ಮುಂಬೈ: ಬಿಲಿಯನೇರ್ ಗೌತಮ್ ಅದಾನಿ ಏಷ್ಯಾದ ಅತ್ಯಂತ ಶ್ರೀಮಂತ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ರಿಲಾಯನ್ಸ್ ಇಂಡಸ್ಟ್ರೀಸ್ ನ ಅಧ್ಯಕ್ಷ ಮುಖೇಶ್ ಅಂಬಾನಿ ಅವರನ್ನು ಹಿಂದಿಕ್ಕಿ ಅದಾನಿ ಏಷ್ಯಾದ ನಂ.1 ಶ್ರೀಮಂತರಾಗಿದ್ದಾರೆ.
ಬ್ಲೂಮ್ ಬರ್ಗ್ ಬಿಲಿಯನೇರ್ಸ್ ಸೂಚ್ಯಂಕ ಬಿಡುಗಡೆಯಾಗಿದ್ದು, ಶನಿವಾರ ಸಂಜೆ 6 ಗಂಟೆ ವರೆಗಿನ ಮಾಹಿತಿಯ ಪ್ರಕಾರ, ಅದಾನಿ 111 ಬಿಲಿಯನ್ ಡಾಲರ್ ನಷ್ಟು ನೆಟ್ ವರ್ತ್ ಹೊಂದಿದ್ದು, ಅಂಬಾನಿ ಬಳಿ 109 ಬಿಲಿಯನ್ ಡಾಲರ್ ನ ಒಡೆಯರಾಗಿದ್ದಾರೆ.
ಅದಾನಿ ಸಮೂಹದ ಸ್ಟಾಕ್ಸ್ ನಲ್ಲಿ ಗಣನೀಯ ಪ್ರಮಾಣದ ಏರಿಕೆಯಾಗಿರುವುದು ಅಂಬಾನಿಯನ್ನು ಅದಾನಿ ಹಿಂದಿಕ್ಕುವುದಕ್ಕೆ ಕಾರಣವಾಗಿರುವ ಅಂಶವಾಗಿದೆ. ಜೆಫರೀಸ್ ನ ವರದಿಯಲ್ಲಿ ಸಂಸ್ಥೆ ತೀವ್ರಗತಿಯಲ್ಲಿ ವಿಸ್ತರಣೆ ಯೋಜನೆಗಳನ್ನು ಹೊಂದಿರುವುದು ಸ್ಪಷ್ಟವಾಗುತ್ತಿದ್ದಂತೆಯೇ ಅದಾನಿ ಸಮೂಹ ಸಂಸ್ಥೆಗಳ ಷೇರುಗಳು ಏರಿಕೆಯಾಗಿವೆ.
ಮಾರುಕಟ್ಟೆಯು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದು ಅದಾನಿ ಸಮೂಹದ ಷೇರುಗಳು ಹೂಡಿಕೆದಾರರ ಸಂಪತ್ತನ್ನು ₹ 1.23 ಲಕ್ಷ ಕೋಟಿಗಳಷ್ಟು ಸೇರಿಸಿ ಒಟ್ಟು ಮಾರುಕಟ್ಟೆ ಬಂಡವಾಳ ಇಂಟ್ರಾಡೇಗೆ ₹ 17.94 ಲಕ್ಷ ಕೋಟಿಗಳಷ್ಟಾಗಿದೆ. ವಹಿವಾಟಿನ ಮುಕ್ತಾಯದ ವೇಳೆಗೆ, ಮಾರುಕಟ್ಟೆ ಬಂಡವಾಳ ₹ 17.51 ಲಕ್ಷ ಕೋಟಿಯಷ್ಟಿದೆ.
ಈ ವಾರದ ಆರಂಭದಲ್ಲಿ, ಗೌತಮ್ ಅದಾನಿ ಅದಾನಿ ಗ್ರೂಪ್‌ನ ಭವಿಷ್ಯದ ಬಗ್ಗೆ ಆಶಾವಾದವನ್ನು ವ್ಯಕ್ತಪಡಿಸಿದ್ದರು.