ಮಹೇಂದ್ರ ಸಿಂಗ್ ಧೋನಿ 
ವಾಣಿಜ್ಯ

ರಿಲಯನ್ಸ್ ಜಿಯೋ ಮಾರ್ಟ್ ಗೆ ಮಹೇಂದ್ರ ಸಿಂಗ್ ಧೋನಿ ಬ್ರ್ಯಾಂಡ್ ಅಂಬಾಸಿಡರ್

ರಿಲಯನ್ಸ್ ರಿಟೇಲ್‌ನ ಜಿಯೋಮಾರ್ಟ್ ದೇಶದ ಪ್ರಮುಖ ಇ-ಮಾರ್ಕೆಟ್‌ ಪ್ಲೇಸ್‌ಗಳಲ್ಲಿ ಒಂದಾಗಿದ್ದು, ಭಾರತೀಯ ಕ್ರಿಕೆಟ್ ಐಕಾನ್ ಮಹೇಂದ್ರ ಸಿಂಗ್ ಧೋನಿ ಅವರನ್ನು ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿಕೊಂಡಿದೆ.

ರಿಲಯನ್ಸ್ ರಿಟೇಲ್‌ನ ಜಿಯೋಮಾರ್ಟ್ ದೇಶದ ಪ್ರಮುಖ ಇ-ಮಾರ್ಕೆಟ್‌ ಪ್ಲೇಸ್‌ಗಳಲ್ಲಿ ಒಂದಾಗಿದ್ದು, ಭಾರತೀಯ ಕ್ರಿಕೆಟ್ ಐಕಾನ್ ಮಹೇಂದ್ರ ಸಿಂಗ್ ಧೋನಿ ಅವರನ್ನು ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿಕೊಂಡಿದೆ.

ಇದರ ಜೊತೆಗೆ, ತನ್ನ ಹಬ್ಬದ ಕ್ಯಾಂಪೇನ್ ಅನ್ನು ಜಿಯೋ ಉತ್ಸವ, ಸೆಲೆಬ್ರೇಶನ್‌ ಆಫ್‌ ಇಂಡಿಯಾ ಎಂದು ಮರುನಾಮಕರಣ ಮಾಡಿದ್ದು, 2023 ಅಕ್ಟೋಬರ್ 8 ರಿಂದ ಲೈವ್ ಆಗಲಿದೆ.

ಜಿಯೋಮಾರ್ಟ್ ಸಿಇಒ ಸಂದೀಪ್ ವರಗಂಟಿ, ನಮ್ಮ ಬ್ರಾಂಡ್ ಅಂಬಾಸಿಡರ್ ಆಗಿ ಎಂಎಸ್ ಧೋನಿ ಅತ್ಯಂತ ಉತ್ತಮವಾಗಿ ಹೊಂದಿಕೆಯಾಗುತ್ತಾರೆ. ಅವರ ವ್ಯಕ್ತಿತ್ವವು ಜಿಯೋಮಾರ್ಟ್‌ನ ಹಾಗೆಯೇ ವಿಶ್ವಾಸ, ನಂಬಿಕೆ ಮತ್ತು ಖಾತರಿಯನ್ನು ಪ್ರತಿಬಿಂಬಿಸುತ್ತದೆ.

ನಮ್ಮ ಪ್ರೀತಿ ಪಾತ್ರರ ಜೊತೆಗೆ ವಿಶೇಷ ಕ್ಷಣಗಳನ್ನು ಕಳೆಯುವುದಕ್ಕೆ ನಮ್ಮ ಹೊಸ ಅಭಿಯಾನವು ಅನುವು ಮಾಡುತ್ತದೆ. ಇದರಲ್ಲಿ ಶಾಪಿಂಗ್ ಎಂಬುದು ಒಂದು ಅವಿಭಾಜ್ಯ ಅಂಗ ಎಂಬುದನ್ನು ಇದು ಪ್ರತಿಬಿಂಬಿಸುತ್ತದೆ. ಮೆಟ್ರೋ ಹೊರತಾದ ಪ್ರದೇಶಗಳು ಒಟ್ಟಾರೆ ಸೇಲ್ ನಲ್ಲಿ ಸುಮಾರು 60% ಪಾಲು ಹೊಂದಿದೆ. ಇದು ದೇಶದ ರಿಟೇಲ್ ವಲಯ ವಿಕೇಂದ್ರೀಕರಣಗೊಳ್ಳುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದಿದ್ದಾರೆ.  

