ಅಂಬಾನಿ ಕುಟುಂಬ 
ವಾಣಿಜ್ಯ

ಮುಕೇಶ್ ಅಂಬಾನಿ ಮಕ್ಕಳಾದ ಆಕಾಶ್, ಇಶಾ ಮತ್ತು ಅನಂತ್ ಗೆ ರಿಲಯನ್ಸ್ ಮಂಡಳಿಯಲ್ಲಿ ಸ್ಥಾನ!

ರಿಲಯನ್ಸ್ ಇಂಡಸ್ಟ್ರೀಸ್ ಮಂಡಳಿಯಲ್ಲಿ ದೇಶದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಅವರ ಮೂವರು ಮಕ್ಕಳನ್ನು ನೇಮಕ ಮಾಡಲು ಷೇರುದಾರರು ಅನುಮೋದನೆ ನೀಡಿದ್ದಾರೆ. 

ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ ಮಂಡಳಿಯಲ್ಲಿ ದೇಶದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ (Mukesh Ambani) ಅವರ ಮೂವರು ಮಕ್ಕಳನ್ನು ನೇಮಕ ಮಾಡಲು ಷೇರುದಾರರು ಅನುಮೋದನೆ ನೀಡಿದ್ದಾರೆ. 

32 ವರ್ಷದ ಅವಳಿ ಮಕ್ಕಳಾದ ಇಶಾ ಅಂಬಾನಿ (Isha Ambani) ಮತ್ತು ಆಕಾಶ್ ಅಂಬಾನಿ (Akash Ambani) ರಿಲಯನ್ಸ್ ಮಂಡಳಿಗೆ ನೇಮಕಗೊಳ್ಳಲು ಶೇಕಡ 98ಕ್ಕಿಂತ ಹೆಚ್ಚು ಮತಗಳನ್ನು ಪಡೆದರೆ, 28 ವರ್ಷದ ಅನಂತ್ ಶೇಕಡ 92.75ರಷ್ಟು ಮತಗಳನ್ನು ಪಡೆದಿದ್ದಾರೆ ಎಂದು ಸಂಸ್ಧೆ ಷೇರು ಮಾರುಕಟ್ಟೆಗೆ ನೀಡಿದ ಮಾಹಿತಿಯಲ್ಲಿ ತಿಳಿಸಿದೆ.

 ರಿಲಯನ್ಸ್‌ನ AGM ನಲ್ಲಿ, ಕಂಪನಿಯ ಅಧ್ಯಕ್ಷ ಮುಖೇಶ್ ಅಂಬಾನಿ ಅವರ ಎಲ್ಲಾ ಮೂರು ಮಕ್ಕಳನ್ನು ಮಂಡಳಿಯಲ್ಲಿ ಸೇರಿಸಲು ನಿರ್ಧರಿಸಲಾಯಿತು. ಷೇರುದಾರರು ಅಕ್ಟೋಬರ್ 26ರೊಳಗೆ ಈ ಪ್ರಸ್ತಾವನೆಗೆ ಮತ ಹಾಕಬೇಕಿತ್ತು. ಅಂತಾರಾಷ್ಟ್ರೀಯ ಪ್ರಾಕ್ಸಿ ಸಲಹಾ ಸಂಸ್ಥೆಯು ಅನಂತ್ ಅಂಬಾನಿ ನೇಮಕದ ವಿರುದ್ಧ ಮತ ಚಲಾಯಿಸುವಂತೆ ಷೇರುದಾರರಿಗೆ ಮನವಿ ಮಾಡಿತ್ತು.

ಅಂತಾರಾಷ್ಟ್ರೀಯ ಪ್ರಾಕ್ಸಿ ಸಲಹಾ ಸಂಸ್ಥೆ ಇನ್ಸ್ಟಿಟ್ಯೂಷನಲ್ ಶೇರ್ ಹೋಲ್ಡರ್ ಸರ್ವಿಸಸ್ ಇಂಕ್ (ಐಎಸ್ಎಸ್) ಅನಂತ್ ಅಂಬಾನಿ ನೇಮಕದ ವಿರುದ್ಧ ಮತ ಚಲಾಯಿಸುವಂತೆ ಷೇರುದಾರರಿಗೆ ಮನವಿ ಮಾಡಿತ್ತು. ಅನಂತ್ ಅಂಬಾನಿ ಅವರಿಗೆ ಕೇವಲ ಆರು ವರ್ಷಗಳ ಅನುಭವವಿದೆ ಎಂದು ಸಂಸ್ಥೆಯು ಅಕ್ಟೋಬರ್ 12ರಂದು ಟಿಪ್ಪಣಿಯಲ್ಲಿ ತಿಳಿಸಿತ್ತು. ಅಂತಹ ಪರಿಸ್ಥಿತಿಯಲ್ಲಿ, ಮಂಡಳಿಗೆ ಅವರ ಕೊಡುಗೆಯ ಬಗ್ಗೆ ಪ್ರಶ್ನೆಗಳು ಉದ್ಭವಿಸುತ್ತವೆ. ಮುಂಬೈ ಮೂಲದ ಸಂಸ್ಥೆಯಾದ ಇನ್‌ಸ್ಟಿಟ್ಯೂಷನಲ್ ಇನ್ವೆಸ್ಟರ್ ಅಡ್ವೈಸರಿ ಸರ್ವಿಸಸ್ ಕೂಡ ಅನಂತ್ ಅಂಬಾನಿ ಅವರನ್ನು ರಿಲಯನ್ಸ್ ಮಂಡಳಿಗೆ ನೇಮಕ ಮಾಡಿರುವುದು ನಮ್ಮ ಮತದಾನದ ಮಾರ್ಗಸೂಚಿಗಳಿಗೆ ಅನುಗುಣವಾಗಿಲ್ಲ ಎಂದು ಹೇಳಿತ್ತು. ಆದಾಗ್ಯೂ, ಮತ್ತೊಂದು ಅಂತಾರಾಷ್ಟ್ರೀಯ ಪ್ರಾಕ್ಸಿ ಸಂಸ್ಥೆ ಗ್ಲಾಸ್ ಲೂಯಿಸ್ ಅನಂತ್ ಅವರ ನೇಮಕಾತಿಯನ್ನು ಬೆಂಬಲಿಸಿತ್ತು.

ನೀತಾ ಅಂಬಾನಿ ಹೇಳಿದ್ದೇನು?
31 ವರ್ಷದ ಆಕಾಶ್ 2014ರಿಂದ ರಿಲಯನ್ಸ್ ಜಿಯೋ ಇನ್ಫೋಕಾಮ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರಸ್ತುತ ಕಂಪನಿಯ ಅಧ್ಯಕ್ಷರಾಗಿದ್ದಾರೆ. ಅವರ ಅವಳಿ ಸಹೋದರಿ ಇಶಾ ರಿಲಯನ್ಸ್‌ನ ಚಿಲ್ಲರೆ ವ್ಯಾಪಾರವನ್ನು ನೋಡಿಕೊಳ್ಳುತ್ತಿದ್ದಾರೆ ಮತ್ತು ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ. ಕಳೆದ ಹಲವು ವರ್ಷಗಳಿಂದ ಎಜಿಎಂನಲ್ಲಿ ಷೇರುದಾರರ ಮುಂದೆ ಮಾತನಾಡಲು ಇಬ್ಬರಿಗೂ ಅವಕಾಶ ನೀಡಲಾಗಿದೆ. ಆದರೆ ಇಂಧನ ಉದ್ಯಮದಲ್ಲಿರುವ ಅನಂತ್ ಇದುವರೆಗೂ ಷೇರುದಾರರನ್ನು ಔಪಚಾರಿಕವಾಗಿ ಉದ್ದೇಶಿಸಿಲ್ಲ. ಅನಂತ್ ರಿಲಯನ್ಸ್‌ನ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದಾರೆ. ಎರಡು ಗ್ರೀನ್ ಎನರ್ಜಿ ಕಂಪನಿಗಳ ಮಂಡಳಿಯಲ್ಲಿಯೂ ಇದ್ದಾರೆ. ಈ ನಡುವೆ ಮುಖೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ (Nita Ambani) ಅವರು ಸಿಎನ್‌ಬಿಸಿ ಇಂಟರ್‌ನ್ಯಾಶನಲ್'ಗೆ ನೀಡಿದ ಸಂದರ್ಶನದಲ್ಲಿ ಈ ವಿಷಯ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಸೌರಭ್ ಭಾರದ್ವಾಜ್ ಮನೆ ಮೇಲೆ ಇಡಿ ದಾಳಿ; ಮೋದಿ ನಕಲಿ ಪದವಿ ಕುರಿತ ಗಮನ ಬೇರೆಡೆ ಸೆಳೆಯಲು ಯತ್ನ ಎಂದ AAP

SCROLL FOR NEXT