ವಾಣಿಜ್ಯ

ದೇಶೀಯವಾಗಿ ಬ್ಲಾಕ್ ಬಾಕ್ಸ್ ಅಭಿವೃದ್ಧಿ: ಹೆಚ್ಎಎಲ್ ಗೆ ಡಿಜಿಸಿಎ ಒಪ್ಪಿಗೆ

Srinivas Rao BV

ನವದೆಹಲಿ: ದೇಶಿಯವಾಗಿ ಅಭಿವೃದ್ಧಿಪಡಿಸಿರುವ ಕಾಕ್ ಪಿಟ್ ವಾಯ್ಸ್ ರೆಕಾರ್ಡರ್ (ಸಿವಿಆರ್) ಹಾಗೂ ಫ್ಲೈಟ್ ಡೇಟಾ ರೆಕಾರ್ಡರ್ (ಎಫ್ ಡಿಆರ್) ಗೆ ಹಿಂದುಸ್ಥಾನ್ ಏರೊನಾಟಿಕ್ಸ್ ಲಿಮಿಟೆಡ್ ಡಿಜಿಸಿಎಯಿಂದ  ಇಂಡಿಯನ್ ಟೆಕ್ನಿಕಲ್ ಸ್ಟ್ಯಾಂಡರ್ಡ್ ಆರ್ಡರ್ (ITSO) ದೃಢೀಕರಣವನ್ನು ಪಡೆದಿದೆ. 

ಪ್ರಯಾಣಿಕ ವಿಮಾನದಲ್ಲಿ ಬಳಕೆ ಮಾಡಲಾಗುವ ಐಟಿಎಸ್ಒ ನಿರ್ದಿಷ್ಟಪಡಿಸಿದ ವಸ್ತುಗಳು, ಭಾಗಗಳು, ಪ್ರಕ್ರಿಯೆಗಳು ಮತ್ತು ಉಪಕರಣಗಳಿಗೆ ಐಟಿಎಸ್ಒ ಕನಿಷ್ಠ ಕಾರ್ಯಕ್ಷಮತೆಯ ಮಾನದಂಡವಾಗಿದೆ ಎಂದು ಹೆಚ್ಎಎಲ್  ಹೇಳಿದೆ. 

ಸಿವಿಆರ್ ಹಾಗೂ ಎಫ್ ಡಿಆರ್ ಗಳು ಬ್ಲಾಕ್ ಬಾಕ್ಸ್ ಎಂದೇ ಪ್ರಸಿದ್ಧವಾಗಿವೆ. ವಿಮಾನಗಳ ಅಪಘಾತ ಸಂಭವಿಸಿದಾಗ ಸುಲಭವಾಗಿ ಪತ್ತೆಯಾಗಬೇಕೆಂಬ ಹಿನ್ನೆಲೆಯಲ್ಲಿ ಈ ಬ್ಲಾಕ್ ಬಾಕ್ಸ್ ಗಳಿಗೆ ಕಿತ್ತಳೆ ಬಣ್ಣ ಹಾಕಲಾಗಿರುತ್ತದೆ. ವಿಮಾನ ಅಪಘಾತದ ಬಳಿಕ ತನಿಖೆಗೆ ಈ ಬ್ಲಾಕ್ ಬಾಕ್ಸ್ ಗಳು ಅತ್ಯಂತ ಸಹಕಾರಿಯಾಗಿರುತ್ತವೆ. 

SCROLL FOR NEXT