ವಾಣಿಜ್ಯ

ಸಿಲಿಕಾನ್ ವ್ಯಾಲಿ ಬ್ಯಾಂಕ್ ವೈಫಲ್ಯದಿಂದ ಕಲಿಯಬೇಕಿರುವ ಪಾಠ ಏನು?: ಝೀರೋಧ ಸಿಇಒ ನಿಖಿಲ್ ಕಾಮತ್ ವಿವರಣೆ ಹೀಗಿದೆ..

Srinivas Rao BV

ಬೆಂಗಳೂರು: ಸಿಲಿಕಾನ್ ವ್ಯಾಲಿ ಬ್ಯಾಂಕ್ (ಎಸ್ ವಿಬಿ) ಕುಸಿತದ ಬಗ್ಗೆ ಚರ್ಚೆಗಳಾಗುತ್ತಿದ್ದು, ಈ ಕುಸಿತದಿಂದ ನಾವು ಕಲಿಯಬೇಕಿರುವ ಪಾಠಗಳೇನು ಎಂಬುದರ ಬಗ್ಗೆ ಝೀರೋಧ ಸ್ಥಾಪಕ ಹಾಗೂ ಇನ್ವೆಸ್ಟರ್ ನಿತಿನ್ ಕಾಮತ್ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
 
ಎಸ್ ವಿಬಿ ಆಗಿರಬಹುದು ಅಥವಾ ಇತ್ತೀಚಿನ ಯೆಸ್ ಬ್ಯಾಂಕ್ ಆಗಿರಬಹುದು ಇದರ ಕುಸಿತದ ಬಗ್ಗೆ ಟ್ವೀಟ್ ಮಾಡಿರುವ ಕಾಮತ್, ಎಲ್ಲಾ ಉದ್ಯಮದಲ್ಲೂ ಒಂದಲ್ಲಾ ಒಂದು ಹಂತದಲ್ಲಿ, ಅನಿರೀಕ್ಷಿತ ಬದಲಾವಣೆಗಳು ಎದುರಾಗಬಹುದು. ಆದ್ದರಿಂದ ಪ್ರತಿಯೊಂದನ್ನೂ ರಿಸ್ಕ್ ಎಂದೇ ಪರಿಗಣಿಸಿ ಹಾಗೂ ಅದನ್ನು ಎದುರಿಸಲು ಅಥವಾ ನಿವಾರಿಸಲು ಅಗತ್ಯವಿರುವ ಎಲ್ಲವನ್ನೂ ಮಾಡಿ. ಉದ್ಯಮದಲ್ಲಿ ಅಂತಹ ಸನ್ನಿವೇಶಗಳನ್ನು ಎದುರಿಸಿ ದಾಟಿ ಮುಂದೆ ಸಾಗಬೇಕು ಎಂದು ವಿವರಿಸಿದ್ದಾರೆ.

"ಎಸ್ ವಿಬಿ ಅಥವಾ ಯೆಸ್ ಬ್ಯಾಂಕ್ ಕುಸಿತದ ಉದಾಹರಣೆಯಿಂದ ಕಲಿಯಬೇಕಾಗಿರುವುದೇನು ಎಂದರೆ, ಭಾರತೀಯ ಪರಿಭಾಷೆಯಲ್ಲಿ, ಕಾರ್ಯನಿರ್ವಹಣೆಯ ಬಂಡವಾಳವನ್ನು ಬೇರೆ ಬೇರೆ ಬ್ಯಾಂಕ್ ಗಳಲ್ಲಿ ಇಡುವ ಕ್ರಮ ಒಳಿತು ಎಂಬ ಪಾಠ" ಎಂದು ನಿತಿನ್ ಕಾಮತ್ ಹೇಳಿದ್ದಾರೆ.

SCROLL FOR NEXT