ಸಗಟು ಹಣದುಬ್ಬರ (ಸಾಂಕೇತಿಕ ಚಿತ್ರ) online desk
ವಾಣಿಜ್ಯ

ಸಗಟು ಹಣದುಬ್ಬರ: 3 ತಿಂಗಳಲ್ಲಿ ಕನಿಷ್ಠ ಮಟ್ಟಕ್ಕೆ ಕುಸಿತ

ಸಗಟು ಹಣದುಬ್ಬರ 3 ತಿಂಗಳಲ್ಲಿ ಕನಿಷ್ಠ ಮಟ್ಟಕ್ಕೆ ಕುಸಿದಿದ್ದು, ಜುಲೈ ತಿಂಗಳಲ್ಲಿ 2.04 ರಷ್ಟು ದಾಖಲಾಗಿದೆ.

ನವದೆಹಲಿ: ಸಗಟು ಹಣದುಬ್ಬರ 3 ತಿಂಗಳಲ್ಲಿ ಕನಿಷ್ಠ ಮಟ್ಟಕ್ಕೆ ಕುಸಿದಿದ್ದು, ಜುಲೈ ತಿಂಗಳಲ್ಲಿ 2.04 ರಷ್ಟು ದಾಖಲಾಗಿದೆ. ಆಹಾರ ಪದಾರ್ಥಗಳಲ್ಲಿ, ಪ್ರಮುಖವಾಗಿ ತರಕಾರಿಗಳ ಬೆಲೆ ಇಳಿಕೆಯಾಗಿರುವುದರಿಂದ ಸಗಟು ಹಣದುಬ್ಬರ ಇಳಿಕೆಯಾಗಿದೆ ಎಂದು ಸರ್ಕಾರದ ಡೇಟಾ ಮೂಲಕ ತಿಳಿದುಬಂದಿದೆ.

ಡಬ್ಲ್ಯುಪಿಐ ಆಧಾರಿತ ಹಣದುಬ್ಬರ ಜೂನ್ ತಿಂಗಳವರೆಗೂ ಏರುಗತಿಯಲ್ಲಿ ಶೇ.3.36 ರಷ್ಟಿತ್ತು. ಕಳೆದ ವರ್ಷ ಜುಲೈ ನಲ್ಲಿ ಸಗಟು ಹಣದುಬ್ಬರ (-)1.23 ರಷ್ಟಿತ್ತು ಎಂಬುದು ಗಮನಾರ್ಹ

ಏಪ್ರಿಲ್‌ನಲ್ಲಿ ಸಗಟು ಹಣದುಬ್ಬರವು ಶೇಕಡಾ 1.19 ರಷ್ಟಿತ್ತು. ಅಂಕಿ-ಅಂಶಗಳ ಪ್ರಕಾರ, ಜೂನ್ ನಲ್ಲಿ ಶೇ.10.87 ರಷ್ಟಿದ್ದ ಆಹಾರ ಹಣದುಬ್ಬರ ಜುಲೈನಲ್ಲಿ ಶೇ. 3.45 ರಷ್ಟಾಗಿದೆ. ಮುಖ್ಯವಾಗಿ ತರಕಾರಿಗಳು, ಧಾನ್ಯಗಳು, ಬೇಳೆಕಾಳುಗಳು ಮತ್ತು ಈರುಳ್ಳಿ ಬೆಲೆಯಲ್ಲಿ ಒಂದು ತಿಂಗಳ ಕುಸಿತ ಜುಲೈನಲ್ಲಿ ಶೇ.8.93 ರ ಹಣದುಬ್ಬರವಿಳಿತವನ್ನು ದಾಖಲಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!