ಸಾಂದರ್ಭಿಕ ಚಿತ್ರ 
ವಾಣಿಜ್ಯ

'Yes Madam' ಎಂದಿದ್ದಕ್ಕೇ ಸಿಬ್ಬಂದಿಗಳಿಗೆ HR ಗೇಟ್ ಪಾಸ್; ಖಾಸಗಿ ಸಂಸ್ಥೆಯ email ವೈರಲ್!

'Yes Madam' ಎಂಬ ಖಾಸಗಿ ಸಲೂನ್ ಹೋಮ್ ಸರ್ವಿಸ್ ಸ್ಟಾರ್ಟ್-ಅಪ್ ಕಂಪನಿಯು ತನ್ನ ಸಿಬ್ಬಂದಿಗಳು 'ಹೌದು' ಎಂದರು ಎಂಬ ಕಾರಣಕ್ಕೆ ಅವರನ್ನು ವಜಾ ಮಾಡಿದೆ.

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಖಾಸಗಿ ಸಂಸ್ಥೆಗಳು ತನ್ನ ಸಿಬ್ಬಂದಿಗಳನ್ನು ಒಂದಲ್ಲಾ ಒಂದು ಕಾರಣ ನೀಡಿ ತೆಗೆದು ಹಾಕುತ್ತಿದ್ದು, ಇಲ್ಲೊಂದು ಖಾಸಗಿ ಸಂಸ್ಥೆ ತನ್ನ ಸಿಬ್ಬಂದಿಗಳು 'ಹೌದು' ಎಂದಿದ್ದಕ್ಕೇ ಕೆಲಸದಿಂದ ವಜಾ ಮಾಡಿದೆ.

ಅಚ್ಚರಿಯಾದರೂ ಇದು ಸತ್ಯ.. 'Yes Madam' ಎಂಬ ಖಾಸಗಿ ಸಲೂನ್ ಹೋಮ್ ಸರ್ವಿಸ್ ಸ್ಟಾರ್ಟ್-ಅಪ್ ಕಂಪನಿಯು ತನ್ನ ಸಿಬ್ಬಂದಿಗಳು 'ಹೌದು' ಎಂದರು ಎಂಬ ಕಾರಣಕ್ಕೆ ಅವರನ್ನು ವಜಾ ಮಾಡಿದೆ. ಸಂಸ್ಥೆಯು ಸಿಬ್ಬಂದಿಗಳನ್ನು ವಜಾ ಮಾಡಿರುವ ಇ-ಮೇಲ್ ಸ್ಕ್ರೀನ್ ಶಾಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಇಷ್ಟಕ್ಕೂ ಸಿಬ್ಬಂದಿ ವಜಾಕ್ಕೆ ಕಾರಣವೇನು?

ಇತ್ತೀಚೆಗೆ ಈ 'Yes Madam' ಸಂಸ್ಥೆಯು ತನ್ನ ಸಿಬ್ಬಂದಿಗಳ ಕುರಿತು ಒಂದು ಸರ್ವೆ ಮಾಡಿದ್ದು, ಸರ್ವೆಯಲ್ಲಿ ತನ್ನ ಸಿಬ್ಬಂದಿಗಳಿಗೆ 'ಕೆಲಸದಲ್ಲಿ ನೀವು ಒತ್ತಡಕ್ಕೊಳಗಾಗುತ್ತಿದ್ದೀರಾ'? ಎಂದು ಪ್ರಶ್ನೆ ಮಾಡಿದೆ. ಈ ವೇಳೆ ಹಲವು ಸಿಬ್ಬಂದಿಗಳು ಈ ಪ್ರಶ್ನೆಗೆ 'ಹೌದು' ಎಂದು ಉತ್ತರ ನೀಡಿದ್ದು, ಅಂತಹ ಸಿಬ್ಬಂದಿಗಳನ್ನು ಸಂಸ್ಥೆ ಕೆಲಸದಿಂದ ವಜಾ ಮಾಡಿದೆ. ಈ ಬಗ್ಗೆ ಸಂಸ್ಥೆ ಸಿಬ್ಬಂದಿಗಳಿಗೆ ಇ-ಮೇಲ್ ಮಾಡಿದ್ದು, ಈ ಇ-ಮೇಲ್ ಸ್ಕ್ರೀನ್ ಶಾಟ್ ವ್ಯಾಪಕ ವೈರಲ್ ಆಗುತ್ತಿದೆ.

ಇ-ಮೇಲ್ ನಲ್ಲೇನಿದೆ?

