ಹಣದುಬ್ಬರ ಇಳಿಕೆ
ಹಣದುಬ್ಬರ ಇಳಿಕೆ online desk
ವಾಣಿಜ್ಯ

ಚಿಲ್ಲರೆ ಹಣದುಬ್ಬರ 5 ತಿಂಗಳಲ್ಲೇ ದಾಖಲೆಯ ಕುಸಿತ!

Srinivas Rao BV

ನವದೆಹಲಿ: ಚಿಲ್ಲರೆ ಹಣದುಬ್ಬರ 5 ತಿಂಗಳಲ್ಲೇ ಅತ್ಯಂತ ಕಡಿಮೆ ದಾಖಲಾಗಿದೆ. ಮಾರ್ಚ್ ತಿಂಗಳಲ್ಲಿ ಶೇ.4.85 ರಷ್ಟಿದೆ. ಆಹಾರ ಪದಾರ್ಥಗಳ ಬೆಲೆ ಇಳಿಕೆಯಾಗಿರುವ ಪರಿಣಾಮ ಚಿಲ್ಲರೆ ಹಣದುಬ್ಬರ ಕಡಿಮೆಯಾಗಿದೆ. ರಿಸರ್ವ್ ಬ್ಯಾಂಕ್ ಹಣದುಬ್ಬರವನ್ನು ಶೇ.4 ರಷ್ಟರಲ್ಲಿರಿಸುವ ಗುರಿ ಹೊಂದಿದೆ.

ಸಿಪಿಐ ಆಧರಿತ ಚಿಲ್ಲರೆ ಹಣದುಬ್ಬರ 2023 ರ ಫೆಬ್ರವರಿ ತಿಂಗಳಲ್ಲಿ ಶೇ.5.09 ಹಾಗೂ ಮಾರ್ಚ್ ತಿಂಗಳಲ್ಲಿ ಶೇ.5.66 ರಷ್ಟಿತ್ತು.

2023 ರ ಅಕ್ಟೋಬರ್ ನಲ್ಲಿ ಗ್ರಾಹಕ ದರ ಸೂಚ್ಯಂಕ (ಸಿಪಿಐ) ಆಧರಿತ ಹಣದುಬ್ಬರ ಶೇ.4.87 ರಷ್ಟಿತ್ತು. ರಾಷ್ಟ್ರೀಯ ಅಂಕಿಅಂಶ ಕಚೇರಿ (ಎನ್‌ಎಸ್‌ಒ) ಬಿಡುಗಡೆ ಮಾಡಿದ ಅಂಕಿ-ಅಂಶಗಳ ಪ್ರಕಾರ ಫುಡ್ ಬ್ಯಾಸ್ಕೆಟ್ ಹಣದುಬ್ಬರ ಫೆಬ್ರವರಿಯಲ್ಲಿದ್ದ ಶೇಕಡಾ 8.66 ರಿಂದ ಮಾರ್ಚ್‌ನಲ್ಲಿ ಶೇಕಡಾ 8.52ಕ್ಕೆ ಕಡಿಮೆಯಾಗಿದೆ.

ಅಂಕಿಅಂಶಗಳ ಪ್ರಕಾರ, ಮೊಟ್ಟೆಗಳು, ಮಸಾಲೆಗಳು ಮತ್ತು ಬೇಳೆಕಾಳುಗಳ ಹಣದುಬ್ಬರವು ತಿಂಗಳ ಆಧಾರದ ಮೇಲೆ ಕಡಿಮೆಯಾಗಿದೆ. ಆದಾಗ್ಯೂ, ಫೆಬ್ರವರಿಗೆ ಹೋಲಿಸಿದರೆ ಮಾರ್ಚ್‌ನಲ್ಲಿ ಹಣ್ಣುಗಳು ಮತ್ತು ತರಕಾರಿಗಳ ವಿಭಾಗಗಳಲ್ಲಿ ಏರಿಕೆ ಕಂಡುಬಂದಿದೆ.

SCROLL FOR NEXT