ಸಾಂದರ್ಭಿಕ ಚಿತ್ರ 
ವಾಣಿಜ್ಯ

2023-24 ಆರ್ಥಿಕ ವರ್ಷ ದೇಶದಲ್ಲಿ 46.7 ಮಿಲಿಯನ್ ಉದ್ಯೋಗ ಸೃಷ್ಟಿ, ಶೇ.6 ರಷ್ಟು ಹೆಚ್ಚಳ

2022-23ರಲ್ಲಿ 596.7 ಮಿಲಿಯನ್ ಇದ್ದ ಉದ್ಯೋಗಿಗಳ ಸಂಖ್ಯೆ 2024ರ ಮಾರ್ಚ್ 31ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ 643.3 ಮಿಲಿಯನ್​​ಗೆ ಏರಿಕೆಯಾಗಿದೆ.

ಮುಂಬೈ: ಇತ್ತೀಚಿನ ರಿಸರ್ವ್ ಬ್ಯಾಂಕ್ ಅಂಕಿ-ಅಂಶಗಳ ಪ್ರಕಾರ, 2024 ನೇ ಸಾಲಿನ ಹಣಕಾಸು ವರ್ಷದಲ್ಲಿ ದೇಶದಲ್ಲಿ 46.7 ಮಿಲಿಯನ್ ಹೊಸ ಉದ್ಯೋಗಗಳು ಸೃಷ್ಟಿಯಾಗಿದ್ದು, ಇದು ಕಳದೆ ಹಣಕಾಸು ವರ್ಷಕ್ಕಿಂತ ಶೇ.6 ರಷ್ಟು ಏರಿಕೆಯಾಗಿದೆ. 2022-23ರಲ್ಲಿ 596.7 ಮಿಲಿಯನ್ ಇದ್ದ ಉದ್ಯೋಗಿಗಳ ಸಂಖ್ಯೆ 2024ರ ಮಾರ್ಚ್ 31ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ 643.3 ಮಿಲಿಯನ್​​ಗೆ ಏರಿಕೆಯಾಗಿದೆ.

CMIE ಯಂತಹ ಖಾಸಗಿ ಸಮೀಕ್ಷೆಗಳು ಹೆಚ್ಚಿನ ನಿರುದ್ಯೋಗ ದರವನ್ನು ಸೂಚಿಸುವ ಅಂಕಿಅಂಶಗಳಿಗಿಂತ ಈ ಅಂದಾಜು ಹೆಚ್ಚು ಎಂದು ಆರ್‌ಬಿಐ ಸೋಮವಾರ ಹೇಳಿದೆ.

"ಈ ಮುಂಚೆ, ಉದ್ಯೋಗ ಉತ್ಪಾದನೆಯು FY23 ರಲ್ಲಿ 3.2% ಗೆ ಹೋಲಿಸಿದರೆ FY24 ರಲ್ಲಿ ಶೇ. 6 ರಷ್ಟು ಅಥವಾ 46.7 ಮಿಲಿಯನ್ ಹೆಚ್ಚಾಗಿದೆ" ಎಂದು 'ಉದ್ಯಮ ಮಟ್ಟದ ಉತ್ಪಾದಕತೆ ಮತ್ತು ಉದ್ಯೋಗ ಮಾಪಕ' ದತ್ತಾಂಶ ತಿಳಿಸಿದೆ.

ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ ಆರ್​ಬಿಐ ಇದೇ ಮೊದಲ ಬಾರಿಗೆ ಹಣಕಾಸು ವರ್ಷ 2024 ರಲ್ಲಿ ಒಟ್ಟು ಆರ್ಥಿಕತೆಯ ಉತ್ಪಾದಕತೆಯ ತಾತ್ಕಾಲಿಕ ಅಂದಾಜನ್ನು ಲೆಕ್ಕಾಚಾರ ಮಾಡಿದೆ.

ಇದು ಕಾರ್ಮಿಕರ ಶಿಕ್ಷಣ ಮಟ್ಟವನ್ನು ಆಧರಿಸಿ ಆರ್ಥಿಕತೆಯಲ್ಲಿ ಕಾರ್ಮಿಕರ ಪಾತ್ರವನ್ನು ಪ್ರತಿಬಿಂಬಿಸುತ್ತದೆ. ಎಲ್ಲಾ ರೀತಿಯ ಶಿಕ್ಷಣ ಪಡೆದವರು ಮತ್ತು ಎಲ್ಲ ವಯೋಮಾನಗಳ ಅಡಿಯಲ್ಲಿ ಉದ್ಯೋಗದ ಪ್ರಮಾಣ ಹೆಚ್ಚಾಗಿರುವುದನ್ನು ಅಂಕಿ ಅಂಶಗಳು ತೋರಿಸಿವೆ. ಇನ್ನು 2018ರಲ್ಲಿ ಶೇ 2.2ರಷ್ಟಿದ್ದ ನಿರುದ್ಯೋಗ ಪ್ರಮಾಣ 2024ರಲ್ಲಿ ಶೇ 1.4ಕ್ಕೆ ಇಳಿದಿದೆ.

ಬ್ರೋಕರೇಜ್ ಸಿಟಿಗ್ರೂಪ್‌ ವರದಿಯ ಒಂದು ವಾರದೊಳಗೆ ಈ ಡೇಟಾ ಬಂದಿದ್ದು, ಇದು ಶೇ. 7 ರಷ್ಟು GDP ಬೆಳವಣಿಗೆಯು ವರ್ಷಕ್ಕೆ 8 ರಿಂದ 9 ಮಿಲಿಯನ್ ಉದ್ಯೋಗಗಳನ್ನು ಮಾತ್ರ ಸೃಷ್ಟಿಸುತ್ತದೆ ಎಂದು ಹೇಳಿದೆ.

ಇನ್ನು ಹಲವು ರಾಜಕೀಯ ವಿಶ್ಲೇಷಕರು ಮತ್ತು ಅರ್ಥಶಾಸ್ತ್ರಜ್ಞರು ಉದ್ಯೋಗದ ಕೊರತೆ ಮತ್ತು ಹೆಚ್ಚಿನ ಹಣದುಬ್ಬರವನ್ನು ದೂಷಿಸಿದ್ದಾರೆ. ಇದೀಗ ಮುಕ್ತಾಯಗೊಂಡ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು 400ಕ್ಕೂ ಹೆಚ್ಚು ಸ್ಥಾನಗಳನ್ನು ಬಯಸಿ ಚುನಾವಣೆಗೆ ಹೋದರೂ ಬಿಜೆಪಿಗೆ ಸ್ಪಷ್ಟ ಜನಾದೇಶ ಸಿಗದಿರಲು ಇದು ಪ್ರಮುಖ ಕಾರಣವಾಗಿದೆ ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT