ವಾಣಿಜ್ಯ

ಹಣಕ್ಲಾಸು ಅಂಕಣಕಾರ ರಂಗಸ್ವಾಮಿ ಮೂಕನಹಳ್ಳಿ ವಿರಚಿತ "ಹಣ ಏನಿದು ನಿನ್ನ ವಿಚಿತ್ರ ಗುಣ" ಪುಸ್ತಕ ಅಮೇಜಾನ್ ನಲ್ಲಿ ನಂ.1, 18 ದಿನಗಳಲ್ಲಿ 4ನೇ ಮುದ್ರಣ!

Srinivas Rao BV

ಬೆಂಗಳೂರು: ಕನ್ನಡಪ್ರಭ.ಕಾಮ್ ನ ಹಣಕ್ಲಾಸು ಅಂಕಣಕಾರ ರಂಗಸ್ವಾಮಿ ಮೂಕನಹಳ್ಳಿ ಹಣದ ಕುರಿತಾಗಿ ಬರೆದಿರುವ ಹಣ ಏನಿದು ನಿನ್ನ ವಿಚಿತ್ರ ಗುಣ ಪುಸ್ತಕ ಪ್ರಕಟಗೊಂಡ 18 ದಿನಗಳಲ್ಲಿ 4 ನೇ ಮುದ್ರಣ ಕಂಡಿದೆ. 

ಜನಸಾಮಾನ್ಯರ ನಿತ್ಯ ಬದುಕಿನಲ್ಲಿ ಹಣದ ಕುರಿತಾದ ಅನೇಕ ವಿಚಾರಗಳು, ಹಣದ ಬಳಕೆ ಕುರಿತ, ಆರ್ಥಿಕ ಶಿಸ್ತನ್ನು ರೂಢಿಸಿಕೊಳ್ಳುವುದರ ಬಗ್ಗೆ  ಹಲವು ಅಂಶಗಳನ್ನು "ಹಣ ಏನಿದು ನಿನ್ನ ವಿಚಿತ್ರ ಗುಣ" ಪುಸ್ತಕ ಒಳಗೊಂಡಿದೆ.

ರಂಗಸ್ವಾಮಿ ಅವರು ಈಗಾಗಲೇ ಆರ್ಥಿಕತೆ, ಹೂಡಿಕೆ, ಹಣಕ್ಕೆ ಸಂಬಧಿಸಿದ ಹಲವು ಪುಸ್ತಕಗಳನ್ನು ಬರೆದಿದ್ದು ಇದು ಅವರ 25 ನೇ ಕೃತಿಯಾಗಿದೆ. ಸಾವಣ್ಣ ಪ್ರಕಾಶ ಹೊರತಂದಿರುವ ಈ ಪುಸ್ತಕ ಕಳೆದ ಒಂದು ವಾರದಿಂದ ಅಮೇಜಾನ್ ವೆಬ್ ಸೈಟ್ ನಲ್ಲಿ ಕನ್ನಡ ಪುಸ್ತಕ ಮಾರಾಟ ವಿಭಾಗದಲ್ಲಿ ಪ್ರಥಮ ಸ್ಥಾನದಲ್ಲಿದ್ದು, ಬೆಸ್ಟ್ ಸೆಲ್ಲರ್ ವಿಭಾಗದಲ್ಲಿ ಆಂಗ್ಲ ಕೃತಿಗಳಿಗೂ ಪೈಪೋಟಿ ನೀಡುತ್ತಿದೆ.

SCROLL FOR NEXT