ಸಾಂದರ್ಭಿಕ ಚಿತ್ರ  
ವಾಣಿಜ್ಯ

Tier II ನಗರಗಳಲ್ಲಿ ಮನೆಗಳ ಬೆಲೆ ಶೇ.65 ವರೆಗೆ ಹೆಚ್ಚಳ: ವರದಿ

ಉತ್ತರ ಭಾರತದಲ್ಲಿ, ಜೈಪುರ ಸಿಟಿಯಲ್ಲಿ ಹೊಸ ಪ್ರಾಜೆಕ್ಟ್ ಗಳ ಯೋಜನೆಗಳ ಬೆಲೆಯಲ್ಲಿ ಶೇಕಡಾ 65ರಷ್ಟು ಏರಿಕೆ ಕಂಡಿದೆ. 2023 ಮತ್ತು ಅಕ್ಟೋಬರ್ 2024 ರ ನಡುವೆ ಪ್ರತಿ ಚದರ ಅಡಿಗೆ 4,240 ರಿಂದ 6,979 ಕ್ಕೆ ಏರಿಕೆಯಾಗಿದೆ.

ಮುಂಬೈ: ರಾಷ್ಟ್ರೀಯ ಷೇರು ಮಾರುಕಟ್ಟೆಯಿಂದ ಪಟ್ಟಿ ಮಾಡಲಾದ ಡೇಟಾ ಅನಾಲಿಟಿಕ್ಸ್ ಸಂಸ್ಥೆ ಪ್ರಾಪ್ ಈಕ್ವೆಟಿಯ ವರದಿಯ ಪ್ರಕಾರ, 2023ರಿಂದ ಅಕ್ಟೋಬರ್ 2024ರ ನಡುವೆ ಅಗ್ರ 30 ಶ್ರೇಣಿ ದ್ವಿತೀಯ ದರ್ಜೆ ನಗರಗಳಲ್ಲಿನ ಹೊಸ ಪ್ರಾಜೆಕ್ಟ್ ಗಳ ಮನೆಗಳ ಬೆಲೆ ಶೇಕಡಾ 65ರಷ್ಟು ಹೆಚ್ಚಾಗಿದೆ. ಈ ಅವಧಿಯಲ್ಲಿ 26 ನಗರಗಳು ಬೆಲೆಯಲ್ಲಿ ಏರಿಕೆ ಕಂಡಿದ್ದರೆ, ನಾಲ್ಕು ನಗರಗಳಲ್ಲಿ ಇಳಿಕೆ ಕಂಡಿವೆ.

ಉತ್ತರ ಭಾರತದಲ್ಲಿ, ಜೈಪುರ ಸಿಟಿಯಲ್ಲಿ ಹೊಸ ಪ್ರಾಜೆಕ್ಟ್ ಗಳ ಯೋಜನೆಗಳ ಬೆಲೆಯಲ್ಲಿ ಶೇಕಡಾ 65ರಷ್ಟು ಏರಿಕೆ ಕಂಡಿದೆ. 2023 ಮತ್ತು ಅಕ್ಟೋಬರ್ 2024 ರ ನಡುವೆ ಪ್ರತಿ ಚದರ ಅಡಿಗೆ 4,240 ರಿಂದ 6,979 ಕ್ಕೆ ಏರಿಕೆಯಾಗಿದೆ. ಇಂದೋರ್ ನಗರದಲ್ಲಿ ಶೇಕಡಾ 20ರಷ್ಟು ಮತ್ತು ಡೆಹ್ರಾಡೂನ್ ನಲ್ಲಿ ಶೇಕಡಾ 14 ರಷ್ಟು ಏರಿಕೆ ಕಂಡಿದೆ.

ಇದಕ್ಕೆ ವ್ಯತಿರಿಕ್ತವಾಗಿ, ಸೋನೆಪತ್ ನಲ್ಲಿ ಶೇಕಡಾ 26ರಷ್ಟು ಬೆಲೆ ಇಳಿಕೆಯಾಗಿದೆ, ನಂತರ ಮೊಹಾಲಿ (8 ಶೇಕಡಾ) ಮತ್ತು ಭೋಪಾಲ್ (5 ಶೇಕಡಾ). ಆಗ್ರಾ, ಚಂಡೀಗಢ ಮತ್ತು ಭಿವಾಡಿಯಂತಹ ನಗರಗಳಲ್ಲಿ ಬೆಲೆಗಳು ಗಮನಾರ್ಹ ಏರಿಕೆ ಕಂಡು ಶೇಕಡಾ 59, ಶೇಕಡಾ 34 ಮತ್ತು ಶೇಕಡಾ 25ರಷ್ಟು ಏರಿಕೆಯಾಗಿದ್ದು, ಈ ನಗರಗಳಲ್ಲಿ ಹೊಸ ಪ್ರಾಜೆಕ್ಟ್ ಗಳು ಕಡಿಮೆಯಾಗಿತ್ತು.

