ವಾಣಿಜ್ಯ

ವಾಣಿಜ್ಯ ಬಳಕೆ ಸಿಲಿಂಡರ್ ದರ ಹೆಚ್ಚಳ: ನೂತನ ದರ ಹೀಗಿದೆ

Sumana Upadhyaya

ನವದೆಹಲಿ: ನವೆಂಬರ್ ತಿಂಗಳ ಮೊದಲ ದಿನವೇ ಜನತೆಗೆ ಬಿಗ್ ಶಾಕ್ ದೊರೆತಿದ್ದು ಎಲ್ ಪಿಜಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 103 ರೂಪಾಯಿ ಏರಿಕೆಯಾಗಿದೆ. 

19 ಕೆಜಿ ವಾಣಿಜ್ಯ ಬಳಕೆ ಎಲ್ ಪಿಜಿ ಸಿಲಿಂಡರ್ ಬೆಲೆಯನ್ನು 103 ರೂ. ಹೆಚ್ಚಿಸಲಾಗಿದೆ.(Commercial cylinder price) ದೆಹಲಿಯಲ್ಲಿ ಇಂದು ನವೆಂಬರ್ 1ರಿಂದ 19 ಕೆಜಿ ಎಲ್ ಪಿಜಿ ಸಿಲಿಂಡರ್ 1833 ರೂಪಾಯಿಗೆ ಲಭ್ಯವಾಗಲಿದೆ. ಮುಂಬೈನಲ್ಲಿ 1785.50 ರೂಪಾಯಿ, ಕೋಲ್ಕತ್ತಾದಲ್ಲಿ 1943.00 ರೂಪಾಯಿ, ಚೆನ್ನೈನಲ್ಲಿ 1999.50 ರೂಪಾಯಿಗೆ ಬೆಲೆ ಏರಿಕೆ ಆಗಿದೆ. ಕಳೆದ 32 ದಿನಗಳಲ್ಲಿ ಎಲ್ಪಿಜಿ ಸಿಲಿಂಡರ್ ಬೆಲೆ 310 ರೂಪಾಯಿಗಳಷ್ಟು ಹೆಚ್ಚಳವಾಗಿದೆ. 

ಈ ಮೊದಲು, ಅಕ್ಟೋಬರ್ 1 ರಂದು ವಾಣಿಜ್ಯ ಸಿಲಿಂಡರ್ ಗಳ ಬೆಲೆಯನ್ನು ಸುಮಾರು 209 ರೂಪಾಯಿಗೆ ಹೆಚ್ಚಿಸಲಾಯಿತು. ಈಗ ಮತ್ತೆ ಏರಿಕೆ ಆಗಿದ್ದು, ಕಳೆದ ಒಂದು ತಿಂಗಳಲ್ಲಿ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಗಳ ಬೆಲೆ 310 ಹೆಚ್ಚಳವಾಗಿದೆ. ಕೋಲ್ಕತ್ತಾದಲ್ಲಿ 1943.00 ರೂ., ಕಳೆದ ತಿಂಗಳು 203 ರೂ. ಅಂದರೆ, ಒಂದು ತಿಂಗಳಲ್ಲಿ, ಪ್ರತಿ ಸಿಲಿಂಡರ್ ಗೆ 304.50 ರೂ.ಗಳ ಹೆಚ್ಚಳವಾಗಿದೆ.

ದೇಶದ ವಿವಿಧ ನಗರಗಳಲ್ಲಿ ಇಂದು ಎಲ್ ಪಿಜಿ ವಾಣಿಜ್ಯ ಸಿಲಿಂಡರ್ ಬೆಲೆಗಳು ಹೀಗಿವೆ:
ಬೆಂಗಳೂರು: 1,813 ರೂಪಾಯಿ (203 ರೂಪಾಯಿ ಜಾಸ್ತಿ ಅಗಿದೆ)
ಮುಂಬೈ: 1,785.5 ರೂಪಾಯಿ
ದೆಹಲಿ 1,833 ರೂಪಾಯಿ
ಕೊಲ್ಕತ್ತಾ 1,943 ರೂಪಾಯಿ
ಚೆನ್ನೈ 1,999.5 ರೂಪಾಯಿ

SCROLL FOR NEXT