ವಾಣಿಜ್ಯ

ಸೆಪ್ಟೆಂಬರ್ ನಲ್ಲಿ ಜಿಎಸ್ ಟಿ ಸಂಗ್ರಹ ಶೇ.10 ರಷ್ಟು ಹೆಚ್ಚಳ; 1.60 ಲಕ್ಷ ಕೋಟಿ ರೂ.

Nagaraja AB

ನವದೆಹಲಿ: ತೆರಿಗೆ ಸುಧಾರಣೆ ಕ್ರಮಗಳ ನೆರವಿನೊಂದಿಗೆ ಸೆಪ್ಟೆಂಬರ್ ತಿಂಗಳಲ್ಲಿ ಜಿಎಸ್ ಟಿ ಸಂಗ್ರಹದಲ್ಲಿ ಶೇ. 10 ರಷ್ಟು ಹೆಚ್ಚಳದೊಂದಿಗೆ1. 60 ಲಕ್ಷ ಕೋಟಿ ವರಮಾನ ಬಂದಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ನಾಲ್ಕನೇ ಬಾರಿಗೆ ರೂ. 1.6 ಲಕ್ಷ ಕೋಟಿ ದಾಟಿದೆ. ಕಳೆದ ತಿಂಗಳು ಒಟ್ಟಾರೇ ರೂ. 1.62.712 ಕೋಟಿ ರೂ. ಜಿಎಸ್ ಟಿ ಆದಾಯ ಸಂಗ್ರಹವಾಗಿದೆ. 

ಇದರಲ್ಲಿ ಕೇಂದ್ರ ಜಿಎಸ್ ಟಿ ರೂ. 29. 818 ಕೋಟಿ, ರಾಜ್ಯ ಜಿಎಸ್ ಟಿ ರೂ. 37.657 ಕೋಟಿ, ಸಮಗ್ರ  ಜಿಎಸ್ ಟಿ ರೂ.83. 623 ಕೋಟಿ ಹಾಗೂ ಸೆಸ್ ರೂ. 11. 695 ಕೋಟಿ ಒಳಗೊಂಡಿದೆ. 2023 ರ ಸೆಪ್ಟೆಂಬರ್‌ನಲ್ಲಿನ ಆದಾಯ ಕಳೆದ ವರ್ಷದ ಇದೇ ತಿಂಗಳು ಸಂಗ್ರಹವಾಗಿದ್ದ 1.47 ಲಕ್ಷ ಕೋಟಿಗಿಂತ ಶೇ. 10 ರಷ್ಟು ಹೆಚ್ಚಾಗಿದೆ ಎಂದು ಹಣಕಾಸು ಸಚಿವಾಲಯ ಭಾನುವಾರ ಹೇಳಿಕೆಯಲ್ಲಿ ತಿಳಿಸಿದೆ.

ಕಳೆದ ತಿಂಗಳು ದೇಶೀಯ ವಹಿವಾಟುಗಳಿಂದಾದ (ಸೇವೆಗಳ ಆಮದು ಸೇರಿದಂತೆ) ಆದಾಯ ಕಳೆದ ವರ್ಷ ಇದೇ ತಿಂಗಳಲ್ಲಿ ಆಗಿದ್ದ ಆದಾಯಕ್ಕಿಂತ ಶೇಕಡಾ 14 ರಷ್ಟು ಹೆಚ್ಚಾಗಿದೆ. ಈ ಹಣಕಾಸು ವರ್ಷದಲ್ಲಿ ನಾಲ್ಕನೇ ಬಾರಿಗೆ ಒಟ್ಟು ಜಿಎಸ್‌ಟಿ ಸಂಗ್ರಹವು 1.60 ಲಕ್ಷ ಕೋಟಿ ರೂಪಾಯಿಗಳನ್ನು ದಾಟಿದೆ ಎಂದು ಸಚಿವಾಲಯ ತಿಳಿಸಿದೆ. 

SCROLL FOR NEXT