ಅಮೆಜಾನ್ ಮತ್ತು ಮೈಕ್ರೋಸಾಫ್ಟ್‌ನ ಗ್ರಾಹಕರಿಗೆ ತಾಂತ್ರಿಕ ಬೆಂಬಲವನ್ನು ನೀಡುವ ಹೆಸರಿನಲ್ಲಿ ಆಕರ್ಷಕ ಕೊಡುಗೆಗಳನ್ನು ನೀಡುವ ಮೂಲಕ ವಂಚಿಸಿದ 10 ಕಾಲ್ ಸೆಂಟರ್ ಗಳ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಪ್ರಕರಣ ದಾಖಲಿಸಿದೆ. ಮೈಕ್ರೋಸಾಫ್ಟ್‌ನ ದೂರಿನ ಮೇರೆಗೆ ಕೇಂದ್ರೀಯ ತನಿಖಾ ಸಂಸ್ಥೆಯು 10 ಕಾಲ್ ಸೆಂಟರ್‌ಗಳ ವಿರುದ್ಧ ಎಫ್‌ಐಆರ್ ದಾಖಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಪೈಕಿ ಐದು ಕಾಲ್ ಸೆಂಟರ್‌ಗಳು ಅಮೆಜಾನ್ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಎರಡೂ ಪ್ರಕರಣಗಳನ್ನು ಕಳೆದ ವರ್ಷ ಅಕ್ಟೋಬರ್ 4 ರಂದು ದಾಖಲಿಸಲಾಗಿತ್ತು. ಆದರೆ ಇದೀಗ ವಿಶೇಷ ನ್ಯಾಯಾಲಯದ ಆದೇಶದ ಮೇರೆಗೆ ಸಾರ್ವಜನಿಕಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಏತನ್ಮಧ್ಯೆ, ನೋಯ್ಡಾ ಪೊಲೀಸರು ಶುಕ್ರವಾರ ಈ ಪ್ರಕರಣದಲ್ಲಿ ಮೂವರು ಮಹಿಳೆಯರು ಸೇರಿದಂತೆ 15 ಸೈಬರ್ ದರೋಡೆಕೋರರನ್ನು ಬಂಧಿಸಿದ್ದಾರೆ. ಅವರಿಂದ 25 ಲ್ಯಾಪ್‌ಟಾಪ್‌ಗಳು ಮತ್ತು 16 ಮೊಬೈಲ್‌ಗಳು ಮತ್ತು ಇತರ ಸಾಧನಗಳನ್ನು ವಶಪಡಿಸಿಕೊಂಡಿದ್ದಾರೆ.
ಅಸಿಸ್ಟೆಂಟ್ ಡೆಪ್ಯುಟಿ ಕಮಿಷನರ್ ಆಫ್ ಪೋಲೀಸ್ ರಂಬದನ್ ಸಿಂಗ್, ಸೆಕ್ಟರ್ -59 ರ ಎ ಬ್ಲಾಕ್‌ನಲ್ಲಿರುವ ಕಟ್ಟಡದಲ್ಲಿ ಮೋಸದ ಕಾಲ್ ಸೆಂಟರ್ ಕಾರ್ಯನಿರ್ವಹಿಸುತ್ತಿದೆ ಎಂದು ಮಾಹಿತಿದಾರರಿಂದ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಇದು ಅಮೆರಿಕನ್ ನಾಗರಿಕರನ್ನು ವಂಚಿಸುತ್ತದೆ. ಇದಾದ ಬಳಿಕ ಕಾಲ್ ಸೆಂಟರ್ ಮೇಲೆ ದಾಳಿ ನಡೆಸಿ 15 ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.
ವಂಚನೆ ನಡೆದಿದ್ದೇಗೆ?
ವಿದೇಶಿಗರು ಫೈರ್ ಸ್ಟಿಕ್ ಅಥವಾ ಇತರ ಅಮೆಜಾನ್ ಸಾಧನಗಳನ್ನು ಸಕ್ರಿಯಗೊಳಿಸಲು ಪ್ರಯತ್ನಿಸಿದಾಗ, ಈ ಕಾಲ್ ಸೆಂಟರ್‌ಗಳು ತಾಂತ್ರಿಕ ಪರಿಹಾರಗಳನ್ನು ನೀಡುವ ಮೂಲಕ ಅವರ ಖಾತೆಗಳಿಗೆ ಶುಲ್ಕ ವಿಧಿಸುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೈಕ್ರೋಸಾಫ್ಟ್ ಪ್ರಕರಣದಲ್ಲಿ, ಆರೋಪಿಗಳು ಕಂಪ್ಯೂಟರ್‌ಗಳಿಗೆ ಆಪಾದಿತ ಬೆದರಿಕೆಯನ್ನು ಪರಿಹರಿಸಲು ಸಂಖ್ಯೆಗೆ ಕರೆ ಮಾಡಲು ಕೇಳುವ 'ಪಾಪ್-ಅಪ್' ಸಂದೇಶಗಳನ್ನು ಸಂತ್ರಸ್ತರಿಗೆ ಕಳುಹಿಸುತ್ತಾರೆ. ಗ್ರಾಹಕರು ಈ ಸಂಖ್ಯೆಗೆ ಕರೆ ಮಾಡಿದ ತಕ್ಷಣ ಕಾಲ್ ಸೆಂಟರ್ ನಿರ್ವಾಹಕರು ವಂಚಿಸುತ್ತಾರೆ ಎಂದು ಸಂಸ್ಥೆ ಆರೋಪಿಸಿದೆ.