ಪ್ರಾಪ್‌ಇಕ್ವಿಟಿಯ ಸಂಸ್ಥಾಪಕ ಮತ್ತು ಸಿಇಒ ಸಮೀರ್ ಜಸುಜಾ, ಈ ನಗರಗಳಲ್ಲಿ ಭೂಮಿಯ ಅಗ್ಗದ ಲಭ್ಯತೆ, ಸಂಪರ್ಕ ಮೂಲಸೌಕರ್ಯಗಳ ಅಭಿವೃದ್ಧಿ ಮತ್ತು ಬೇಡಿಕೆಯು ಪ್ರಸ್ತುತ ಡೆವಲಪರ್‌ಗಳಿಂದ ಮಾತ್ರವಲ್ಲದೆ ಹೊಸ ಪ್ರೀಮಿಯಂ ಮತ್ತು ಐಷಾರಾಮಿ ವಸತಿಗಳ ಪೂರೈಕೆಯನ್ನು ಹೆಚ್ಚಿಸಿದೆ ಎಂದರು.

ದಕ್ಷಿಣ ಭಾರತದಲ್ಲಿ, ಗುಂಟೂರು ಹೊಸ ವಸತಿ ಯೋಜನೆಗಳ ತೂಕದ ಸರಾಸರಿ ಬೆಲೆಯಲ್ಲಿ ಶೇಕಡಾ 51ರಷ್ಟು ಹೆಚ್ಚಳವನ್ನು ದಾಖಲಿಸಿದೆ, 2023 ಮತ್ತು ಅಕ್ಟೋಬರ್ 2024 ರ ನಡುವೆ ಪ್ರತಿ ಚದರ ಅಡಿಗೆ 5,169 ರೂಪಾಯಿಗೆ ತಲುಪಿದೆ. ಮಂಗಳೂರು ಶೇಕಡಾ 41ರಷ್ಟು ಏರಿಕೆ ಮತ್ತು ವಿಶಾಖಪಟ್ಟಣಂ ಶೇಕಡಾ 29ರಷ್ಟು ಏರಿಕೆ ಕಂಡಿತು. ಮೈಸೂರು ಮತ್ತು ತಿರುವನಂತಪುರದಲ್ಲಿ ಬೆಲೆ ಇಳಿಕೆಯಾಗಿದ್ದು, ಕ್ರಮವಾಗಿ ಶೇ.14 ಮತ್ತು ಶೇ.4ರಷ್ಟು ಇಳಿಕೆಯಾಗಿದೆ.

ಪಶ್ಚಿಮ ಭಾರತದಲ್ಲಿ, ಗಾಂಧಿ ನಗರವು ಪ್ರತಿ ಚದರ ಅಡಿಗೆ 4,844 ರೂ.ಗೆ ಶೇಕಡಾ 19ರಷ್ಟು ಏರಿಕೆ ಕಂಡಿತು, ನಂತರ ಸೂರತ್ (ಶೇ. 14) ಮತ್ತು ನಾಗ್ಪುರ (ಶೇ. 12). ಪೂರ್ವ ಭಾರತದಲ್ಲಿ, ಭುವನೇಶ್ವರದಲ್ಲಿ ಹೊಸ ಪ್ರಾಜೆಕ್ಟ್ ಗಳ ಸರಾಸರಿ ಬೆಲೆಯಲ್ಲಿ 15 ಪ್ರತಿಶತದಷ್ಟು ಹೆಚ್ಚಳವನ್ನು ದಾಖಲಿಸಿದೆ, ಪ್ರತಿ ಚದರ ಅಡಿಗೆ 7,731 ರೂಪಾಯಿ ತಲುಪಿದೆ, ಆದರೆ ರಾಯ್‌ಪುರ್ ಪ್ರತಿ ಚದರ ಅಡಿಗೆ 3,810 ಕ್ಕೆ ಶೇಕಡಾ 14ರಷ್ಟು ಏರಿಕೆ ಕಂಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

SCROLL FOR NEXT