ಸಾಂದರ್ಭಿಕ ಚಿತ್ರ 
ವಾಣಿಜ್ಯ

ಮೇ ತಿಂಗಳಲ್ಲಿ ಕರ್ನಾಟಕ ಜಿಎಸ್ ಟಿ ಮೂಲಕ 10,317 ಕೋಟಿ ರೂ ಸಂಗ್ರಹ

ಜಿಎಸ್‌ಟಿ ಮೂಲಕ ಕರ್ನಾಟಕವು 10,317 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಿಎಸ್‌ಟಿ ಸಂಗ್ರಹದಲ್ಲಿ ಹೆಚ್ಚಳ ಕಾಣುತ್ತಿದೆ. ಜಿಎಸ್‌ಟಿ ಸಂಗ್ರಹದಲ್ಲಿ ಕರ್ನಾಟಕವು ಮಹಾರಾಷ್ಟ್ರದ ನಂತರ ಸತತವಾಗಿ ಎರಡನೇ ಸ್ಥಾನದಲ್ಲಿದೆ.

ಬೆಂಗಳೂರು: ಜಿಎಸ್‌ಟಿ ಮೂಲಕ ಕರ್ನಾಟಕವು 10,317 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಿಎಸ್‌ಟಿ ಸಂಗ್ರಹದಲ್ಲಿ ಹೆಚ್ಚಳ ಕಾಣುತ್ತಿದೆ. ಜಿಎಸ್‌ಟಿ ಸಂಗ್ರಹದಲ್ಲಿ ಕರ್ನಾಟಕವು ಮಹಾರಾಷ್ಟ್ರದ ನಂತರ ಸತತವಾಗಿ ಎರಡನೇ ಸ್ಥಾನದಲ್ಲಿದೆ.

ಕರ್ನಾಟಕದ ಆದಾಯವು ಗುಜರಾತ್‌ನ 9,800 ಕೋಟಿ ರೂಪಾಯಿ ಮತ್ತು ತಮಿಳುನಾಡಿನ 8,953 ಕೋಟಿಗಿಂತ ಗಮನಾರ್ಹವಾಗಿ ಹೆಚ್ಚಾಗಿದೆ.

ಕಳೆದ ವರ್ಷದ ಇದೇ ಅವಧಿಯಲ್ಲಿ 9,232 ಕೋಟಿ ರೂಪಾಯಿಗೆ ಹೋಲಿಸಿದರೆ ಮೇ ತಿಂಗಳಿನ ಕರ್ನಾಟಕದ ಆದಾಯವು ಸಾಧಾರಣ ಶೇಕಡಾ 12ರಷ್ಟು ಹೆಚ್ಚಳ ಸಾಧಿಸಿದೆ. ಹೆಚ್ಚಿನ ಅನುಸರಣೆ ಮತ್ತು ಇ-ಇನ್‌ವಾಯ್ಸಿಂಗ್‌ನಿಂದಾಗಿ ಜಿಎಸ್‌ಟಿ ಸಂಗ್ರಹಣೆಗಳು ಉತ್ತಮವಾಗಿವೆ. ವ್ಯಾಪಾರದ ಸಣ್ಣ ಮಿತಿಗೆ ಶೀಘ್ರದಲ್ಲೇ ಇ-ಇನ್‌ವಾಯ್ಸಿಂಗ್ ಕಡ್ಡಾಯವಾಗಿರುತ್ತದೆ.

ಈ ಬಗ್ಗೆ ಮಾಹಿತಿ ನೀಡಿದ ವಾಣಿಜ್ಯ ತೆರಿಗೆ ಆಯುಕ್ತೆ ಸಿ. ಶಿಖಾ, ಪ್ರಸ್ತುತ ಇ-ಇನ್‌ವಾಯ್ಸಿಂಗ್ ನೀಡಲು 10 ಕೋಟಿ ರೂಪಾಯಿಗಿಂತ ಹೆಚ್ಚಿನ ವ್ಯಾಪಾರ ವಾರ್ಷಿಕ ವಹಿವಾಟಿನ ಮಿತಿ ಅಗತ್ಯವಿದೆ. ಈ ವರ್ಷದ ಆಗಸ್ಟ್‌ನಿಂದ ಜಾರಿಗೆ ಬರುವಂತೆ ಇದನ್ನು 5 ಕೋಟಿಗೆ ಇಳಿಸಲಾಗುವುದು ಎಂದು ಹೇಳಿದರು. 

ಆಗಸ್ಟ್ 1 ರಿಂದ ಇ-ಇನ್‌ವಾಯ್ಸಿಂಗ್ ಕಡ್ಡಾಯವಾಗಲಿದೆ. ಇಲಾಖೆಯು ವೆಬ್‌ನಾರ್‌ಗಳು ಮತ್ತು ಇತರ ಕಾರ್ಯಕ್ರಮಗಳನ್ನು ಇನ್‌ವಾಯ್ಸಿಂಗ್ ಉತ್ಪಾದನೆಯ ವಿವಿಧ ಸೌಲಭ್ಯಗಳು ಮತ್ತು ಸಾಧನಗಳನ್ನು ಲಭ್ಯವಾಗುವಂತೆ ಮಾಡುತ್ತದೆ. ಇದು ಜಿಎಸ್‌ಟಿ ಸಂಗ್ರಹವನ್ನು ಉತ್ತಮಗೊಳಿಸುತ್ತದೆ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Assam: ಶಾಸಕಾಂಗ ಪಕ್ಷದ ನಾಯಕರಾಗಿ Himanta Biswa Sarma ಆಯ್ಕೆ, ಸತತ 2ನೇ ಬಾರಿಗೆ ಸಿಎಂ!

“ಜನರಿಗೆ ದ್ರೋಹ ಮಾಡುವುದೇ ಕಾಂಗ್ರೆಸ್ ಕೆಲಸ”, ಜನರ ಸಮಸ್ಯೆಗಿಂತ ಅಧಿಕಾರದ ಜಗಳವೇ ಮುಖ್ಯವಾಗಿದೆ: ಪ್ರಧಾನಿ ಮೋದಿ ವಾಗ್ದಾಳಿ

“ನನ್ನ ಹೃದಯದಲ್ಲಿ ನೆಲೆಸಿರುವ ಪ್ರೀತಿಯ ಜನರೇ…”: ಭಾವನಾತ್ಮಕ ಭಾಷಣದೊಂದಿಗೆ ಆಡಳಿತ ಆರಂಭಿಸಿದ ಸಿಎಂ ವಿಜಯ್, ಉಚಿತ ವಿದ್ಯುತ್ ಯೋಜನೆಗೆ ಅನುಮೋದನೆ..!

'ಯಾರಿಗೂ ಭಯ ಅನ್ನೋದೆ ಇಲ್ಲ.. ಜೈಲಲ್ಲಿ ಕೂತ್ಕೋ ಬೇಕಾಗುತ್ತೆ': Yuzvendra Chahal ವಿಮಾನದಲ್ಲೇ ವೇಪಿಂಗ್ ಘಟನೆ ಕುರಿತು ಮಾಜಿ ಆಟಗಾರನ ಖಡಕ್ ಎಚ್ಚರಿಕೆ!

ಸಚಿವ ಸುಧಾಕರ್ ನಿಧನ: ಚಿತ್ರದುರ್ಗ ಜಿಲ್ಲೆಗೆ ಸರ್ಕಾರಿ ರಜೆ ಘೋಷಣೆ; 3 ದಿನ ರಾಜ್ಯಾದ್ಯಂತ ಸಂತಾಪ- ಸರ್ಕಾರ ಆದೇಶ

SCROLL FOR NEXT