ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಾಣಿಜ್ಯ

ಭಾರತದ ಆರ್ಥಿಕ ಬೆಳವಣಿಗೆ ತುಂಬಾ ದುರ್ಬಲವಾಗಿದೆ: ಆರ್ ಬಿಐ ಎಂಪಿಸಿ ಸದಸ್ಯ

ಭಾರತದ ಆರ್ಥಿಕ ಬೆಳವಣಿಗೆಯು 'ಬಹಳ ದುರ್ಬಲವಾಗಿದೆ' ಎಂದು ತೋರುತ್ತಿದೆ. ಹೀಗಾಗಿ ಆರ್ಥಿಕ ಬೆಳವಣಿಗೆ ದರ ನಿರೀಕ್ಷೆಗಿಂತ ಕಡಿಮೆಯಾಗಬಹುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್(ಆರ್ ಬಿಐ) ಹಣಕಾಸು ನೀತಿ ಸಮಿತಿ...

ಆರ್ ಬಿ ಐ
Lingaraj Badiger
Updated On : 28 Feb 2023, 7:06 pm

ನವದೆಹಲಿ: ಭಾರತದ ಆರ್ಥಿಕ ಬೆಳವಣಿಗೆಯು 'ಬಹಳ ದುರ್ಬಲವಾಗಿದೆ' ಎಂದು ತೋರುತ್ತಿದೆ. ಹೀಗಾಗಿ ಆರ್ಥಿಕ ಬೆಳವಣಿಗೆ ದರ ನಿರೀಕ್ಷೆಗಿಂತ ಕಡಿಮೆಯಾಗಬಹುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್(ಆರ್ ಬಿಐ) ಹಣಕಾಸು ನೀತಿ ಸಮಿತಿ(ಎಂಪಿಸಿ)ಯ ಸದಸ್ಯ ಜಯಂತ್ ಆರ್ ವರ್ಮಾ ಅವರು ಭಾನುವಾರ ಹೇಳಿದ್ದಾರೆ.

ಭಾರತದಲ್ಲಿ 2022-23 ರಲ್ಲಿ ಹಣದುಬ್ಬರವು ಅಧಿಕವಾಗಿದೆ. ಆದರೆ 2023-24 ರಲ್ಲಿ ಅದು ಗಮನಾರ್ಹವಾಗಿ ಕಡಿಮೆಯಾಗುತ್ತದೆ ಎಂದು ವರ್ಮಾ ತಿಳಿಸಿದ್ದಾರೆ.

"ಆದಾಗ್ಯೂ, ದೇಶದ ಆರ್ಥಿಕ ಬೆಳವಣಿಗೆಯು ಬಹಳ ದುರ್ಬಲವಾಗಿ ಕಂಡುಬರುತ್ತಿದೆ ಮತ್ತು ವಿತ್ತೀಯ ಬಿಗಿಗೊಳಿಸುವಿಕೆಯು ಬೇಡಿಕೆಯನ್ನು ಕುಗ್ಗಿಸುತ್ತಿದೆ" ಎಂದು ಅವರು ಪಿಟಿಐಗೆ ತಿಳಿಸಿದ್ದಾರೆ.

Advertisement

Advertisement

ಇದನ್ನು ಓದಿ: ಹಣದುಬ್ಬರ ಭೀತಿ: ಸತತ 4ನೇ ದಿನವೂ ಷೇರು ಮಾರುಕಟ್ಟೆ ಕುಸಿತ; ಸೆನ್ಸೆಕ್ಸ್ 927 ಅಂಕ ಕುಸಿತ

ಹೆಚ್ಚಿನ ಬಡ್ಡಿದರಗಳು ಖಾಸಗಿ ಬಂಡವಾಳ ಹೂಡಿಕೆಯನ್ನು ಹೆಚ್ಚು ಕಷ್ಟಕರವಾಗಿಸುತ್ತಿದೆ ಎಂದ ವರ್ಮಾ,  ಸರ್ಕಾರವು ಹಣಕಾಸಿನ ಬಲವರ್ಧನೆಯ ಕ್ರಮದಲ್ಲಿದೆ ಆರ್ಥಿಕತೆಗೆ ಬೆಂಬಲವನ್ನು ಕಡಿಮೆ ಮಾಡುತ್ತಿದೆ ಎಂದಿದ್ದಾರೆ.

ಭಾರತೀಯ ರಿಸರ್ವ್ ಬ್ಯಾಂಕ್ 2023- 24ರಲ್ಲಿ ಭಾರತ ಶೇಕಡಾ 6.4 ರಷ್ಟು ಆರ್ಥಿಕ ಬೆಳವಣಿಗೆ ದಾಖಲಿಸಲಿದೆ ಎಂದು ಅಂದಾಜಿಸಿದೆ. ರಾಷ್ಟ್ರೀಯ ಅಂಕಿಅಂಶ ಕಚೇರಿಯ(NSO) ಮೊದಲ ಮುಂಗಡ ಅಂದಾಜಿನ ಪ್ರಕಾರ 2022-23 ರಲ್ಲಿ  ಒಟ್ಟು ನಿವ್ವಳ ಆಂತರಿಕ ಉತ್ಪಾದನೆ (ಜಿಡಿಪಿ)ಯ ಬೆಳವಣಿಗೆ ದರ ಶೇ.7ರಷ್ಟು ಆಗಲಿದೆ ಎಂದು ನಿರೀಕ್ಷಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement