿ ಉಪಕರಣಗಳನ್ನು ವ್ಯಾಪಕವಾಗಿ ಬಳಸಿದೆ ಎಂದರು.

"ಪರಿಶೀಲನೆಗಾಗಿ ಸಿಸ್ಟಮ್ ಆಧಾರಿತ ವಿಶ್ಲೇಷಣೆಯನ್ನು ಮಾಡಲಾಗಿದೆ, ನೋಟಿಸ್‌ಗಳನ್ನು ನೀಡಲಾಗಿದೆ. ಜಿಎಸ್‌ಟಿ ಪ್ರೈಮ್ ಅಡಿಯಲ್ಲಿ ಐಟಿ ವಿಶ್ಲೇಷಣಾತ್ಮಕ ಸಾಧನಗಳನ್ನು ವ್ಯತ್ಯಾಸಗಳನ್ನು ಹೊಂದಿರುವ ಪ್ರಕರಣಗಳನ್ನು ಪತ್ತೆಹಚ್ಚಲು ಬಳಸಲಾಗಿದೆ ಎಂದು ಶಿಖಾ ಹೇಳಿದರು. ಇಲಾಖೆಯು ವಿವಿಧ ರಾಜ್ಯಗಳಿಂದ ಅಮೂಲ್ಯವಾದ ಗುಪ್ತಚರ ಮಾಹಿತಿಗಳನ್ನು ಸಂಗ್ರಹಿಸಲಾಗಿದೆ. 

ನಕಲಿ ತೆರಿಗೆದಾರರನ್ನು ಗುರುತಿಸಲು ಇ-ವೇಬಿಲ್ ಅನಾಲಿಟಿಕ್ಸ್ ಮತ್ತು ಬಿಸಿನೆಸ್ ಇಂಟೆಲಿಜೆನ್ಸ್ ಮತ್ತು ಫ್ರಾಡ್ ಅನಾಲಿಟಿಕ್ಸ್ (ಬಿಐಎಫ್‌ಎ)ನ್ನು ಬಳಸಲಾಗಿದೆ. ನಕಲಿ ಕ್ಲೈಮ್‌ಗಳ ಕಾರ್ಟೆಲ್ ತಡೆಯಲು ಕ್ರಮವನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದರು. ಇದರ ಜೊತೆಗೆ, ತೆರಿಗೆದಾರರಿಗೆ ಉತ್ತಮ ತಿಳುವಳಿಕೆ ನೀಡಲ ಇಲಾಖೆಯು 25 ಸಾಕ್ಷ್ಯಚಿತ್ರಗಳನ್ನು ಹೊರತಂದಿದೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನಾಳೆ ವಿಶಿಷ್ಠ ದಾಖಲೆ ಬರೆಯಲಿದ್ದಾರೆ ಸಿದ್ದರಾಮಯ್ಯ; ಈ ಬಗ್ಗೆ ಸ್ವತಃ ಸಿಎಂ ಹೇಳಿದ್ದೇನು?

ಬೀದರ್: ಅರಣ್ಯ ಭೂಮಿ ಒತ್ತುವರಿ ಆರೋಪಿಸಿದ್ದಕ್ಕೆ KDP ಸಭೆಯಲ್ಲೇ BJP ಶಾಸಕನ ಕಡೆ ನುಗ್ಗಿದ Congress MLC, Video Viral!

ಕೊಪ್ಪಳದಲ್ಲಿ ಹೈಡ್ರಾಮಾ: ಕೇಂದ್ರ ಸಚಿವ ಸೋಮಣ್ಣರತ್ತ ಕುರ್ಚಿ ಎಸೆದ ಕಾಂಗ್ರೆಸ್ ಕಾರ್ಯಕರ್ತರು!

ಒಮನ್‌ನಲ್ಲಿ ಟ್ರೆಕ್ಕಿಂಗ್ ದುರಂತ: ಮಲಯಾಳಂ ಹಿನ್ನೆಲೆ ಗಾಯಕಿ 'ಚಿತ್ರಾ ಅಯ್ಯರ್' ಸಹೋದರಿ ಸಾವು!

ನನಗಿರುವ ಮಾಹಿತಿ ಪ್ರಕಾರ ನಾಯಕತ್ವ ಬದಲಾವಣೆ ಇಲ್ಲ: ಸಚಿವ ಕೃಷ್ಣಬೈರೇಗೌಡ ಸ್ಫೋಟಕ ಹೇಳಿಕೆ

SCROLL FOR NEXT