ವಾಣಿಜ್ಯ

ಕೆ.ಜಿ.ಗೆ 100 ರೂಪಾಯಿ ದಾಟಿದ ಟೊಮೆಟೊ ದರ; ಪರ್ಯಾಯ ಪದಾರ್ಥಕ್ಕೆ ಇಲ್ಲಿದೆ ಪರಿಹಾರ!

Srinivas Rao BV

ಭಾರತೀಯರ ಅಡುಗೆ ಮನೆಯಲ್ಲಿ ಟೊಮೆಟೋ ಇಲ್ಲದೇ ಬಹುತೇಕ ಯಾವುದೇ ಆಹಾರ ತಯಾರಾಗುವುದು ಅಪರೂಪ. ವಿಟಮಿನ್ ಎ, ಸಿ ಬಿ6 ನಿಂದ ಸಮೃದ್ಧವಾಗಿರುವ ಟೊಮೆಟೋನಲ್ಲಿ ಕ್ಯಾಲ್ಸಿಯಮ್, ಪೊಟಾಶಿಯಮ್, ಬಿಟಾ ಕರೋಟೀನ್, ಫೊಲೆಟ್ ಹಾಗೂ ಆರೋಗ್ಯಕರ ಉತ್ಕರ್ಷಣ ನಿರೋಧಕಗಳು (antioxidants) ಯಥೇಚ್ಛವಾಗಿದೆ. 

ಇಂತಹ ಬಹು ಉಪಯೋಗಿ ತರಕಾರಿಯ ಬೆಲೆ ಈಗ ಕೆ.ಜಿ.ಗೆ ಬರೊಬ್ಬರಿ 100 ರೂಪಾಯಿ. ಅತ್ಯಗತ್ಯ ಸಾಮಗ್ರಿಯಾಗಿರುವ ಟೊಮೆಟೋ ಬೆಲೆ ಗಗನಕ್ಕೇರಿರುವುದರಿಂದ ಜನರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ.

ಟೊಮೆಟೋ ಗೆ ಪರ್ಯಾಯ ಪದಾರ್ಥಗಳಾವುದು?

ಟೊಮೆಟೋ ದರ ಏರಿಕೆಯಾಗಿದ್ದು, ಸಾಧ್ಯವಾದಲ್ಲಿ ಇವುಗಳನ್ನು ಪರ್ಯಾಯವಾಗಿ ಬಳಕೆ ಮಾಡಬಹುದಾಗಿದೆ.

  1. ನೆಲ್ಲಿಕಾಯಿ - ವಿಟಮಿನ್ ಸಿಯನ್ನು ಎಥೇಚ್ಛವಾಗಿ ಹೊಂದಿರುವ ನೆಲ್ಲಿಕಾಯಿ, ಚರ್ಮಕ್ಕೂ, ಜೇಬಿಗೂ ಆರೋಗ್ಯಕರವಾದ ಟೊಮೆಟೋ ಪರ್ಯಾಯವಾಗಿದೆ.
  2. ಹುಣಸೆಹಣ್ಣು - ಸರಿಯಾದ ಪ್ರಮಾಣದ ಹುಳಿಯನ್ನು ಆಹಾರದಲ್ಲಿ ಸೇರಿಸಿಕೊಳ್ಳಲು ಸಹಾಯವಾಗುತ್ತದೆ. 
  3. ಹಸಿ ಮಾವು - ಮಾವು ಋತು ಇನ್ನೂ ಮುಗಿಯದಿರುವುದರಿಂದ ಟೊಮೆಟೋಗೆ ಉತ್ತಮ ಪರ್ಯಾಯವಾಗಿದೆ. 
  4. ಮೊಸರು - ರುಚಿಕರವಾದ ಬಿರಿಯಾನಿಗಳ ತಯಾರಿಗೆ ಟೊಮೆಟೋಗೆ ಪರ್ಯಾಯವಾಗಿ ಬಳಸಬಹುದಾಗಿದೆ. 
  5. ಕುಂಬಳಕಾಯಿ - ಸಿಹಿಯಾದ ಹಾಗೂ ಕೆನೆ ರೂಪದಲ್ಲಿ ಮರುರೂಪಿಸಲಾಗಿರುವ ಟೊಮೆಟೋ ಆಗಿದ್ದು, ಟೊಮೆಟೋಗೆ ಪರ್ಯಾಯವಾಗಿ ಬಳಸಬಹುದಾಗಿದೆ. ಬಹುಶಃ ಕುಂಬಳಕಾಯಿ ಸೂಪ್ ನ್ನೂ ತಯಾರಿಸಬಹುದು... 
  6. ಟೊಮೆಟೋ ಕೆಚಪ್ - ಟೊಮೆಟೋಗಳಿಂದಲೇ ಮಾಡಲಾಗಿದ್ದರೂ ಸಹ ಟೊಮೆಟೋಗಳಿಗಿಂತಲೂ ಅಗ್ಗದ ಆಯ್ಕೆಯಾಗಿದೆ. 
SCROLL FOR NEXT