ಪ್ರಾದೇಶಿಕ ಕಲಾಕಾರರನ್ನು ಪ್ರೋತ್ಸಾಹಿಸುವ ಕೆಲಸವನ್ನು ಜಿಯೋಮಾರ್ಟ್ ಎಂದಿಗೂ ಮಾಡುತ್ತಿದೆ. ಪ್ಲಾಟ್‌ಫಾರಂ ಪ್ರಸ್ತುತ 1000 ಕ್ಕೂ ಹೆಚ್ಚು ಕಲಾಕಾರರ ಜೊತೆಗೆ ಕೆಲಸ ಮಾಡುತ್ತಿದ್ದು, 1.5 ಲಕ್ಷ ವಿಶಿಷ್ಟ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ಅಷ್ಟಕ್ಕೂ, ಕ್ಯಾಂಪೇನ್ ಶೂಟಿಂಗ್‌ನ ಭಾಗವಾಗಿ, ಬಿಹಾರದ ಪ್ರಶಸ್ತಿ ಪುರಸ್ಕೃತ ಕಲಾವಿದೆ ಅಂಬಿಕಾ ದೇವಿಯವರ ಮಧುಬನಿ ಪೇಂಟಿಂಗ್ ಅನ್ನು ಧೋನಿಯವರಿಗೆ ವರಗಂಟಿ ಪ್ರದಾನ ಮಾಡಿದರು. ಗ್ರಾಹಕರಿಗೆ ಉತ್ತಮ ಉತ್ಪನ್ನಗಳು ಮತ್ತು ಉತ್ತಮ ಅನುಭವವನ್ನು ಒದಗಿಸುವುದಷ್ಟೇ ಅಲ್ಲ, ಸರಾಗವಾಗಿ ಉದ್ಯಮವನ್ನು ನಡೆಸಲು ಲಕ್ಷಾಂತರ ಕಲಾಕಾರರು ಮತ್ತು ಎಸ್‌ಎಂಬಿಗಳಿಗೆ ಅನುವು ಮಾಡಿಕೊಡುತ್ತಿದೆ.

ಮಹೇಂದ್ರ ಸಿಂಗ್ ಧೋನಿ ಪ್ರತಿಕ್ರಿಯಿಸಿ, ಜಿಯೋಮಾರ್ಟ್‌ನ ಮೌಲ್ಯ ಮತ್ತು ಗುರುತಿಗೂ ನನಗೂ ಹೊಂದಿಕೆಯಾಗುತ್ತದೆ. ದೇಶೀಯ ಇ-ಕಾಮರ್ಸ್ ಬ್ರಾಂಡ್ ಆಗಿರುವ ಇದು ಭಾರತದಲ್ಲಿ ಡಿಜಿಟಲ್ ರಿಟೇಲ್ ಕ್ರಾಂತಿಯನ್ನು ಉಂಟುಮಾಡುವ ಉದ್ದೇಶವನ್ನು ಹೊಂದಿದ್ದಾರೆ.

ಭಾರತದ್ದು ವೈವಿಧ್ಯಮಯ ಸಂಸ್ಕೃತಿ ಜನರು ಮತ್ತು ಹಬ್ಬಗಳಿಗೆ ಹೆಸರಾಗಿದೆ. ಭಾರತ ಮತ್ತು ಭಾರತೀಯರ ಸಂಭ್ರಮಕ್ಕೆ ಜಿಯೋಮಾರ್ಟ್‌ನ ಜಿಯೋ ಉತ್ಸವವು ಹೊಸ ಆಯಾಮವನ್ನು ನೀಡಿದೆ. ಜಿಯೋಮಾರ್ಟ್ ಜೊತೆಗೆ ಗುರುತಿಸಿಕೊಳ್ಳಲು ಮತ್ತು ಲಕ್ಷಾಂತರ ಭಾರತೀಯರ ಶಾಪಿಂಗ್ ಪಯಣದ ಭಾಗವಾಗುವುದಕ್ಕೆ ನನಗೆ ಹೆಮ್ಮೆಯಾಗುತ್ತಿದೆ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

"Misfit For Army": ಗುರುದ್ವಾರ ಪ್ರವೇಶಿಸಲು ನಿರಾಕರಣೆ; ಕ್ರಿಶ್ಚಿಯನ್ ಸೇನಾ ಅಧಿಕಾರಿಗೆ ಸುಪ್ರೀಂ ಕೋರ್ಟ್ ತರಾಟೆ!

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

WPL 2026 auction: ಈ ಬಾರಿಯ 'ಮೋಸ್ಟ್ ಡಿಮ್ಯಾಂಡ್' ಆಟಗಾರ್ತಿ ಯಾರು?

SCROLL FOR NEXT