ವಾಣಿಜ್ಯ

ಪ್ರಯಾಣಿಕರಿಂದ ರನ್ ವೇ ನಲ್ಲಿ ಊಟ: ಇಂಡಿಗೋ ವಿಮಾನ ಸಂಸ್ಥೆಗೆ 1.20 ಕೋಟಿ ರೂ ದಂಡ, ಎಂಐಎಎಲ್ ಗೆ 60 ಲಕ್ಷ!

Srinivas Rao BV

ಮುಂಬೈ: ವಿಮಾನ ಹಾರಾಟ ವಿಳಂಬವಾದ ಕಾರಣ ಪ್ರಯಾಣಿಕರು ರನ್‌ ವೇನಲ್ಲಿ ಕುಳಿತು ಊಟ ಮಾಡಿದ ಪ್ರಕರಣದಲ್ಲಿ ಬಿಸಿಎಎಸ್ ಇಂಡಿಗೋ ವಿಮಾನ ಸಂಸ್ಥೆಗೆ 1.20 ಕೋಟಿ ರೂಪಾಯಿ ದಂಡ ವಿಧಿಸಿದೆ. 

ಬಿಸಿಎಎಸ್ ವೈಮಾನಿಕ ಭದ್ರತಾ ನಿಯಂತ್ರಕ ಸಂಸ್ಥೆಯಾಗಿದ್ದು, ಇಂಡಿಗೋ ವಿಮಾನ ಸಂಸ್ಥೆಯ ಜೊತೆಗೆ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆಡಳಿತ ಮಂಡಳಿಗೆ 60 ಲಕ್ಷ ರೂಪಾಯಿ ದಂಡ ವಿಧಿಸಿದೆ.

ಗೋವಾ-ದೆಹಲಿ ಮಾರ್ಗದ ಇಂಡಿಗೋ ವಿಮಾನ ಹಾರಾಟ ವಿಳಂಬವಾದ ಕಾರಣ ಪ್ರಯಾಣಿಕರು ರನ್‌ ವೇನಲ್ಲಿ ಕುಳಿತು ಊಟ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಪ್ರಕರಣದ ಸಂಬಂಧ ಇಂಡಿಗೋ ಹಾಗೂ ಎಂಐಎಎಲ್ ಗಳಿಗೆ ನಿಯಂತ್ರಕ ಸಂಸ್ಥೆ ಕಾರಣ ಕೇಳಿ ನೊಟೀಸ್ ಜಾರಿಗೊಳಿಸಿತ್ತು.
 
ಇದೇ ವೇಳೆ ಡಿಜಿಸಿಎ ಎಂಐಎಎಲ್ ಗೆ 30 ಲಕ್ಷ ರೂಪಾಯಿ ದಂಡ ವಿಧಿಸಿದೆ. 

SCROLL FOR NEXT