“ಆತ್ಮೀಯ ತಂಡದ ಸಿಬ್ಬಂದಿಗಳೇ,

ಇತ್ತೀಚೆಗೆ, ಕೆಲಸದಲ್ಲಿನ ಒತ್ತಡದ ಬಗ್ಗೆ ನಿಮ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ನಾವು ಸಮೀಕ್ಷೆಯನ್ನು ನಡೆಸಿದ್ದೆವು. ನಿಮ್ಮಲ್ಲಿ ಹಲವರು ನಿಮ್ಮ ಕಾಳಜಿ ಮತ್ತು ಆತಂಕಗಳನ್ನು ಹಂಚಿಕೊಂಡಿದ್ದೀರಿ, ಅದನ್ನು ನಾವು ಆಳವಾಗಿ ಗೌರವಿಸುತ್ತೇವೆ. ಆರೋಗ್ಯಕರ ಮತ್ತು ಬೆಂಬಲದಾಯಕ ಕೆಲಸದ ವಾತಾವರಣವನ್ನು ಬೆಳೆಸಲು ಬದ್ಧವಾಗಿರುವ ಕಂಪನಿಯಾಗಿ, ನಾವು ನಿಮ್ಮ ಪ್ರತಿಕ್ರಿಯೆಯನ್ನು ಎಚ್ಚರಿಕೆಯಿಂದ ಪರಿಗಣಿಸಿದ್ದೇವೆ. ಕೆಲಸದಲ್ಲಿ ಯಾರೂ ಒತ್ತಡಕ್ಕೆ ಒಳಗಾಗುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು, ಗಮನಾರ್ಹವಾದ ಒತ್ತಡವನ್ನು ಸೂಚಿಸಿದ ಉದ್ಯೋಗಿಗಳನ್ನು ಸಂಸ್ಥೆಯಿಂದ ವಜಾ ಮಾಡಲು ನಿರ್ಧರಿಸಿದ್ದೇವೆ. ಈ ನಿರ್ಧಾರವು ತಕ್ಷಣವೇ ಜಾರಿಗೆ ಬರುತ್ತದೆ ಮತ್ತು ಪ್ರಭಾವಿತ ಉದ್ಯೋಗಿಗಳು ಹೆಚ್ಚಿನ ವಿವರಗಳನ್ನು ಪ್ರತ್ಯೇಕವಾಗಿ ಸ್ವೀಕರಿಸುತ್ತಾರೆ. ನಿಮ್ಮ ಕೊಡುಗೆಗಳಿಗಾಗಿ ಧನ್ಯವಾದಗಳು.

ಶುಭಾಶಯಗಳು,

ಮಾನವ ಸಂಪನ್ಮೂಲ ವ್ಯವಸ್ಥಾಪಕರು,

'Yes Madam'

ಎಂದು 'Yes Madam' ಸಂಸ್ಥೆಯ ಮಾನವಸಂಪನ್ಮೂಲ ವಿಭಾಗದ ಮುಖ್ಯಸ್ಥರು ಸಿಬ್ಬಂದಿಗಳಿಗೆ ಇ-ಮೇಲ್ ಮಾಡಿದ್ದಾರೆ.

ವ್ಯಾಪಕ ವಿರೋಧ

ಇನ್ನು 'Yes Madam' ಸಂಸ್ಥೆಯ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದು, ಉದ್ಯೋಗಿಗಳ ಕಳವಳ ಅತಂಕಗಳನ್ನು ದೂರ ಮಾಡುವ ಬದಲು ಸಂಸ್ಥೆ ಅವರನ್ನೇ ಕೆಲಸದಿಂದ ವಜಾಮಾಡಿರುವುದು ಸರಿಯಲ್ಲ ಎಂದು ಹಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೆಲವರು “ಅತ್ಯಂತ ವಿಲಕ್ಷಣವಾದ ವಜಾ'' ಎಂದು ಟೀಕಿಸಿದ್ದು, ಈ ಕುರಿತ ಸ್ಕ್ರೀನ್ ಶಾಟ್ ಗಳು ವ್ಯಾಪಕ ವೈರಲ್ ಆಗುತ್ತಿವೆ.

ಅಂದಹಾಗೆ ಈ 'Yes Madam' ಸಂಸ್ಥೆಯ ಸಿಬ್ಬಂದಿ ವಜಾ ಪ್ರಕ್ರಿಯೆ ಕುರಿತ ಇ-ಮೇಲ್ ಸ್ಕ್ರೀನ್ ಶಾಟ್ ವೈರಲ್ ಆಗಿರುವ ಕುರಿತು ಈ ವರೆಗೂ ಸಂಸ್ಥೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT