ಸಾಂದರ್ಭಿಕ ಚಿತ್ರ  
ವಾಣಿಜ್ಯ

ದಾಖಲೆ ನಿರ್ಮಿಸಿದ ಸೆನ್ಸೆಕ್ಸ್: ಮೊದಲ ಬಾರಿಗೆ 80,000 ದಾಟಿದ ಸೂಚ್ಯಂಕ

ಷೇರು ಮಾರುಕಟ್ಟೆಯು ಹಿಂದಿನ 10,000 ಅಂಕಗಳನ್ನು ಸೇರಿಸಲು 1.5 ವರ್ಷಗಳನ್ನು ತೆಗೆದುಕೊಂಡಿತು. ಸೆಪ್ಟೆಂಬರ್ 24, 2021 ರಂದು ಸೆನ್ಸೆಕ್ಸ್ 60,000ರ ಗಡಿ ದಾಟಿತ್ತು.

ಮುಂಬೈ: ಷೇರು ಮಾರುಕಟ್ಟೆ ಬುಧವಾರ ವಹಿವಾಟು ಆರಂಭದ ವೇಳೆ ಸಾರ್ವಕಾಲಿಕ ಗರಿಷ್ಠ ದಾಖಲೆ ಮಾಡಿದೆ, ಎಸ್ & ಪಿ ಬಿಎಸ್ಇ ಸೆನ್ಸೆಕ್ಸ್ ಬುಧವಾರ ಮೊದಲ ಬಾರಿಗೆ 80,000 ಗಡಿ ದಾಟಿದೆ. ವಹಿವಾಟಿನ ಮೊದಲ ಮೂವತ್ತು ನಿಮಿಷಗಳ ಅವಧಿಯಲ್ಲಿ 30-ಷೇರು ಸೂಚ್ಯಂಕ ಗರಿಷ್ಠ 80,057.90 ನ್ನು ತಲುಪಿತು. ನಿಫ್ಟಿ 50 ಸೂಚ್ಯಂಕವು 24,294.60 ರ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ.

ಕಳೆದ ವರ್ಷ ಡಿಸೆಂಬರ್ 11, 2023 ರಂದು ಸೆನ್ಸೆಕ್ಸ್ 70,000 ಅಂಕಗಳನ್ನು ಮೊದಲ ಬಾರಿಗೆ ದಾಟಿತ್ತು. ಏಳು ತಿಂಗಳೊಳಗೆ ಮತ್ತೆ 10 ಸಾವಿರ ಗಡಿಯನ್ನು ದಾಟಿ 80 ಸಾವಿರಕ್ಕೆ ಏರಿಕೆಯಾಗಿದೆ. 60,000 ರಿಂದ 70,000 ರವರೆಗಿನ ಷೇರು ಮಾರುಕಟ್ಟೆ ಸೂಚ್ಯಂಕದ ಪಯಣವು ದಾಖಲೆಯಾಗಿದೆ.

ಷೇರು ಮಾರುಕಟ್ಟೆಯು ಹಿಂದಿನ 10,000 ಅಂಕಗಳನ್ನು ಸೇರಿಸಲು 1.5 ವರ್ಷಗಳನ್ನು ತೆಗೆದುಕೊಂಡಿತು. ಸೆಪ್ಟೆಂಬರ್ 24, 2021 ರಂದು ಸೆನ್ಸೆಕ್ಸ್ 60,000ರ ಗಡಿ ದಾಟಿತ್ತು.

ಇನ್ನೊಂದು ಕುತೂಹಲಕಾರಿ ಸಂಗತಿಯೆಂದರೆ, ಈ ಬಾರಿಯ ಸಾರ್ವತ್ರಿಕ ಚುನಾವಣಾ ಫಲಿತಾಂಶದ ದಿನವಾದ ಜೂನ್ 4 ರಂದು ಷೇರು ಸಂವೇದಿ ಸೂಚ್ಯಂಕ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿತ್ತು. 4,390 ಪಾಯಿಂಟ್‌ಗಳ ಅಥವಾ ಶೇಕಡಾ 5.744ರಷ್ಟು ನಷ್ಟದೊಂದಿಗೆ 72,079.05ರಲ್ಲಿ ಕೊನೆಗೊಂಡಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯ ಸರ್ಕಾರಕ್ಕೆ ಮೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ಸಾಧನ ಸಮಾವೇಶ: ಗಿನ್ನೆಸ್ ದಾಖಲೆಗೆ ತುಮಕೂರು ಸಜ್ಜು!

Gautam Adaniಗೆ ಬಿಗ್ ರಿಲೀಫ್: ಎಲ್ಲ ಪ್ರಕರಣಗಳ ವಿಚಾರಣೆ ಶಾಶ್ವತವಾಗಿ ಕೈ ಬಿಟ್ಟ ಅಮೆರಿಕ: ವರದಿ

ರಷ್ಯಾ ಮೇಲೆ ಉಕ್ರೇನ್ ಡ್ರೋನ್ ದಾಳಿ: ಒಡಿಶಾ ಮೂಲದ ವ್ಯಕ್ತಿ ಸಾವು, ಇಬ್ಬರಿಗೆ ಗಾಯ

IPL 2026: ಸ್ಟಂಪೌಟ್ ಮಾಡಿದ Sanju Samson ವಿರುದ್ಧ Klaasen ಆಕ್ರೋಶ, ಮೈದಾನದಲ್ಲೇ ಹೈಡ್ರಾಮಾ, ಆಗಿದ್ದೇನು?

ಸಿಎಂ ಸುವೇಂದು ಅಧಿಕಾರಿ ಪಿಎ ಕೊಲೆ ಕೇಸ್: ಪ್ರಮುಖ ಶೂಟರ್ ರಾಜ್‌ಕುಮಾರ್ ಸಿಂಗ್ ಬಂಧಿಸಿದ CBI

SCROLL FOR NEXT