ವಾಣಿಜ್ಯ

ಇಂಡಿಗೋ ವಿಮಾನದಲ್ಲಿ ನೀಡಿದ ಸ್ಯಾಂಡ್‌ವಿಚ್‌ನಲ್ಲಿ ಸ್ಕ್ರೂ ಪತ್ತೆ!

Nagaraja AB

ಬೆಂಗಳೂರು: ಇಂಡಿಗೋ ವಿಮಾನದಲ್ಲಿ ನೀಡಿದ ಸ್ಕ್ರೂ ಪತ್ತೆಯಾಗಿದೆ ಎಂದು ಪ್ರಯಾಣಿಕರೊಬ್ಬರು ಹೇಳಿಕೊಂಡಿದ್ದಾರೆ. ಆದರೆ, ಅವರು ಪ್ರಯಾಣದ ಸಮಯದಲ್ಲಿ ಈ ಸಮಸ್ಯೆಯನ್ನು ತನಗೆ ವರದಿ ಮಾಡಿಲ್ಲ ಎಂದು ವಿಮಾನಯಾನ ಸಂಸ್ಥೆ ಮಂಗಳವಾರ ಹೇಳಿದೆ. ಪ್ರಯಾಣಿಕನು ವಿಮಾನದಿಂದ ಇಳಿದ ನಂತರ ತನ್ನ ಅನುಭವವನ್ನು ಸಾಮಾಜಿಕ ಮಾಧ್ಯಮದಲ್ಲಿ ಸ್ಯಾಂಡ್‌ವಿಚ್‌ನ ಚಿತ್ರದೊಂದಿಗೆ ಹಂಚಿಕೊಂಡಿದ್ದಾನೆ.

"ಫೆಬ್ರವರಿ 1, 2024 ರಂದು ಬೆಂಗಳೂರು-ಚೆನ್ನೈ ನಡುವಿನ 6E-904 ವಿಮಾನದ ಗ್ರಾಹಕರ ತನ್ನ ಅನುಭವವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವುದು ನಮಗೆ ತಿಳಿದಿದೆ. ಆದರೆ, ಪ್ರಯಾಣದ ಸಮಯದಲ್ಲಿನ ಸಮಸ್ಯೆಯನ್ನು ವರದಿ ಮಾಡಲಾಗಿಲ್ಲ ಎಂದು ಇಂಡಿಗೋ ಹೇಳಿಕೆಯಲ್ಲಿ ತಿಳಿಸಿದೆ.

ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ವಿಷಾದಿಸುವುದಾಗಿ ವಿಮಾನಯಾನ ಸಂಸ್ಥೆ ಹೇಳಿದೆ ಆದರೆ ವೈರಲ್ ಆಗುತ್ತಿರುವ ಚಿತ್ರದ ಬಗ್ಗೆ ವಿವರಗಳನ್ನು ನಿರ್ದಿಷ್ಟಪಡಿಸಿಲ್ಲ.  ವಿಮಾನದಲ್ಲಿ ಪ್ರತಿಷ್ಠಿತ ಕ್ಯಾಟರರ್‌ಗಳಿಂದ ಗುಣಮಟ್ಟ ಮತ್ತು ನೈರ್ಮಲ್ಯದಿಂದ ಕೂಡಿದ ಉನ್ನತ ಗುಣಮಟ್ಟದ ಊಟವನ್ನು ಪೂರೈಸುತ್ತೇವೆ. ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ನಾವು ವಿಷಾದಿಸುತ್ತೇವೆ ಎಂದು ಹೇಳಿದೆ. 

ವಿಮಾನದಲ್ಲಿ ಬಡಿಸಿದ ಸ್ಯಾಂಡ್‌ವಿಚ್‌ನಲ್ಲಿ ಹುಳು ಕಂಡುಬಂದ ಕೆಲವು ದಿನಗಳ ನಂತರ ಜನವರಿ 2 ರಂದು, ಆಹಾರ ಸುರಕ್ಷತಾ ನಿಯಂತ್ರಕ ಎಫ್‌ಎಸ್‌ಎಸ್‌ಎಐ ಪ್ರಯಾಣಿಕರಿಗೆ ಅಸುರಕ್ಷಿತ ಆಹಾರವನ್ನು ನೀಡಿದ್ದಕ್ಕಾಗಿ ಇಂಡಿಗೋಗೆ ಶೋಕಾಸ್ ನೋಟಿಸ್ ನೀಡಿತ್ತು.
 

SCROLL FOR NEXT