ವಾಣಿಜ್ಯ

ಆರ್ಥಿಕ ಬಿಕ್ಕಟ್ಟು: ಜೂನ್ 9 ರವರೆಗೆ ಗೋ ಫಸ್ಟ್ ವಿಮಾನ ಹಾರಾಟ ರದ್ದು

Nagaraja AB

ಮುಂಬೈ: ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಗೋ ಫಸ್ಟ್ ಏರ್‌ಲೈನ್ಸ್ ಮಂಗಳವಾರ ತನ್ನ ನಿಗದಿತ ವಿಮಾನ ಕಾರ್ಯಾಚರಣೆಗಳನ್ನು ಜೂನ್ 9 ರವರೆಗೆ ರದ್ದುಗೊಳಿಸಿರುವುದಾಗಿ ತಿಳಿಸಿದೆ. ಪ್ರಯಾಣಿಕರಿಗೆ ಸಂಪೂರ್ಣ ಮರುಪಾವತಿ ಮಾಡುವುದಾಗಿಯೂ ಹೇಳಿದೆ. 

ಈ ಮೊದಲು ಜೂನ್ 7ರವರೆಗೆ ವಿಮಾನಗಳು ರದ್ದುಗೊಳಿಸುವುದಾಗಿ ಹೇಳಿತ್ತು. "ವಿಮಾನ ರದ್ದತಿ ನಿಮ್ಮ ಪ್ರಯಾಣದ ಯೋಜನೆ ಅಡ್ಡಿಪಡಿಸಿರಬಹುದು ಎಂದು ನಾವು ಒಪ್ಪಿಕೊಳ್ಳುತ್ತೇವೆ ಮತ್ತು ಮಾಡಬಹುದಾದ ಎಲ್ಲಾ ಸಹಾಯ ಒದಗಿಸಲು ಬದ್ಧರಾಗಿದ್ದೇವೆ" ಎಂದು ಗೋ ಫಸ್ಟ್ ಟ್ವೀಟ್ ಮಾಡಿದೆ.

ಏರ್‌ಲೈನ್ ಇತ್ತೀಚೆಗೆ ಸ್ವಯಂಪ್ರೇರಿತ ದಿವಾಳಿತನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಈ ಹಿಂದೆ, ನಾಗರಿಕ ವಿಮಾನಯಾನ ನಿರ್ದೇಶನಾಲಯವು ಗೋ ಫಸ್ಟ್ ಏರ್‌ಲೈನ್ಸ್‌ಗೆ ಕಾರ್ಯಾಚರಣೆಗಳ ಸುಸ್ಥಿರ ಪುನರುಜ್ಜೀವನಕ್ಕಾಗಿ ಸಮಗ್ರ ಪುನರ್ ರಚನಾ ಯೋಜನೆಯನ್ನು ಸಲ್ಲಿಸಲು ಸಲಹೆ ನೀಡಿತು.

ಮೇ 8 ರಂದು ನೀಡಲಾದ ಶೋಕಾಸ್ ನೋಟಿಸ್‌ಗೆ ಗೋ ಫಸ್ಟ್ ತಮ್ಮ ಪ್ರತಿಕ್ರಿಯೆಯನ್ನು ಸಲ್ಲಿಸಿದೆ ಎಂದು ಹಿರಿಯ ಡಿಜಿಸಿಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಾರ್ಯಾಚರಣೆಗಳನ್ನು ಮರು ಪ್ರಾರಂಭಿಸುವ ಮೊದಲು ಅಗತ್ಯವಿರುವ ನಿಯಂತ್ರಕ ಅನುಮೋದನೆಗಳಿಗಾಗಿ ಸಮಗ್ರ ಪುನರ್ ರಚನೆ ಯೋಜನೆಯನ್ನು ಡಿಜಿಸಿಎ ಮುಂದೆ ಹಾಜರುಪಡಿಸುವಂತೆ ತಿಳಿಸಲಾಗಿತ್ತು ಎಂದು ಅವರು ಮಾಹಿತಿ ನೀಡಿದ್ದಾರೆ. 

SCROLL FOR NEXT