ಕೋಕಾ-ಕೋಲಾ 
ವಾಣಿಜ್ಯ

ಕ್ರಿಕೆಟ್ ವಿಶ್ವಕಪ್‌ನ ಅಧಿಕೃತ ಸಾಫ್ಟ್ ಡ್ರಿಂಕ್ ಪಾಲುದಾರರಾಗಿ ಕೋಕಾ-ಕೋಲಾ ಆಯ್ಕೆ!

ಈ ವರ್ಷ ಭಾರತದಲ್ಲಿ ನಡೆಯಲಿರುವ ಕ್ರಿಕೆಟ್ ವಿಶ್ವಕಪ್‌ಗೆ ತಂಡಗಳು ಮಾತ್ರವಲ್ಲದೆ ಪ್ರಪಂಚದಾದ್ಯಂತದ ಜನಪ್ರಿಯ ಬ್ರ್ಯಾಂಡ್‌ಗಳು ಕೂಡ ಸಜ್ಜಾಗುತ್ತಿವೆ.

ಈ ವರ್ಷ ಭಾರತದಲ್ಲಿ ನಡೆಯಲಿರುವ ಕ್ರಿಕೆಟ್ ವಿಶ್ವಕಪ್‌ಗೆ ತಂಡಗಳು ಮಾತ್ರವಲ್ಲದೆ ಪ್ರಪಂಚದಾದ್ಯಂತದ ಜನಪ್ರಿಯ ಬ್ರ್ಯಾಂಡ್‌ಗಳು ಕೂಡ ಸಜ್ಜಾಗುತ್ತಿವೆ. 

ಏತನ್ಮಧ್ಯೆ, ಕ್ರಿಕೆಟ್ ಅಭಿಮಾನಿಗಳಿಗೆ ಅಧಿಕೃತ ತಂಪು ಪಾನೀಯ ಪಾಲುದಾರನನ್ನು ಬಹಿರಂಗಪಡಿಸಲಾಗಿದೆ. ವಿಶ್ವದ ಪ್ರಮುಖ ಕೋಲಾ ಕಂಪನಿಯಾದ ಕೋಕಾ-ಕೋಲಾವನ್ನು ಕ್ರಿಕೆಟ್ ವಿಶ್ವಕಪ್‌ನ ಅಧಿಕೃತ ಪಾಲುದಾರರನ್ನಾಗಿ ಮಾಡಲಾಗಿದೆ. ಈ ವರ್ಷದ ಅಕ್ಟೋಬರ್ 5ರಿಂದ ಭಾರತದಲ್ಲಿ ಕ್ರಿಕೆಟ್ ಮಹಾಕುಂಭ ಅಂದರೆ ವಿಶ್ವಕಪ್ ಪ್ರಾರಂಭವಾಗಲಿದೆ. ಮೊದಲ ಪಂದ್ಯ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವೆ ಅಹಮದಾಬಾದ್‌ನಲ್ಲಿ ನಡೆಯಲಿದೆ.

1996ರ ನಂತರ ಮತ್ತೆ ಅಧಿಕೃತ ಪಾಲುದಾರ
ಮುಂಬರುವ ಕ್ರಿಕೆಟ್ ವಿಶ್ವಕಪ್‌ಗೆ ಕೋಕಾ-ಕೋಲಾವನ್ನು ಅಧಿಕೃತ ತಂಪು ಪಾನೀಯ ಪಾಲುದಾರ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಶುಕ್ರವಾರ ಘೋಷಿಸಿದೆ. 1996ರಲ್ಲಿ ಭಾರತದಲ್ಲಿ ನಡೆದ ಕ್ರಿಕೆಟ್ ವಿಶ್ವಕಪ್‌ನಲ್ಲಿ ಕೋಕಾ-ಕೋಲಾ ಅಧಿಕೃತ ಪಾಲುದಾರವಾಗಿತ್ತು. ಈ ವರ್ಷದ ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿರುವ ಏಕದಿನ ಕ್ರಿಕೆಟ್ ವಿಶ್ವಕಪ್‌ಗಾಗಿ ಕೋಕಾ-ಕೋಲಾ ಮತ್ತು ಐಸಿಸಿ ಮತ್ತೊಮ್ಮೆ ಒಟ್ಟಿಗೆ ಸೇರುತ್ತಿವೆ. ಈ ಪಾಲುದಾರಿಕೆಯ ಭಾಗವಾಗಿ, ಕೋಕಾ-ಕೋಲಾ ಐಸಿಸಿಯ ವಿಶೇಷ ತಂಪು ಪಾನೀಯ ಪಾಲುದಾರನಾಗಿರುತ್ತದೆ ಎಂದು ಜಂಟಿ ಹೇಳಿಕೆಯೊಂದರಲ್ಲಿ ತಿಳಿಸಲಾಗಿದೆ.

ಕೋಕಾ-ಕೋಲಾದ ಅಧಿಕೃತ ಪಾಲುದಾರನಾಗುವುದು ಎಂದರೆ ಅದೇ ಬ್ರಾಂಡ್ ಪಂದ್ಯದ ಸಮಯದಲ್ಲಿ ಕ್ರೀಡಾಂಗಣದಲ್ಲಿ ಕಂಡುಬರುತ್ತದೆ. ಪಾನೀಯ ವಿರಾಮದ ಜೊತೆಗೆ ಈ ಕಂಪನಿಯ ತಂಪು ಪಾನೀಯಗಳು ಮಾತ್ರ ಇತರ ಸ್ಥಳಗಳಲ್ಲಿ ಗ್ರಾಹಕರಿಗೆ ಲಭ್ಯವಿರುತ್ತವೆ. ಭಾರತದ (ಮಾರ್ಕೆಟಿಂಗ್) ಉಪಾಧ್ಯಕ್ಷ ಅರ್ನಾಬ್ ರಾಯ್, ಐಸಿಸಿ ಕ್ರಿಕೆಟ್ ವಿಶ್ವಕಪ್ ದೇಶದ ಅತಿದೊಡ್ಡ ಕ್ರಿಕೆಟ್ ಟೂರ್ನಿಯಾಗಿದೆ. ICC ಯೊಂದಿಗಿನ ಪಾಲುದಾರಿಕೆಯು ನಮ್ಮ ಗ್ರಾಹಕರು, ಬ್ರ್ಯಾಂಡ್ ಮತ್ತು ಕ್ರಿಕೆಟ್ ಅನ್ನು ಒಟ್ಟುಗೂಡಿಸಲು ನಮಗೆ ಉತ್ತಮ ಅವಕಾಶವನ್ನು ಒದಗಿಸುತ್ತದೆ. ICC ಮುಖ್ಯ ವಾಣಿಜ್ಯ ಅಧಿಕಾರಿ ಅನುರಾಗ್ ದಹಿಯಾ, ಕೋಕಾ-ಕೋಲಾ ಜೊತೆಗಿನ ನಮ್ಮ ಪಾಲುದಾರಿಕೆಯ ಬಗ್ಗೆ ನಾವು ರೋಮಾಂಚನಗೊಂಡಿದ್ದೇವೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

SCROLL FOR NEXT